Advertisment

ಅನಂತ್​ ಅಂಬಾನಿ ಮದುವೆಯಲ್ಲಿ ಬೆಂಗಳೂರು ರಾಮೇಶ್ವರಂ ಕೆಫೆ ಮೆನು; ಏನೆಲ್ಲಾ ಇದೆ ಗೊತ್ತಾ?

author-image
Veena Gangani
Updated On
ಕುಬೇರನ ಮದುವೆಗೆ ಬಂದ ಪ್ರಧಾನಿ.. ಅನಂತ್ ಅಂಬಾನಿ ದಂಪತಿಗೆ ಮೋದಿ ಶುಭ ಆಶೀರ್ವಾದ್; VIDEO
Advertisment
  • ಅನಂತ್​ ಮದುವೆಗೆ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆ ತಿಂಡಿಗಳ ಘಮ
  • ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಹಾಗೂ ರಾಧಿಕಾ
  • ಅಂಬಾನಿ ಮಗನ ಮದುವೆಗೆ ಬಂದ ದೇಶ ವಿದೇಶಗಳ ಗಣ್ಯರಿಗೆ ಭರ್ಜರಿ ಭೋಜನ

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisment

publive-image

ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಗುರು ಹಿರಿಯರ ಸಮ್ಮುಖದಲ್ಲಿ ನಿನ್ನೆ ಸಂಜೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಶುಕ್ರವಾರದಿಂದ ಜುಲೈ 14ರವರೆಗೆ ಮುಖೇಶ್​ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಮುಂಬೈ ಆಗಮಿಸಿದ್ದಾರೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!

publive-image

ರಾಮೇಶ್ವರಂ ಕೆಫೆಯ ಮೆನುವಿನಲ್ಲಿ ಏನಿದೆ?

ಮುಖೇಶ್​ ಅಂಬಾನಿ ಮಗನ ಮದುವೆಗೆ ಬಂದ ಗಣ್ಯರಿಗೆ ಭರ್ಜರಿ ಭೋಜನ ರೆಡಿಯಾಗಿತ್ತು. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯು ಆಹಾರವನ್ನು ಪೂರೈಸುತ್ತಿದೆ. ರಾಮೇಶ್ವರಂ ಕೆಫೆಯ ಹಲವು ತಿಂಡಿ ತಿನಿಸುಗಳು ಕೂಡ ಇದರ ಭಾಗವಾಗಿವೆ. ರಾಮೇಶ್ವರಂ ಕೆಫೆಯ ಫೇಮಸ್​​ ದೋಸೆ, ಬಟರ್‌ ದೋಸೆ, ತುಪ್ಪದ ದೋಸೆ, ಗಾರ್ಲಿಕ್‌ ದೋಸೆ, ಪೆಸರಟ್ಟು ದೋಸೆ, ಇಡ್ಲಿ, ತಟ್ಟೆ ಇಡ್ಲಿ, ತುಪ್ಪದ ಪಡ್ಡು, ಬೋಂಡಾ ಸೂಪ್‌ ಹಾಗೂ ಫಿಲ್ಟರ್‌ ಕಾಫಿಯನ್ನು ಮದುವೆಯ ಭೋಜನದಲ್ಲಿ ಬಡಿಸಲಾಗಿದೆ.

Advertisment

ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್‌.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?

publive-image

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಪ್ರೀ ವೆಡ್ಡಿಂಗ್​ನಲ್ಲೂ ರಾಮೇಶ್ವರಂ ಕೆಫೆ ಕೂಡ ಭಾಗಿಯಾಗಿತ್ತು. ದಕ್ಷಿಣ ಭಾರತೀಯ ಆಹಾರವನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ಇದಾಗಿದೆ ಎಂದು ರಾಮೇಶ್ವರಂ ಕೆಫೆ ಇನ್‌ಸ್ಟಾ ಮೂಲಕ ಹೇಳಿಕೊಂಡಿದೆ. ಈವೆಂಟ್‌ಗೆ ಹಾಜರಾದ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‌ಗಳು ಕೆಫೆ ನೀಡುವ ಆಹಾರವನ್ನು ಆನಂದಿಸಿದ್ದಾರೆ ಎಂದು ರಾಮೇಶ್ವರಂ ಕೆಫೆ ಹೇಳಿಕೊಂಡಿತ್ತು. ಸದ್ಯ ಅನಂತ್ ಹಾಗೂ ರಾಧಿಕಾ ಮದುವೆಗೆ ಬಂದ ಗಣ್ಯರು ರಾಮೇಶ್ವರಂ ಕೆಫೆ ತಿಂಡಿ ತಿನಿಸುಗಳನ್ನು ಎಂಜಾಯ್​ ಮಾಡುತ್ತಾ ತಿನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಾಮೇಶ್ವರಂ ಕೆಫೆಯ ತಿಂಡಿ ತಿನಿಸುಗಳು ಫೇಮಸ್​ ಆಗಿವೆ.

ಅನಂತ್‌ ಅಂಬಾನಿ ಮದುವೆಯಲ್ಲಿ ದೇಶ ವಿದೇಶಗಳಿಂದ ಬಂದ ಗಣ್ಯರು, ನಟ-ನಟಿಯರು, ಕ್ರಿಕೆಟಿಗರು, ಸಾಕಷ್ಟು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ಹೃತಿಕ್‌ ರೋಷನ್‌, ವರುಣ್‌ ಧವನ್‌, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment