/newsfirstlive-kannada/media/post_attachments/wp-content/uploads/2024/11/justiceforsandhya2.jpg)
ಬೆಂಗಳೂರು: ಕೋಟ್ಯಾಧಿಪತಿ ಮಗನ ಬೆಂಜ್ ಕಾರು ಅಪಘಾತಕ್ಕೆ ಸಂಧ್ಯಾ ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಭೀಕರ ಸತ್ಯಾಂಶಗಳು ಒಂದೊಂದಾಗಿಯೇ ಬಯಲಾಗುತ್ತಿದೆ. ಆರೋಪಿ ಧನುಷ್ ಅವರ ಡ್ರಿಂಕ್ ಌಂಡ್ ಡ್ರೈವ್ ತನಿಖೆ ಮುಂದುವರಿದಿದ್ದು, ಸಂಧ್ಯಾ ಅವರ ಪೋಸ್ಟ್ ಮಾರ್ಟಂ ವರದಿಯಲ್ಲಿ ಮತ್ತಷ್ಟು ಅಂಶಗಳು ಬಯಲಾಗಿದೆ.
ಇದನ್ನೂ ಓದಿ: ಆರೋಪಿ ತಪ್ಪೊಪ್ಪಿಗೆ ನೀಡಿದ್ರೂ ದುಡ್ಡಿನ ದೌಲತ್ತು ಗೆಲ್ಲುತ್ತಿದೆಯಾ? ಸಂಧ್ಯಾ ಸಾವಿಗೆ ನ್ಯಾಯ ಸಿಗೋದು ಮರೀಚಿಕೆಯಾ?
ಸಂಧ್ಯಾ ಅವರ ಪೋಸ್ಟ್ ಮಾರ್ಟಂ ವರದಿಯಲ್ಲಿ ದೇಹದ 15 ಕಡೆಯಲ್ಲಿ ಗಾಯಗಳಾದ ಬಗ್ಗೆ ವರದಿಯಾಗಿದೆ. ಹಲವು ಗಾಯಗಳಾದ ಮೇಲೆ ತೀವ್ರ ರಕ್ತಸ್ರಾವ ಆಗಿದೆ. ಇದರ ಜೊತೆಗೆ ಹೆಮರಾಜಿಕ್ ಶಾಕ್‌ನಿಂದ ಸಂಧ್ಯಾ ಸಾವನ್ನಪ್ಪಿದ್ದಾರೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಸಿಟಿವಿಯಲ್ಲಿ ಕೊನೆ ಕ್ಷಣದ ದೃಶ್ಯ!
ಕಳೆದ ನವೆಂಬರ್ 3ರಂದು ಕೆಂಗೇರಿ ಬಳಿ ನಡೆದ ಬೆಂಜ್ ಕಾರು ಅಪಘಾತದಲ್ಲಿ ಸಂಧ್ಯಾ ಕೊನೆಯುಸಿರೆಳೆದರು. ಸಾವಿಗೂ ಮುನ್ನ ಸಂಧ್ಯಾ ಕೊನೆ ಕ್ಷಣದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಕೆಂಗೇರಿ ಉಪನಗರದಲ್ಲಿರುವ ಬಟ್ಟೆ ಶಾಪ್ನಲ್ಲಿ ಸಂಧ್ಯಾ ಕೆಲಸ ಮಾಡುತ್ತಿದ್ದರು. ಸಾವನ್ನಪ್ಪಿದ ದಿನವೂ ಆ್ಯಕ್ಟೀವ್ ಆಗಿ ಕೆಲಸ ಮಾಡಿದ್ದ ಸಂಧ್ಯಾ ಅವರು ಇಡೀ ದಿನ ಸ್ಯಾರಿ ಶೋರೂಂಲ್ಲಿ ಲವಲವಿಕೆಯಿಂದ ಇದ್ದರು. ಸಂಧ್ಯಾ ಕೊನೆಯ ಕ್ಷಣದ ಚಲನವಲನದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕರೆ ಮಾಡಿ ಮೊಬೈಲ್ ಕಳ್ಳತನ!
ಅಪಘಾತ ದಿನವೇ ಮೃತ ಸಂಧ್ಯಾ ಮೊಬೈಲ್ ಕಳ್ಳತನವಾಗಿದೆ ಎಂದು ಪತಿ ಶಿವಕುಮಾರ್ ಅವರು ದೂರು ನೀಡಿದ್ದಾರೆ. ಅಪಘಾತ ನಡೆದ ದಿನ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಧ್ಯಾ ಮೊಬೈಲ್ ಲಾಕ್ ಓಪನ್ ಮಾಡಿದ್ದಾರೆ. ಪತಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ಹೇಳಿದ್ದಾರೆ. ಅಲ್ಲೇ ಇದ್ದ ವ್ಯಕ್ತಿ ಸಂಧ್ಯಾ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಅದಾದ ಕೆಲವೇ ನಿಮಿಷದಲ್ಲಿ ಸಂಧ್ಯಾ ಅವರ ಒನ್ ಪ್ಲಸ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕರೆ ಮಾಡಿದ ವ್ಯಕ್ತಿ ಮೊಬೈಲ್ ಕಳ್ಳತನ ಮಾಡಿರೋ ಶಂಕೆ ಇದ್ದು, ಈ ಬಗ್ಗೆ ಸಂಧ್ಯಾ ಪತಿ ಶಿವಕುಮಾರ್ ಅವರು ದೂರು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ