/newsfirstlive-kannada/media/post_attachments/wp-content/uploads/2023/11/Fire-crackers-1.jpg)
ಬೆಂಗಳೂರು: ದೀಪಾವಳಿ ಹಬ್ಬದ ಸಮಯ ಸಿಲಿಕಾನ್ ಸಿಟಿಯಲ್ಲಿ ಪಟಾಕಿ ಸಿಡಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ15ಕ್ಕೆ ಏರಿಕೆಯಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪಟಾಕಿ ಸಿಡಿತದಿಂದಾಗಿ ಐವರು ಮಕ್ಕಳು ಸೇರಿದಂತೆ ಒಟ್ಟು 15 ಜನರಿಗೆ ಗಾಯಗಳಾಗಿವೆ. ನಿನ್ನೆ ಬೆಂಗಳೂರಿನ ಪಟಾಕಿ ಸಿಡಿಸಲು ಹೋಗಿ 17 ವರ್ಷದ ಬಾಲಕನ ಕಣ್ಣಿಗೆ ಗಾಯವಾಗಿದೆ. ಬಿಜಿಲಿ ಪಟಾಕಿಯಿಂದ ಕಣ್ಣಿಗೆ ಗಾಯವಾಗಿದೆ. ಸದ್ಯ ಬಾಲಕ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯೆ ಡಾ.ಶಿಲ್ಪಾ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಇದನ್ನೂ ಓದಿ: ಸ್ಕೂಟರ್ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್ ಸ್ಫೋಟ.. ಓರ್ವ ಸಾ*ವು, ಆರು ಮಂದಿಗೆ ಗಾಯ
ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು ಐದು ಜನ ಮಕ್ಕಳು, 17 ವರ್ಷದ ಇಬ್ಬರು ಬಾಲಕರು ದಾಖಲಾಗಿದ್ದರು. ಇನ್ನೂ ಉಳಿದ 8 ಜನ ಮಕ್ಕಳಿಗೆ ಚಿಕಿತ್ಸೆ ಕೊಟ್ಟು ಡಿಸ್ಚಾರ್ಜ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ