ಡಿಜಿಟಲ್ ಅರೆಸ್ಟ್​ ಹೆಸರಲ್ಲಿ ಬೆದರಿಸಿ ಲಕ್ಷ ಲಕ್ಷ ವಸೂಲಿ; ಮೋಸ ಹೋದ ಬೆಸ್ಕಾಂ ಸಿಬ್ಬಂದಿ ಬಲಿ

author-image
Ganesh
ಡಿಜಿಟಲ್ ಅರೆಸ್ಟ್​ ಹೆಸರಲ್ಲಿ ಬೆದರಿಸಿ ಲಕ್ಷ ಲಕ್ಷ ವಸೂಲಿ; ಮೋಸ ಹೋದ ಬೆಸ್ಕಾಂ ಸಿಬ್ಬಂದಿ ಬಲಿ
Advertisment
  • ಸೈಬರ್ ವಂಚಕರ ಟಾರ್ಚರ್​ಗೆ ಬೆಸ್ಕಾಂ ಸಿಬ್ಬಂದಿ ಬಲಿ
  • ಚನ್ನಪಟ್ಟಣ ತಾಲೂಕಿನ ಕೆಳಗೇರಿ ಗ್ರಾಮದಲ್ಲಿ ಘಟನೆ
  • ಡಿಜಿಟಲ್ ಅರೆಸ್ಟ್ ಮಾಡಿದ್ದೀವಿ ಎಂದು ₹11 ಲಕ್ಷ ವಸೂಲಿ

ಡಿಜಿಟಲ್ ಅರೆಸ್ಟ್ ಎಂದು ಹೆದರಿಕೆ ಹಾಕಿ ಲಕ್ಷ ಲಕ್ಷ ಹಣ ದೋಚಿದ್ದಲ್ಲದೇ, ಮತ್ತೆ ಹಣ ಕೊಡುವಂತೆ ಬೆದರಿಕೆ ಹಾಕಿದ ಹಿನ್ನೆಲೆ ಬೆಸ್ಕಾಂ ಸಿಬ್ಬಂದಿಯೊಬ್ಬ ದುಡುಕಿನ ನಿರ್ಧಾರ ಕೈಕೊಂಡಿದ್ದಾರೆ. ಸೈಬರ್ ವಂಚಕರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ನೇಣಿಗೆ ಶರಣಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷ ಲಕ್ಷ ವಸೂಲಿ

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗ್ತಿವೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮೋಸ ಹೋಗೋದು ಕಡಿಮೆ ಆಗ್ತಿಲ್ಲ. ಮೊಬೈಲ್​ಗಳಿಗೆ ವೀಡಿಯೋ ಕಾಲ್ ಮಾಡಿ ಡಿಜಿಟಲ್‌ ಅರೆಸ್ಟ್ ಎಂದು ಬೆದರಿಕೆ ಹಾಕಿ ಅಮಾಯಕರಿಂದ ಹಣ ವಸೂಲಿ ಮಾಡಲಾಗ್ತಿದೆ. ಇಂತಹದ್ದೇ ಒಂದು ಘಟನೆ ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ನಡೆದಿದ್ದು, ಸೈಬರ್​ ವಂಚಕರ ಕಿರುಕುಳಕ್ಕೆ ಬೇಸತ್ತ ಬೆಸ್ಕಾಂ ಸಿಬ್ಬಂದಿ ಬದುಕಿಗೆ ಗುಡ್​ಬೈ ಹೇಳಿದ್ದಾನೆ.

ಇದನ್ನೂ ಓದಿ: ಅಮೆರಿಕಾದಲ್ಲಿ ಮಾಂಸ ತಿನ್ನುವ ಹಸುಗಳು.. ನಾನ್​ವೆಜ್ ಹಾಲು ಭಾರತಕ್ಕೆ ಬೇಡ ಎಂದ ಮೋದಿ ಸರ್ಕಾರ..!

ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್​ನಲ್ಲಿ ಬೆಸ್ಕಾಂ ಹೊರಗುತ್ತಿಗೆ ನೌಕರರನಾಗಿ‌ ಕೆಲಸ ಮಾಡ್ತಿದ್ದ ಕುಮಾರ್​ಗೆ ವಿಕ್ರಮ್ ಗೋಸ್ವಾಮಿ ಹೆಸರಿನಲ್ಲಿ ವಿಡಿಯೋ ಕಾಲ್​ ಬಂದಿದೆ. ನಾನು ಸಿಬಿಐ ಅಧಿಕಾರಿ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಿ.. ನಿಮ್ಮನ್ನು ಕೇಸ್​ನಿಂದ ಕೈಬಿಡಲು ನನ್ನ ಅಕೌಂಟ್​ಗೆ ಹಣ ಕಳಿಸು ಎಂದು ಸಿಬಿಐ ಅಧಿಕಾರಿ ಹೆಸರಿನಲ್ಲಿ ಕುಮಾರ್​ಗೆ ಬೆದರಿಕೆ ಹಾಕಿದ್ದಾನೆ.

ನಂತರ ಸುಮಾರು 11 ಲಕ್ಷ ಹಣವನ್ನು ತನ್ನ ಅಕೌಂಟ್​ಗೆ ಹಾಕಿಸಿಕೊಂಡಿದ್ದಾನೆ. ಆದ್ರೆ ಸೈಬರ್​ ವಂಚಕ ಮತ್ತೆ ಹಣ ನೀಡುವಂತೆ ಕುಮಾರ್​ಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಬೆಸ್ಕಾಂ ಸಿಬ್ಬಂದಿ ಬರೆದಿಟ್ಟು, ತೆಂಗಿನ ಮರಕ್ಕೆ ನೇಣಿಗೆ ಶರಣಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮಾಯಕನ ಜನರನ್ನು ಸೈಬರ್ ವಂಚಕರು ತಮ್ಮ ಮೋಸದ ಜಾಲಕ್ಕೆ ಸಿಲುಕಿಸುತ್ತಿದ್ದಾರೆ. ಇಂತಹ ಸೈಬರ್ ಕ್ರೈಂಗಳಿಗೆ ಕಡಿವಾಣ ಹಾಕಬೇಕು ಅನ್ನೋದು ಸಾರ್ವಜನಿಕರು ಒತ್ತಾಯವಾಗಿದೆ.

ಇದನ್ನೂ ಓದಿ: ತಲೆ ಬೋಳಿಸಿ ಕೂಡಿ ಹಾಕಿದ್ರು, ಮಾವನ ಜೊತೆ ಮಲಗುವಂತೆ ಚಿತ್ರಹಿಂಸೆ.. ಮಗುವಿನ ಕತ್ತು ಹಿಸುಕಿ ಜೀವ ಬಿಟ್ಟ ಗೃಹಿಣಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment