ರಸ್ತೆ ದಾಟುವಾಗ ಟೆಕ್ಕಿಗೆ ಡಿಕ್ಕಿ ಹೊಡೆದ ಬೆನ್ಜ್ ಕಾರು.. ಯುವತಿ ಸ್ಥಳದಲ್ಲೇ ಸಾ*ವು

author-image
AS Harshith
Updated On
ಸಂಧ್ಯಾಳಿಗೆ ಸಾವು ತಂದಿಟ್ಟ ಕೀಚಕ ಅಂದು ಎಷ್ಟು ಕುಡಿದಿದ್ದ ? ತನಿಖೆಯಲ್ಲಿ ಬಹಿರಂಗಗೊಳ್ಳುತ್ತಿವೆ ಒಂದೊಂದೇ ಸತ್ಯ
Advertisment
  • ಕೆಲಸ ಮುಗಿಸಿಕೊಂಡು ಮನೆಗೆ ಹೊರಟ್ಟಿದ್ದ ಸಂಧ್ಯಾ
  • ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಬೆನ್ಜ್ ಕಾರು ಚಾಲಕ
  • ಕುಡಿದು ವಾಹನ ಚಾಲನೆ ಮಾಡಿದ್ದಾನೆಂದು ಸ್ಥಳೀಯರ ಆರೋಪ

ಯಾವಾಗ ಏನಾಗುತ್ತೋ ಗೊತ್ತಿಲ್ಲ. ಬೆಳಗ್ಗೆ ಮನೆ ಬಿಟ್ಟವರು ಸಂಜೆ ಮನೆಗೆ ಬರುತ್ತಾರೋ ಎಂಬ ನಂಬಿಕೆ ಇಲ್ಲ. ಅಂತಹದ್ದೇ ಘಟನೆಯೊಂದು ಸಿಲಿಕಾನ್​ ಸಿಟಿಯಲ್ಲಿ ನಡೆದು ಹೋಗಿದೆ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದ ಸಂಧ್ಯಾ ಎಂಬಾಕೆ ದುರದೃಷ್ಟವಶಾತ್​ ರಸ್ತೆ ದಾಟುವಾಗ, ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

ಕೆಂಗೇರಿ ಬಳಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿ

ಸಂಧ್ಯಾ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು. ಮೊನ್ನೆ ಆಫೀಸ್ ಮುಗಿಸಿಕೊಂಡು ಕೆಂಗೇರಿ ಬಸ್​ ನಿಲ್ದಾಣಕ್ಕೆ ಬಂದಿಳಿದ್ದಾರೆ. ಅಲ್ಲಿಂದ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೆನ್ಜ್ ಕಾರು ಏಕಾಏಕಿ ಸಂಧ್ಯಾಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಂಧ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬದಂದು ಗಲಾಟೆ.. ಗಂಡನ ಮೊದಲ ಪತ್ನಿಗೆ 50 ಬಾರಿ ಇರಿದ 2ನೇ ಹೆಂಡತಿ

ಪರಾರಿಯಾಗಲು ಯತ್ನಿಸಿದ್ದ ಚಾಲಕನನ್ನ ಹಿಡಿದ ಸ್ಥಳೀಯರು

ಇನ್ನು, ಯುವತಿಗೆ ಡಿಕ್ಕಿ ಹೊಡೆದ ಬಳಿಕ ಬೆನ್ಜ್​ ಕಾರು ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆನ್ಜ್​ ಕಾರು ಚಾಲಕ ಕುಡಿದ ವಾಹನ ಚಾಲನೆ ಮಾಡಿದ್ದಾನೆಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ಅಪಘಾತವೆಸಗಿದ ಕಾರು ಚಾಲಕನ ಬಗ್ಗೆ ಸಂಚಾರಿ ಪೊಲೀಸರು ನಡೆದು ಕೊಂಡ ರೀತಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಸಾ*ವಿನ ಹಿಂದೆ ಅನುಮಾನಗಳ ಹುತ್ತ! ಪತ್ನಿ ಹೇಳಿದ್ದೇನು? ತನಿಖೆಗೆ ಇಳಿದ ಪೊಲೀಸರು

ಒಟ್ಟಾರೆ ನೂರಾರು ಕನಸು ಕಂಡಿದ್ದ ಮಹಿಳಾ ಟೆಕ್ಕಿ ಬೆನ್ಜ್​ ಕಾರು ಚಾಲಕನ ಅತಿವೇಗಕ್ಕೆ ಬಲಿಯಾಗಿದ್ದಾಳೆ. ಸದ್ಯ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment