/newsfirstlive-kannada/media/post_attachments/wp-content/uploads/2025/02/Air-Conditioner.jpg)
ಬಿಸಿಲ ಬೇಗೆ ತಡೆಯಲಾಗುತ್ತಿಲ್ಲ. ಬೆಂಗಳೂರಿಗರಂತೂ ಮಳೆಯ ಮುಖ ನೋಡುತ್ತಿದ್ದಾರೆ. ರಾಜ್ಯದ ಹಲವೆಡೆ ಮಳೆ ಬಂದರು. ರಾಜ್ಯ ರಾಜಧಾನಿಯಲ್ಲಿ ಮಾತ್ರ ಒಂದು ಹನಿ ಕೂಡ ಮಳೆ ಬಿದ್ದಿಲ್ಲ. ಹೀಗಾಗಿ ಜನರು ಸೆಕೆ ತಾಳಲಾರದೆ ಏಸಿ ಮೊರೆ ಹೋಗುತ್ತಿದ್ದಾರೆ. ಒಂದು ವೇಳೆ ನೀವು ಕೂಡ ಏಸಿ ಖರೀದಿಸಲು ಬಯಸಿದರೆ ಈ ಬಗ್ಗೆ ಮಾಹಿತಿ ಇಲ್ಲಿದೆ.
ಎಲ್​ಜಿ
ಪ್ರತಿಷ್ಠಿತ ಕಂಪನಿ ಎಲ್​ಜಿ ಗೃಹಪಯೋಗಿ ವಸ್ತುವಿನಿಂದ ಹಿಡಿದು, ಅನೇಕ ಬ್ರಾಂಡ್​ಗಳನ್ನು ಉತ್ಪಾದಿಸುತ್ತಿದೆ. ಅದರ ಜೊತೆಗೆ ಏಸಿಯನ್ನು ಸಹ ತಯಾರಿಸುತ್ತದೆ. 1960ರಿಂದ ಇಂದು ಸಕ್ರಿಯವಾಗಿ ಕಾರ್ಯನಿರ್ವಹಿಸುವ ಈ ಕಂಪಿನಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ.
ಸ್ಯಾಮ್​ಸಂಗ್​
ದಕ್ಷಿಣ ಕೊರಿಯಾ ಮೂಲದ ಕಂಪನಿ ಇದಾಗಿದೆ. ಸ್ಮಾರ್ಟ್​ಫೋನ್​ಗಳಿಂದ ಹಿಡಿದು ಬುತೇಕ ಎಲ್ಲಾ ಉತ್ಪನ್ನಗಳನ್ನು ಸ್ಯಾಮ್​ಸಂಗ್​ ತಯಾರಿಸುತ್ತಿದೆ. ಅದರೊಂದಿಗೆ ಏಸಿ ಕೂಡ ತಯಾರಿಸುತ್ತಿದೆ. ಸದ್ಯ ಬೇಸಿಗೆಯಲ್ಲಿ ಏಸಿ ಖರೀದಿಸಲು ಬಯಸುವವರು ಈ ಕಂಪನಿ ಮೊರೆ ಹೋಗಬಹುದಾಗಿದೆ.
ಓ ಜನರಲ್​
ಇದೊಂದು ಪ್ರೀಮಿಯಂ ಬ್ರಾಂಡ್ ಆಗಿದ್ದು, ಹಲವು ವಿಶೇಷತೆಯುಳ್ಳ ಏಸಿಯನ್ನು ಈ ಕಂಪನಿ ಸಹ ಉತ್ಪಾದಿಸುತ್ತಿದೆ. ಬೇಸಿಗೆ ಸಮಯದಲ್ಲಿ ಮೈ ತಂಪಾಗಿಸಲು ಓ ಜನರಲ್​ ಏಸಿಯನ್ನು ಖರೀದಿಸಲು ಜನ ಮುಂದಾಗುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/02/Air-Conditioner-1.jpg)
ಕ್ರೋಮಾ
ಕ್ರೋಮಾ ಪರಿಣಾಮಕಾರಿಯಾದ ಏಸಿಯನ್ನು ಉತ್ಪಾದಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ಗಳಿಸಿದ ಕಂಪನಿಯಾಗಿದೆ. ಅನೇಕರು ಬೆಲೆ ಹಾಗೂ ವೈಶಿಷ್ಟ್ಯವನ್ನು ಆಧರಿಸಿ ಇದರ ಮೊರೆ ಹೋಗುವವರು ಇದ್ದಾರೆ.
ವೋಲ್ಟಾಸ್​
ಏರ್​ ಕಂಡೀಷನರ್​ ತಯಾರಿಸುವ ಮತ್ತೊಂದು ಬ್ರಾಂಡ್​ ವೋಲ್ಟಾಸ್​. ಮನೆಯ ಗೋಡೆಗೆ ಅಳವಡಿಸುವಂತೆ ಏಸಿಯನ್ನು ಈ ಕಂಪನಿ ತಯಾರಿಸುತ್ತಿದೆ. ಸದ್ಯ ಜನರು ಈ ಸುಡು ಬೇಸಿಗೆಯಲ್ಲಿ ಏಸಿ ಹುಡುಕಾಡುತ್ತಿರುವವರು ಇದರ ಮೊರೆ ಕೂಡ ಹೋಗಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us