newsfirstkannada.com

‘ಇಂಗ್ಲೆಂಡ್​​ ವಿರಾಟ್​​ ವಿರುದ್ಧ ಆಡಬೇಕು; ಕೊಹ್ಲಿ ಆದಷ್ಟು ಬೇಗ ಕಮ್​ಬ್ಯಾಕ್​ ಮಾಡಲಿ‘- ಕ್ಯಾಪ್ಟನ್​​​ ಬೆನ್​ ಸ್ಟೋಕ್ಸ್​​

Share :

Published February 14, 2024 at 5:48pm

    ನಾಳೆಯಿಂದ ರಾಜ್‌ಕೋಟ್‌ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ 3ನೇ ಟೆಸ್ಟ್​​

    ಟೀಮ್​ ಇಂಡಿಯಾ, ಪ್ರವಾಸಿ ಇಂಗ್ಲೆಂಡ್​ ಮಧ್ಯೆ 3ನೇ ಟೆಸ್ಟ್​​ ಶುರು!

    ವಿರಾಟ್​ ಕೊಹ್ಲಿ ಬಗ್ಗೆ ಇಂಗ್ಲೆಂಡ್​​ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್​ ಮಾತು

ನಾಳೆಯಿಂದ ರಾಜ್‌ಕೋಟ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟೀಮ್​ ಇಂಡಿಯಾ, ಪ್ರವಾಸಿ ಇಂಗ್ಲೆಂಡ್​ ಮಧ್ಯೆ 3ನೇ ಟೆಸ್ಟ್​​ ಶುರುವಾಗಲಿದೆ. ಮೂರನೇ ಟೆಸ್ಟ್​​ಗೆ ಇಂಗ್ಲೆಂಡ್​ ತಂಡಕ್ಕೆ ಅನುಭವಿ ಮಾರ್ಕ್ ವುಡ್ ಅವರು ಸೇರಿಕೊಂಡಿದ್ದಾರೆ. ಈ ಮಧ್ಯೆ ಇಂಗ್ಲೆಂಡ್​ ಟೆಸ್ಟ್​​ ಕ್ಯಾಪ್ಟನ್​​ ಬೆನ್ ಸ್ಟೋಕ್ಸ್ ಕೊಹ್ಲಿ ಆದಷ್ಟು ಬೇಗ ಮೈದಾನಕ್ಕೆ ಮರಳಲಿ ಎಂದಿದ್ದಾರೆ.

ಮೂರನೇ ಟೆಸ್ಟ್‌ಗೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬೆನ್ ಸ್ಟೋಕ್ಸ್ ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ನಾವು ಯಾವಾಗಲೂ ಉತ್ತಮ ಆಟಗಾರರ ವಿರುದ್ಧ ಆಡಲು ಬಯಸುತ್ತೇವೆ. ಅದರಲ್ಲಿ ಕೊಹ್ಲಿ ಕೂಡ ಒಬ್ಬರು. ಕೊಹ್ಲಿ ಆದಷ್ಟು ಬೇಗ ಮೈದಾನಕ್ಕೆ ಮರಳಲಿ. ನಾವು ಎಲ್ಲರೂ ವಿರಾಟ್ ಕೊಹ್ಲಿ ಆಡುವುದನ್ನು ನೋಡಬೇಕು. ಕೊಹ್ಲಿ ಮತ್ತೆ ಮೈದಾನಕ್ಕೆ ಮರಳುತ್ತಾರೆ ಎಂದರು.

ಸದ್ಯ ವೈಯಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ಐದು ಟೆಸ್ಟ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. ಕೊಹ್ಲಿ ಯಾವಾಗ ಕಮ್​ಬ್ಯಾಕ್​ ಮಾಡ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ, ಕೊಹ್ಲಿ ನಿರ್ಧಾರವನ್ನು ನಾವು ಗೌರವಿಸುತ್ತೇವೆ, ನಮ್ಮ ಬೆಂಬಲ ಕೂಡ ಇರಲಿದೆ ಎಂದು ಬಿಸಿಸಿಐ ಜನರಲ್​ ಸೆಕ್ರೆಟರಿ ಜಯ್​ ಶಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇಂಗ್ಲೆಂಡ್​​ ವಿರಾಟ್​​ ವಿರುದ್ಧ ಆಡಬೇಕು; ಕೊಹ್ಲಿ ಆದಷ್ಟು ಬೇಗ ಕಮ್​ಬ್ಯಾಕ್​ ಮಾಡಲಿ‘- ಕ್ಯಾಪ್ಟನ್​​​ ಬೆನ್​ ಸ್ಟೋಕ್ಸ್​​

https://newsfirstlive.com/wp-content/uploads/2024/02/Kohli_Ben-Stokes.jpg

Load More