/newsfirstlive-kannada/media/post_attachments/wp-content/uploads/2025/06/BU-1.jpg)
ಬೆಂಗಳೂರು: ಪ್ರತಿಷ್ಠಿತ ವಿಶ್ವವಿದ್ಯಾಲಯ ಎಂದೇ ಖ್ಯಾತಿಯಾಗಿರೋ ಬೆಂಗಳೂರು ವಿವಿಯ ಇತಿಹಾಸದಲ್ಲೇ ಮೊದಲ ಬಾರಿಗೆ BCA Practical Allotment ಅನ್ನು ಕಂಪ್ಲೀಟ್ ಡಿಜಿಟಲೀಕರಣ ಮಾಡಲಾಗಿದೆ. ಈ ರೀತಿಯ ಪ್ರಯೋಗ ಇದುವರೆಗೂ ಕರ್ನಾಟಕದ ಯಾವುದೇ ವಿವಿಯಲ್ಲೂ ನಡೆದಿಲ್ಲ ಅನ್ನೋದು ವಿಶೇಷ. ಅದರಲ್ಲೂ ಜಿಯೋಟ್ಯಾಗ್ಡ್ ಫೋಟೋಗ್ರಾಫ್ಸ್ ಅನ್ನೋ ಹೊಸ ಫೀಚರ್ ಅಳವಡಿಸಿಕೊಂಡಿದ್ದು, ಇದು ಶೈಕ್ಷಣಿಕ ಪಾರದರ್ಶಕತೆಯನ್ನು ಹೆಚ್ಚಿಸಿದೆ.
ಇನ್ನು, ಬೆಂಗಳೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸೀನಿಯರ್ ಪ್ರೊಫೆಸರ್ ಡಾ. ಮುರಳೀಧರ ಬಿ.ಎಲ್ ಅವರು ವಿವಿಯ ಹಳೆಯ ವಿದ್ಯಾರ್ಥಿ ಚಿಟ್ಟಿ ಬಾಬು ಎಂಬುವರ ಸಹಕಾರದೊಂದಿಗೆ ಈ ಸಾಫ್ಟ್ವೇರ್ ಡೆವಲಪ್ ಮಾಡಿದ್ದಾರೆ.
ಬೆಂಗಳೂರು ವಿವಿ ಅತ್ಯಂತ ದೊಡ್ಡ ಯೂನಿವರ್ಸಿಟಿ. ಇನ್ನೂ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿರೋ ದಾಬಸ್ಪೇಟೆ, ನೆಲಮಂಗಲ, ಮಾಗಡಿ, ರಾಮನಗರ, ಚನ್ನಪಟ್ಟಣ, ಬಿಡದಿ, ಕನಕಪುರ, ಜಿಗಣಿ, ಬನ್ನೇರುಘಟ್ಟ, ಚಂದಾಪುರ, HSR ಲೇಔಟ್, ಹೆಬ್ಬಾಳ, ನಾಗಸಂದ್ರ ಹೀಗೆ ಹಲವು ಪ್ರದೇಶಗಳಲ್ಲಿರೋ ಕಾಲೇಜುಗಳು ಬೆಂಗಳೂರು ವಿವಿಗೆ ಸೇರುತ್ತವೆ. 128 ಕಾಲೇಜುಗಳಿದ್ದು, ವರ್ಷಕ್ಕೆ 9 ಬಾರಿ ಪ್ರಾಕ್ಟಿಕಲ್ ಎಕ್ಸಾಂ ನಡೆಸಬೇಕಿತ್ತು. ಸುಮಾರು 15,500 BCA ವಿದ್ಯಾರ್ಥಿಗಳಿದ್ದಾರೆ. ಎಲ್ಲರಿಗೂ ಒಟ್ಟಿಗೆ ಪ್ರಾಕ್ಟಿಕಲ್ ಎಕ್ಸಾಂ ಕಂಡಕ್ಟ್ ಮಾಡಲು ಮ್ಯಾನ್ ಪವರ್ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಹೀಗಾಗಿ ಹೊಸ ಸಾಫ್ಟ್ವೇರ್ ಡೆವಲಪ್ ಮಾಡಿ ಕಂಪ್ಲೀಟ್ BCA Practical ಅಲಾಟ್ಮೆಂಟ್ ಡಿಜಿಟಲೈಜ್ ಮಾಡಲಾಗಿದೆ.
ಇಷ್ಟೇ ಅಲ್ಲ ಈ ಕಾರ್ಯಕ್ಕೆ ಗೆಸ್ಟ್ ಫ್ಯಾಕಲ್ಟಿಗಳಾದ ಪವಿತ್ರಾ, ಕರಣ್ ಮತ್ತು ರೀಸರ್ಚ್ ಸ್ಕಾಲರ್ಸ್ ಆದ ಮಾಯ ಮತ್ತು ಸರಳ ಅವರು ಕೂಡ ಕೈ ಜೋಡಿಸಿದ್ದಾರೆ. ಈ ಸಾಫ್ಟ್ವೇರ್ ಅನ್ನು ಬೆಂಗಳೂರು ವಿವಿಗೆ ಸೇರೋ ಎಲ್ಲಾ ಕಾಲೇಜುಗಳಲ್ಲೂ ಇಂಪ್ಲೀಮೆಂಟ್ ಮಾಡಿ ಎಂದು ಬೆಂಗಳೂರು ವಿವಿ ಉಪಕುಲಪತಿಗಳಿಗೆ ಪ್ರೊಫೆಸರ್ ಡಾ. ಮುರಳೀಧರ ಬಿ.ಎಲ್ ಅವರು ಪತ್ರ ಬರೆದಿದ್ದಾರೆ. ಇದು ಶೈಕ್ಷಣಿಕ ಪಾರದರ್ಶಕತೆಯನ್ನು ಹೆಚ್ಚಿಸಲಿದೆ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ