/newsfirstlive-kannada/media/post_attachments/wp-content/uploads/2025/07/BNG_MYS.jpg)
ದೇಶದ ಹೆಚ್ಚು ಜನದಟ್ಟಣೆಯ ರೈಲ್ವೇ ಮಾರ್ಗವಾದ ಬೆಂಗಳೂರು- ಮೈಸೂರು ನಗರಗಳ ಮಧ್ಯೆ Rapid ರೈಲು ಟ್ರಾನ್ಸಿಟ್ ಸಿಸ್ಟಮ್ ಜಾರಿಗೆ ತರಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಬೆಂಗಳೂರು- ಮೈಸೂರು ಮಧ್ಯೆ Rapid ರೈಲು ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ಜಾರಿಗೆ ಬಂದರೇ, ಬೆಂಗಳೂರು- ಮೈಸೂರು ನಗರಗಳ ನಡುವಿನ ಪ್ರಯಾಣದ ಅವಧಿಯೂ 3 ಗಂಟೆಗಳಿಂದ 70 ನಿಮಿಷಕ್ಕಿಂತ ಕಡಿಮೆಯಾಗಲಿದೆ.
ನಮ್ಮ ದೇಶದಲ್ಲಿ ಮುಂಬರುವ ನಮೋ ಭಾರತ ಆರ್‌ಆರ್‌ಟಿಎಸ್ ಅನ್ನು ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಷನ್ ಜಾರಿಗೊಳಿಸುವಂತೆ, ಬೆಂಗಳೂರು- ಮೈಸೂರು Rapid ರೈಲು ಟ್ರಾನ್ಸಿಟ್ ಸಿಸ್ಟಮ್ ಅನ್ನು ಬೆಂಗಳೂರು ಕಮ್ಯೂಟರ್ ರೈಲು ಟ್ರಾನ್ಸಿಟ್ ಕಾರ್ಪೋರೇಷನ್ ಜಾರಿಗೊಳಿಸಲಿದೆ. ಆರ್‌ಆರ್‌ಟಿಎಸ್ ರೈಲುಗಳು ಗಂಟೆಗೆ 200 ಕಿ.ಮೀ.ವೇಗದಲ್ಲಿ ಸಂಚರಿಸುತ್ತವೆ. ಇದರಿಂದಾಗಿ ಬೆಂಗಳೂರಿನಿಂದ ಮೈಸೂರು ಅನ್ನು ಕೇವಲ 70 ನಿಮಿಷದಲ್ಲಿ ತಲುಪಬಹುದು. ನಮ್ಮ ದೇಶದಲ್ಲಿ ಈಗ ಅಹಮದಾಬಾದ್- ಮುಂಬೈ ನಡುವೆ ನಿರ್ಮಾಣವಾಗುತ್ತಿರುವ ಬುಲೆಟ್ ಟ್ರೇನ್ ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚಾರ ಮಾಡುತ್ತೆ. ಆರ್‌ಆರ್‌ಟಿಎಸ್ 2 ನಗರಗಳ ನಡುವಿನ ಪ್ರಯಾಣಿಕರ ಓಡಾಟಕ್ಕೆ ಹೆಚ್ಚಿನ ಅನುಕೂಲವಾಗಿದೆ. ವಿಶ್ವಾಸಾರ್ಹ ಸೇವೆಯೊಂದಿಗೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಕಾರಿಯಾಗಿದೆ.
30 ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚ
ಬೆಂಗಳೂರು- ಮೈಸೂರು ಮಧ್ಯೆಯ ಆರ್‌ಆರ್‌ಟಿಎಸ್ ಆರಂಭಿಸುವ ಬಗ್ಗೆ ಫ್ರಿ ಫಿಸಿಬಿಲಿಟಿ ಸ್ಟಡಿ ಅಂದರೇ, ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ವರದಿ ಈಗಾಗಲೇ ಪೂರ್ಣವಾಗಿದೆ. ಇನ್ನೇನಿದ್ದರೂ, ವಿಸ್ತೃತ ಯೋಜನಾ ವರದಿ ಅಂದರೇ, ಡಿಪಿಆರ್ ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಬೆಂಗಳೂರು- ಮೈಸೂರು ಮಧ್ಯೆ ಆರ್‌ಆರ್‌ಟಿಎಸ್ ನಿರ್ಮಾಣಕ್ಕೆ ಭೂ ಸ್ವಾಧೀನ, ರೈಲು ಹಳಿ ಜೋಡಣೆ ಸೇರಿದಂತೆ ಒಟ್ಟಾರೆ ಯೋಜನೆಗೆ 25 ಸಾವಿರ ಕೋಟಿ ರೂಪಾಯಿಯಿಂದ 30 ಸಾವಿರ ಕೋಟಿ ರೂಪಾಯಿವರೆಗೂ ವೆಚ್ಚವಾಗುವ ಅಂದಾಜಿದೆ. ಹಾಲಿ ಇರುವ ರೈಲ್ವೇ ಹಳಿಯನ್ನು ಅಪ್ ಗ್ರೇಡ್ ಮಾಡುವ ಹಾಗೂ ಮೇಲ್ಸೇತುವೆಯ ರೈಲ್ವೇ ಹಳಿಯನ್ನು ನಿರ್ಮಾಣ ಮಾಡಬೇಕಾಗಿದೆ.
/newsfirstlive-kannada/media/post_attachments/wp-content/uploads/2025/07/BNG_MYS_RAIL.jpg)
ಆರ್ಥಿಕತೆಯ ದೃಷ್ಟಿ, ಜನಸಂಖ್ಯೆಯ ಬೆಳವಣಿಗೆ, ಮೈಸೂರು ಪ್ರವಾಸಿಗರ ನಗರವಾಗಿರುವುದರಿಂದ ಬೆಂಗಳೂರು- ಮೈಸೂರು ಮಾರ್ಗವನ್ನು ಆರ್‌ಆರ್‌ಟಿಎಸ್ ಯೋಜನೆಗೆ ಸೂಕ್ತ ಮಾರ್ಗ ಎಂದು ರೈಲ್ವೇ ಇಲಾಖೆ ನಿರ್ಧರಿಸಿದೆ. ಈ ಆರ್‌ಆರ್‌ಟಿಎಸ್​​ನಿಂದ ಮಂಡ್ಯ, ರಾಮನಗರ ಜಿಲ್ಲೆಗಳ ರಿಯಲ್ ಎಸ್ಟೇಟ್ ಬೆಳವಣಿಗೆ, ಬ್ಯುಸಿನೆಸ್ ಬೆಳವಣಿಗೆಗೂ ಅನುಕೂಲವಾಗುತ್ತೆ. ಹೆದ್ದಾರಿಯ ವಾಹನ ದಟ್ಟಣೆ ಕಡಿಮೆಯಾಗಿ, ಪರಿಸರಕ್ಕೂ ಅನುಕೂಲವಾಗುತ್ತೆ.
ಎರಡು ನಗರ ನಡುವೆ ಸಂಚಾರ ಸುಲಭ
ಆದರೇ, ಈ ಮಾರ್ಗದಲ್ಲಿ ಆರ್‌ಆರ್‌ಟಿಎಸ್ ನಿರ್ಮಾಣ ಮಾಡುವುದು ಅಷ್ಟೊಂದು ಸುಲಭವಲ್ಲ, ಕೆಲವೊಂದು ಸವಾಲುಗಳೂ ಇವೆ. ಆರ್‌ಆರ್‌ಟಿಎಸ್ ಮಾರ್ಗ ನಿರ್ಮಾಣಕ್ಕಾಗಿ ಭೂ ಸ್ವಾಧೀನವು ದೊಡ್ಡ ಸವಾಲು. ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯಿಂದ ಭೂ ಸ್ವಾಧೀನಕ್ಕಾಗಿ ಕೆಲಸ ಮಾಡಬೇಕಾಗಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಆರ್‌ಆರ್ ಟಿಎಸ್ ರೈಲುಗಳಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕು.
ಆರ್‌ಆರ್‌ಟಿಎಸ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೇ, ನಗರ ಸಾರಿಗೆಯನ್ನು ಪುನಶ್ಚೇತನಗೊಳಿಸುತ್ತೆ. ವೀಕೆಂಡ್ ಗೇಟ್ ವೇ, ಆಫೀಸ್ ಓಡಾಟ, ಎರಡು ಸಿಟಿಗಳ ನಡುವಿನ ಓಡಾಟವೂ ಹೆಚ್ಚು ಸುಲಭ, ಸರಾಗವಾಗುತ್ತೆ. ಹೆದ್ದಾರಿಯ ಟ್ರಾಫಿಕ್ ನಲ್ಲಿ ಸಿಲುಕುವ ಅಗತ್ಯವೇ ಇರಲ್ಲ. ಜೊತೆಗೆ ಹೆದ್ದಾರಿಯ ಟೋಲ್​​​ಗಳಲ್ಲಿ ವಾಹನ ಸಂಚಾರಕ್ಕೆ ದುಬಾರಿ ಟೋಲ್ ಶುಲ್ಕ ನೀಡುವ ಅಗತ್ಯವೂ ಇರಲ್ಲ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us