newsfirstkannada.com

ಜಲಮಂಡಳಿ ಪ್ಲಾನ್​ಗೆ ಸಿಲಿಕಾನ್​ ಸಿಟಿ ಮಂದಿ ಶಾಕ್​.. ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತಕ್ಕೆ ನಿರ್ಧಾರ!

Share :

Published March 13, 2024 at 6:26am

    1.40 ಕೋಟಿ ಜನಸಂಖ್ಯೆಗೆ ನೀರು ಒದಗಿಸೋದು ಸವಾಲು

    ಒಂದು ಮಹತ್ವದ ನಿರ್ಧಾರಕ್ಕೆ ಬಂದ ಜಲಮಂಡಳಿ

    ಮಾ.15 ರಿಂದ ಹಂತಹಂತವಾಗಿ ಕಾವೇರಿ ನೀರಲ್ಲಿ ಕಡಿತ

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ದಿನೇ ದಿನೇ ನೀರಿನ ಕೊರತೆ ಹೆಚ್ಚಾಗ್ತಿದ್ದು ಪಟ್ಟಣದ ಮಂದಿ ಬಿಸಿಲ ಧಗೆಯ ಮಧ್ಯೆ ಬಳಲಿ ಬೆಂಡಾಗ್ತಿದ್ದಾರೆ. ಈ ಮಧ್ಯೆ ನೀರಿನ ಕೊರತೆ ನೀಗಿಸಲು ಜಲಮಂಡಳಿ ಮಾಡಿದ ಪ್ಲಾನ್​ ಜನರಿಗೆ ಶಾಕ್ ಕೊಟ್ಟಿದೆ.

ನೀರಿಲ್ಲ.. ನೀರಿಲ್ಲ.. ಸಿಲಿಕಾನ್ ಸಿಟಿಯಲ್ಲಿ ನೀರಿಲ್ಲ. ಈ ಮಾತು ನಗರದ ಗಲ್ಲಿ ಗಲ್ಲಿಯಲ್ಲೂ ಕೇಳಿಸ್ತಿದೆ. ಜನರು ಜೀವಜಲಕ್ಕಾಗಿ ನಿತ್ಯ ಪರದಾಡ್ತಿದ್ದಾರೆ. ಈ ಮಧ್ಯೆ ಜಲಮಂಡಳಿ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ನೀರಿನ ಪೂರೈಕೆಯಲ್ಲಿ ಶೇ 20ರಷ್ಟು ಕಡಿತಕ್ಕೆ ಜಲಮಂಡಳಿ ನಿರ್ಧಾರ

ಬೆಂಗಳೂರಿನಲ್ಲಿ ಬೃಹತ್​ ಪ್ರಮಾಣದ ನೀರಿನ ಸಂಪರ್ಕ ಪಡೆದಿರುವವರ ಸಂಖ್ಯೆ 3 ಲಕ್ಷ ಇದ್ದು, ಏಪ್ರಿಲ್​ 1 ರಿಂದ ಶೇಕಡ 20 ರಷ್ಟು ನೀರನ್ನ ಸಂಪೂರ್ಣವಾಗಿ ಕಡಿತಗೊಳಿಸಲು BWSSB ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಬೃಹತ್ ಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರೊಂದಿಗೆ ಮಂಡಳಿಯು ಸಭೆ ನಡೆಸಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.

ನೀರಿನ ಶಾಕ್!

ಇದೀಗ ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 1.40 ಕೋಟಿ ಜನಸಂಖ್ಯೆಯಿದ್ದು, ನೀರು ಒದಗಿಸುವುದು ಸವಾಲಾಗಿ ಪರಿಣಮಿಸಿದೆ.. ಹೀಗಾಗಿ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇಕಡ 20 ರಷ್ಟು ನೀರನ್ನ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಮಾರ್ಚ್​ 15 ರಿಂದ ಹಂತಹಂತವಾಗಿ ಕಾವೇರಿ ನೀರನ್ನ ಕಡಿತಗೊಳಿಸಲಾಗುವುದು. ಏಪ್ರಿಲ್ 1ರಿಂದ ಶೇಕಡ 20ರಷ್ಟು ನೀರನ್ನ ಸಂಪೂರ್ಣವಾಗಿ ಕಡಿತಗೊಳಿಸಲು ಮಂಡಳಿ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಗ್ರಾಹಕರು ಕೈಜೋಡಿಸಬೇಕು ಎಂದು ಬಿಡ್ಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷ ಡಾ. ವಿ.ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

ಕುಡಿಯುವ ನೀರನ್ನ ಈಜುಕೊಳಕ್ಕೆ ಬಳಸಿದ್ರೇ ರೂ. 5000 ದಂಡ

ಈ ಹಿಂದೆಯೇ ಕಾರು ವಾಷಿಂಗ್, ಆಕರ್ಷಕ ಕಾರಂಜಿ ಸೇರಿದಂತೆ ಇತರೆ ಕೆಲಸಗಳಿಗೆ ಕುಡಿಯುವ ನೀರನ್ನ ಬಳಸದಂತೆ ಸೂಚನೆ ಕೊಟ್ಟಿದ್ದ ಜಲಮಂಡಳಿ, ಇದೀಗ ಕುಡಿಯೋ ನೀರನ್ನ ಈಜುಕೊಳಕ್ಕೆ ಬಳಸದಂತೆ ಆದೇಶ ಕೊಟ್ಟಿದೆ. ಒಂದ್ವೇಳೆ ನಿಯಮ ಮೀರಿದ್ರೆ 5 ಸಾವಿರ ದಂಡ ಹಾಕಲಿದೆ. ಸಾರ್ವಜನಿಕವಾಗಿ ನಿಯಮ ಉಲ್ಲಂಘನೆ ಕಂಡುಬಂದ್ರೆ, 1916 ನಂಬರ್​ಗೆ ಕಾಲ್​ ಮಾಡಿ ದೂರು ಸಲ್ಲಿಸಬಹುದಾಗಿದೆ. ರಾಜ್ಯ & ರಾಷ್ಟ್ರ ಮಟ್ಟದ ಕ್ರೀಡೆಗೆ ಈ ಆದೇಶ ಅನ್ವಯವಾಗಲ್ಲ ಎಂದು ತಿಳಿಸಿದೆ.

ಅದೇನೆ ಹೇಳಿ. ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಉದ್ಭವಿಸ್ತಿರುವ ಜೀವಜಲ ಕೊರತೆ ನಗರದ ಮಂದಿಯಲ್ಲಿ ಆತಂಕ ಉಂಟುಮಾಡ್ತಿದೆ. ಹೀಗಾಗಿ, ಆದಷ್ಟು ನೀರನ್ನ ಮಿತವಾಗಿ ಬಳಸಿದ್ರೆ ಉತ್ತಮ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಲಮಂಡಳಿ ಪ್ಲಾನ್​ಗೆ ಸಿಲಿಕಾನ್​ ಸಿಟಿ ಮಂದಿ ಶಾಕ್​.. ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತಕ್ಕೆ ನಿರ್ಧಾರ!

https://newsfirstlive.com/wp-content/uploads/2024/02/water-problem-3.jpg

Load More