Advertisment

ಸೆಂಚುರಿ ಬಾರಿಸಿದ ಟೊಮೆಟೊ! ಬೆಲೆ ಏರಿಸಿಕೊಂಡು ಗ್ರಾಹಕರಿಗೆ ಶಾಕ್​ ಕೊಟ್ಟ ಕೆಂಪು ಸುಂದರಿ

author-image
AS Harshith
Updated On
ಪೆಟ್ರೋಲ್​​, ಡೀಸೆಲ್​​, ಬಿಯರ್​​, ಬಿರಿಯಾನಿಗಿಂತ ದುಬಾರಿಯಾದ ಟೊಮ್ಯಾಟೋ; 1 ಕೆಜಿಗೆ ಎಷ್ಟು..?
Advertisment
  • ದಿಢೀರ್​ ಗಗನಕ್ಕೇರಿ ಕುಳಿತ ಕೆಂಪು ಸುಂದರಿ
  • ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾದ ಗ್ರಾಹಕರು
  • ಸೂಪರ್‌ ಮಾರ್ಕೆಟ್​ಗಳಲ್ಲಿ 1 ಕೆಜಿ ಟೊಮೆಟೊ ಎಷ್ಟು ಬೆಲೆ ಗೊತ್ತಾ?

ಬೆಂಗಳೂರು: ಈಗಾಗಲೇ ದಿನಬಳಕೆ ವಸ್ತುಗಳ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಟೊಮೆಟೊ ಶಾಕ್​ ನೀಡಿದೆ. ಕೆಂಪು ಸುಂದರಿ ಬೆಲೆ ಏರಿಸಿಕೊಂಡು ಗಗನಕ್ಕೇರಿದ್ದಾಳೆ. ಇದರಿಂದಾಗಿ ಸಾಮಾನ್ಯ ಜನರು ಸಪ್ಪೆಯಾಗಿದ್ದಾರೆ.

Advertisment

ಟೊಮೆಟೊ ತನ್ನ ಬೆಲೆಯಿಂದ ಸೆಂಚುರಿ ಬಾರಿಸಿದೆ. ಒಂದೇ ಸಾರಿ 50 ರೂಪಾಯಿ ದಿಢೀರ್ ಏರಿಕೆಯಾಗಿದೆ. ಇದರಿಂದಾಗಿ ಜನರು ಕೆಜಿ ಟೊಮೆಟೊ ಖರೀದಿಸುವಲ್ಲಿ ಈಗ ಕಾಲು ಕೆಜಿ ಖರೀದಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲೊಂದು ಹಾರುವ ಕೋಣೆ.. ವಿಶ್ವ ದಾಖಲೆ ಪುಟದಲ್ಲಿ ಕನ್ನಡಿಗನ ಮನೆ!

ಇನ್ನು ಬಿತ್ತನೆಗೆ ಮಳೆ ಉಪಯೋಗವಾಗಿದ್ದು, ತರಕಾರಿಗಳ ಬೆಲೆ ಮಾತ್ರ ಗಗನಕ್ಕೇರುವಂತೆ ಮಾಡಿದೆ. ಮಳೆ ಕಾರಣ ಅಷ್ಟೇ ಅಲ್ಲ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೂ ಹೆಚ್ಚಾಗಿದ್ದು, ಸಾಗಣೆ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ.

Advertisment

publive-image

ಇದನ್ನೂ ಓದಿ: ಸರ್ಕಾರಕ್ಕೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್​.. ಮೀಸಲಾತಿಯನ್ನು ಶೇಕಡಾ 65ಕ್ಕೆ ಹೆಚ್ಚಿಸುವ ಆದೇಶ ರದ್ದು..!

ಬೆಂಗಳೂರಿನ ಸೂಪರ್‌ ಮಾರ್ಕೆಟ್​ಗಳಲ್ಲಿ ಒಂದು ಕೆಜಿ ಟೊಮೆಟೊ ಬೆಲೆ 150 ರೂಪಾಯಿಗೆ ಏರಿದೆ. ಕಾಲು ಕೆಜಿ ಟೊಮೆಟೊ ಬೆಲೆ 20-30 ರೂಪಾಯಿಯಾಗಿದೆ. ಅರ್ಧ ಕೆಜಿಗೆ ಟೊಮೆಟೊಗೆ 65-70 ರೂಪಾಯಿಯಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಆಟೋ ಮೇಲೆ ಹರಿದ ಕ್ರೇನ್.. ಡ್ರೈವರ್​ ಸಾವು

ಹಾಗೆಯೇ, ಮಾರುಕಟ್ಟೆಗಳಲ್ಲಿ 80- 90 ರೂಪಾಯಿ, ತರಕಾರಿ ಅಂಗಡಿಯಲ್ಲಿ 100 - 120 ರೂಪಾಯಿಗೆ ಒಂದು ಕೆ.ಜಿ ಟೊಮೆಟೊ ಸಿಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment