ಕರೆ ಸ್ವೀಕರಿಸೋ​ ಮುನ್ನ ಎಚ್ಚರ.. ಬರೋಬ್ಬರಿ 9 ಗಂಟೆ ಮಹಿಳೆ ಜತೆ ವಿಡಿಯೋ ಕಾಲ್​ನಲ್ಲಿದ್ದ ವಂಚಕ.. ಮಾಡಿದ್ದೇನು?

author-image
Veena Gangani
Updated On
ಕರೆ ಸ್ವೀಕರಿಸೋ​ ಮುನ್ನ ಎಚ್ಚರ.. ಬರೋಬ್ಬರಿ 9 ಗಂಟೆ ಮಹಿಳೆ ಜತೆ ವಿಡಿಯೋ ಕಾಲ್​ನಲ್ಲಿದ್ದ ವಂಚಕ.. ಮಾಡಿದ್ದೇನು?
Advertisment
  • ಮಹಿಳೆಯರ ಪಾಲಿಗೆ ದುಶ್ಯಾಸನನೂ ಆದ ಸೈಬರ್​ ವಂಚಕ
  • ಮಹಿಳೆಯ ನಗ್ನ ವಿಡಿಯೋವನ್ನ ರೇಕಾರ್ಡ್​ ಮಾಡಿ ಬೆದರಿಕೆ
  • ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ಮಹಿಳೆಯ ದೂರು

ಮೋಸ ಹೋಗೋರು ಇರೋವೆರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ. ಆನ್​ಲೈನ್​ ಪ್ರಪಂಚದಲ್ಲಿ ಸುಲಭವಾಗಿ ಸಿಗೋ ಕೆಲ ಸೌಲಭ್ಯಗಳೇ ಮೋಸದ ಹಾದಿಯಲ್ಲಿ ಮೆಟ್ಟಿಲುಗಳಾಗಿವೆ. ಡಿಜಿಟಲ್​ ಅರೆಸ್ಟ್ ಅನ್ನೋ ಬಲೆ ಬೀಸಿದ ಖದೀಮನೊಬ್ಬ ಮೆಡಿಕಲ್ ಚೆಕ್​ ಅಪ್​ ಅನ್ನೋ ಹೆಸರಲ್ಲಿ ಮಹಿಳೆಯರ ವಿವಸ್ತ್ರಗೊಳಿಸಿ ಮಂಕುಬೂದಿ ಎರಚಿದ್ದಾನೆ. ಸೈಬ‌ರ್ ಅಪರಾಧಿಗಳು ಅದೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅನ್ನೋದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ.. ಸೈಬರ್​ ವಂಚಕರ ಈ ಮೋಸದ ಜಾಲದ ಬಗ್ಗೆ ಕೇಳಿದ್ರೆ ಎಂತವರೂ ಒಮ್ಮೆ ಶಾಕ್ ಆಗ್ತಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ

publive-image

ಥೈಲ್ಯಾಂಡ್‌ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ರು. ಜುಲೈ 17 ರಂದು ಬೆಳಿಗ್ಗೆ 11 ಗಂಟೆಗೆ ಮಹಿಳೆಗೆ 8856062795 ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನ ಮುಂಬೈನ ಕೊಲಾಬಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನೀವು ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಜೊತೆ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದೀರಾ ಅಂತಾ ಮಹಿಳೆಗೆ ತಿಳಿಸಿದ್ದ. ಅಲ್ಲದೇ ಮಾನವ ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿದ್ದೀರಾ ಅಂತ ಬೆದರಿಸಿದ್ದ. ಇದರಿಂದ ಆಘಾತಕ್ಕೊಳಗಾದ ಮಹಿಳೆ, ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ರು. ಆದ್ರೂ ಆತ ಮತ್ತೆ ಕರೆ ಮಾಡಿ ಮಹಿಳೆ ಬಳಸುತ್ತಿದ್ದ ಡೆಬಿಟ್ ಕಾರ್ಡ್‌ ವಿವರಗಳನ್ನ ಹಂಚಿಕೊಂಡು ಆಕೆಯನ್ನ ಅರೆಸ್ಟ್​ ಮಾಡೋದಾಗಿ ಹೇಳಿ ಬೆದರಿಸಿದ್ದ. ಈ ವೇಳೆ ಆತ ನಿಜವಾದ ಪೊಲೀಸ್ ಅಧಿಕಾರಿಯೇ ಇರ್ಬೇಕು ಅಂತ ನಂಬಿದ ಮಹಿಳೆ ತನಗೆ ಅರಿವೇ ಇಲ್ಲದೇ ಮೊಸ ಹೋಗಿದ್ದಾಳೆ. ತನಗೆ ಕರೆ ಮಾಡಿದ ವ್ಯಕ್ತಿ ಸೈಬರ್​ ಪೊಲೀಸ್​ ಅಧಿಕಾರಿಯೇ ಅಂತ ನಂಬಿದ ಮಹಿಳೆ ಬಳಿಕ ಆತನ ಮೋಸ ಬಲೆಗೆ ಬಿದ್ದಿದ್ಲು.

publive-image

ಮಹಿಳೆಯನ್ನ ಮತ್ತಷ್ಟು ವಂಚಿಸಲು, ವಂಚಕರು ಸಿಬಿಐ ಅಧಿಕಾರಿಗಳ ಸಂಪರ್ಕ ಕಲ್ಪಿಸುವುದಾಗಿ ಹೇಳಿಕೊಂಡು ವೀಡಿಯೊ ಕರೆ ಮಾಡಿದ್ರು. ವಂಚಕರು ಮಹಿಳೆಯರಿಗೆ ಮನೆಯಲ್ಲಿ ಡಿಜಿಟಲ್ ಬಂಧನದಲ್ಲಿಡಬೇಕು ಮತ್ತು 24 ಗಂಟೆಗಳ ಕಾಲ ವಾಟ್ಸಾಪ್ ವೀಡಿಯೊ ಕರೆಯಲ್ಲಿ ಇರಬೇಕೆಂದು ತಿಳಿಸಿದ್ರು. ಅಲ್ಲದೇ ಮಹಿಳೆ ಖಾತೆಯಲ್ಲಿದ್ದ 58,447 ರೂ.ಗಳನ್ನ ಸಹ ಖದೀಮ ವಾರ್ಗಾಯಿಸಿಕೊಂಡಿದ್ದ. ಇಲ್ಲಿಗೆ ಮುಗಿಯದ ಖದೀಮನ ಕಳ್ಳಾಟ ಬಳಿಕ ವೈದ್ಯಕೀಯ ಪರೀಕ್ಷೆ ಹಾದಿಹಿಡಿದಿತ್ತು. ಮಹಿಳೆ ಖಾತೆಯಲ್ಲಿದ್ದ 58 ಸಾವಿರ ಹಣವನ್ನ ಪಡೆದ ನಂತರ, ವಂಚಕರು ಕ್ಲಿಯರೆನ್ಸ್ ಪಡೆಯಬೇಕು ಇದಕ್ಕಾಗಿ ಆನ್‌ಲೈನ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಎಂದಿದ್ರು. ಇದಕ್ಕಾಗಿ ಮಹಿಳೆಯನ್ನ ಕ್ಯಾಮೆರಾ ಮುಂದೆ ನಗ್ನಗೊಳ್ಳುವಂತೆ ತಿಳಿಸಿ ದೇಹದ ಮೇಲಿದ್ದ ಮಚ್ಚೆಗಳನ್ನ ತೋರಿಸುವಂತೆ ಹೇಳಿದ್ದ. ಮೋಸದ ಅರಿವೇ ಇಲ್ಲದ ಮಹಿಳೆಯರು ವಂಚಕ ಹೇಳಿದಂತೆ ನಗ್ನವಾಗಿ ಆತ ಹೇಳಿದಂತೆ ಮಾಡಿದ್ರು.

publive-image

ಬಳಿಕ ಆದನ್ನೂ ರೆಕಾರ್ಡ್​ ಮಾಡಿಕೊಂಡಿದ್ದ ಖದೀಮ ಅದನ್ನೂ ಬಳಸಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. 9 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್​ನಲ್ಲಿದ್ದ ಮಹಿಳೆಯರು ಕೊನೆಗೆ ರಾತ್ರಿ 8 ಗಂಟೆ ಸುಮಾರಿಗೆ ಸ್ನೇಹಿತರಿಗೆ ವಾಟ್ಸಾಪ್ ಕರೆ ಮಾಡಿದ್ರು. ಸ್ನೇಹಿತೆ ಮಾತನ್ನ ಕೇಳಿ ವಿಡಿಯೋ ಕರೆಯನ್ನ ಕಡಿತಗೊಳಿಸಿದ ಮಹಿಳೆಯರು ಕೊನೆಗೆ ಧೈರ್ಯ ಮಾಡಿ ಡಿಜಿಟಲ್​ ಅರೆಸ್ಟ್ ಅನ್ನೋ ಭಯದಿಂದ ಆಚೆ ಬಂದಿದ್ದಾರೆ. ಈ ಕುರಿತು ಬೆಂಗಳೂರಿನ ಈಸ್ಟ್ ಸಿಇಎನ್ ಕ್ರೈಮ್ ಪೊಲೀಸರಿಗೆ ಮಹಿಳೆ ದೂರನ್ನ ಸಹ ನೀಡಿದ್ದು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಒಟ್ಟಿನಲ್ಲಿ ಡಿಜಿಟಲ್​ ಅರೆಸ್ಟ್​ ಮೂಲಕ ಮಹಿಳೆಯರನ್ನ ಕಾಡಿಕಂಗೆಡಿಸಿದ ಕೀಚಕ 9 ಗಂಟೆಗಳ ಕಾಲ ಮಹಿಳೆಯರನ್ನ ಜೀವ ಹಿಂಡಿದ್ದಾನೆ. ಅನಾಮಧೇಯ ಕರೆಗಳನ್ನ ನಂಬಿ ಮೋಸ ಹೋಗೋ ಮುನ್ನ ನಾವು ನೀವು ಎಚ್ಚರಿಕೆಯಿಂದ ಇರಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment