ಆಪ್ತ ದೇಶಗಳ ಆಪ್ತಮಿತ್ರ, ಯುದ್ಧ ತಂತ್ರಗಳಲ್ಲಿ ಪಳಗಿದ ಪ್ರವೀಣ.. ಪ್ರಧಾನಿ ನೆತನ್ಯಾಹು ಓದಿದ್ದು ಏನು..?

author-image
Ganesh
Updated On
ಇಸ್ರೇಲ್ ಪ್ರಧಾನಿ ಮನೆ ಮೇಲೆ ಡ್ರೋನ್ ಅಟ್ಯಾಕ್.. ನಮ್ಮನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದ ನೆತನ್ಯಾಹು 
Advertisment
  • ಜಗತ್ತಿನೆಲ್ಲೆಡೆ ದೊಡ್ಡ ಮಟ್ಟದಲ್ಲಿ ಸ್ನೇಹ ಬಳಗ ಹೊಂದಿರುವ ಪ್ರಧಾನಿ
  • ನೆತನ್ಯಾಹು ಶತ್ರು ಸಂಹಾರದ ಸೂತ್ರ ಸಂಪಾದಿಸಿದ್ದು ಹೇಗೆ..?
  • ಇಸ್ರೇಲ್ ಟು ಅಮೆರಿಕ, ಅಮೆರಿಕ ಟು ಇಸ್ರೇಲ್; ಹೇಗಿದೆ ಜರ್ನಿ

ಇಸ್ರೇಲ್ ಪ್ರಪಂಚದಾದ್ಯಂತ ಹೆಡ್​ಲೈನ್ ಆಗ್ತಿದೆ. ಇತ್ತೀಚೆಗೆ ಇರಾನ್​ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸಿತ್ತು. ಇದಕ್ಕೆ ಇಸ್ರೇಲ್ ವಾಯು ಪಡೆ ಖಡಕ್ ಆಗಿ ಸ್ಪಂದಿಸಿದೆ. ಜೊತೆಗೆ 180ಕ್ಕೂ ಹೆಚ್ಚು ಕ್ಷಿಪಣಿಗಳು ಇಸ್ರೇಲ್​ಗೆ ನುಗ್ಗಿದ್ದರೂ, ಸಾವು ನೋವಿನ ಸಂಖ್ಯೆ ಮಾತ್ರ ತುಂಬಾ ಕಡಿಮೆ ಇದೆ. ಇತ್ತ ಲೆಬನಾನ್ ಮತ್ತು ಸಿರಿಯಾದಿಂದಲೂ ದಾಳಿಗಳನ್ನು ಎದುರಿಸುತ್ತಿದೆ. ಇದೆಲ್ಲವನ್ನೂ ಇಸ್ರೇಲ್ ದಿಟ್ಟತನದಿಂದ ಎದುರಿಸುತ್ತಿದೆ.

ಇಸ್ರೇಲ್​ ಸೇನೆಯ ಸಂಘಟಿತ ಹೋರಾಟ, ಆ ಧೈರ್ಯದ ಹಿಂದೆ ಬೆನ್ನುಲುಬಾಗಿ ನಿಂತಿರೋದು ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು. ಆಪ್ತ ದೇಶಗಳ ಜೊತೆಗೆ ಆಪ್ತ ಮಿತ್ರ, ಜಗತ್ತಿನೆಲ್ಲಡೆ ದೊಡ್ಡ ಮೊಟ್ಟದಲ್ಲಿ ಸ್ನೇಹ ಬಳಗವನ್ನು ಹೊಂದಿರುವ ನೆತನ್ಯಾಹು ಅನೇಕ ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಹಾಗಂತ ನೆತನ್ಯಾಹು ಎಲ್ಲಿಯೂ ಧೃತಿಗೆಡಲಿಲ್ಲ. ವಿರೋಧಿಗಳಿಗೆ ತಮ್ಮ ಬತ್ತಳಿಕೆಯಲ್ಲಿರುವ ಅಸ್ತ್ರಗಳ ಮೂಲಕ ಖಡಕ್ ಉತ್ತರ ಕೊಡ್ತಿದ್ದಾರೆ. ಅಷ್ಟಕ್ಕೆಲ್ಲ ಕಾರಣ ಅವರಿಗೆ ಸೇನೆ ಹಾಗೂ ಶತ್ರುಗಳ ವಿರುದ್ಧದ ಯುದ್ಧದ ಬಗ್ಗೆ ಇರುವ ಅಪಾರ ಜ್ಞಾನ ಮತ್ತು ಅನುಭವ.

ಇದನ್ನೂ ಓದಿ:ಲೆಬನಾನ್​ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್​! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?

publive-image

ನೆತನ್ಯಾಹು ಶತ್ರು ಸಂಹಾರದ ಸೂತ್ರ ಸಂಪಾದಿಸಿದ್ದು ಹೇಗೆ..?
21 ಅಕ್ಟೋಬರ್ 1949 ರಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನಿಸಿದರು. ಅವರು ಇಸ್ರೇಲ್​ನ ಟೆಲ್ ಅವಿವ್​​ನಲ್ಲಿ (Tel Aviv) ಜನಿಸಿದರು. ಬಾಲ್ಯವನ್ನು ಅಮೆರಿಕದಲ್ಲಿ ಕಳೆದರು. ಪ್ರೌಢ ಶಿಕ್ಷಣವನ್ನು Cheltenhamನಲ್ಲಿ ಪಡೆದುಕೊಂಡರು. 1967 ರಲ್ಲಿ ಇಸ್ರೇಲ್​ಗೆ ವಾಪಸ್ ಬಂದು, ಇಸ್ರೇಲ್ ರಕ್ಷಣಾ ಪಡೆಗೆ (IDF: Israel Defense Forces) ಸೇರಿಕೊಂಡರು.

ವಿಶೇಷ ಪಡೆಗಳಲ್ಲಿ ಸೇವೆ
ನೆತನ್ಯಾಹು ಯುದ್ಧ ಸೈನಿಕರಾಗಿ ತರಬೇತಿ ಪಡೆದರು ಮತ್ತು ವಿಶೇಷ ಪಡೆಗಳ ಘಟಕ ಸಯೆರೆಟ್ ಮಟ್ಕಲ್‌ನಲ್ಲಿ (Sayeret Matkal) ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಕರಾಮೆಹ್ ಕದನ (Battle of Karameh-1968) ಸೇರಿದಂತೆ ಹಲವಾರು ಗಡಿಯಾಚೆಗಿನ ಮಾರಣಾಂತಿಕ ದಾಳಿಗಳಲ್ಲಿ ಭಾಗವಹಿಸಿದ್ದಾರೆ.

publive-image

1972 ರಲ್ಲಿ, ಬೆಂಜಮಿನ್ ನೆತನ್ಯಾಹು ಮತ್ತೆ ಅಮೆರಿಕಗೆ ಬರುತ್ತಾರೆ. ಇಲ್ಲಿ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Massachusetts Institute of Technology)ಯಲ್ಲಿ ವಾಸ್ತುಶಿಲ್ಪವನ್ನು ಅಧ್ಯಯನ ಮಾಡುತ್ತಾರೆ. 1975 ಫೆಬ್ರವರಿಯಲ್ಲಿ ಆರ್ಕಿಟೆಕ್ಚರ್‌ನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. 1976 ಜೂನ್​ನಲ್ಲಿ MITಯ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ನಂತರ ರಾಜ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆಯಲು ಮುಂದಾಗಿದ್ದರು. ಆದರೆ ಅವರ ಸಹೋದರನ ಮರಣದಿಂದಾಗಿ ಈ ಅಧ್ಯಯನವನ್ನು ಅಲ್ಲಿಗೆ ಕೈಬಿಟ್ಟರು.

ಇದನ್ನೂ ಓದಿ:ಲೆಬನಾನ್​ ಮೇಲೆ ಬಿಳಿ ವಿಷ ಚೆಲ್ಲುತ್ತಿರುವ ಇಸ್ರೇಲ್​! ಏನಿದು White Phosphorus ? ಬ್ಯಾನ್ ಆಗಿರೋದ್ಯಾಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment