/newsfirstlive-kannada/media/post_attachments/wp-content/uploads/2025/07/CAR_STORY.jpg)
ಸೇಫ್ಟಿ ಅನ್ನೋದು ಈಗಿನ ಕಾಲದಲ್ಲಿ ಬಹುಮುಖ್ಯವಾದ ವಿಷ್ಯ. ಅದು ಯಾವುದೇ ವಿಷ್ಯದಲ್ಲಿ ಆಗಿರಲಿ ಸೇಫ್ಟಿ ತುಂಬಾ ಮುಖ್ಯ. ಇನ್ನೂ ಕಾರ್ಗಳ ವಿಷ್ಯಕ್ಕೆ ಬರೋ ಹಾಗಿದ್ರೆ. ಡ್ರೀಮ್ ಕಾರ್ ಖರೀದಿ ಮಾಡಬೇಕು ಅಂತ ತುಂಬಾ ದಿಣಗಳಿಂದ ಕನಸು ಕಾಣೋ ಜನ, ಅದು ಸೇಫ್ ಆಗಿರಬೇಕು ಅಂತಲೂ ಜಾಗ್ರತೆ ವಹಿಸ್ತಾರೆ.
ಇನ್ನೂ ಕಾರ್ಗಳ ಸೇಫ್ಟಿ ವಿಷ್ಯಕ್ಕೆ ಬಂದ್ರೆ ಅತೀ ಮುಖ್ಯವಾದ ಅಂಶ ಅಂದ್ರೆ ಅದು ಏರ್ ಬ್ಯಾಗ್. ಹೀಗಾಗಿ ಇವತ್ತಿನ ವಿಶೇಷದಲ್ಲಿ ಮಧ್ಯಮ ವರ್ಗದ ಜನರು ಕಾರ್ ಎಕನಾಮಿಕಲ್ ಖರೀದಿ ಮಾಡೋದ್ರ ಜೊತೆಗೆ ಸೇಫ್ಟಿ ವಿಷ್ಯದಲ್ಲೂ ರಾಜೀ ಆಗದೇ ಯಾವ ಬೆಸ್ಟ್ ಕಾರ್ಗಳನ್ನು ಖರೀದಿ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ. ಅಂದಹಾಗೆ ಇವತ್ತು ನಾವು ಹೈಲೈಟ್ ಮಾಡ್ತಾ ಇರೋ ಕಾರ್ಗಳು 6 ಲಕ್ಷದ ಒಳಗೆ ಲಭ್ಯವಿರೋ ಬೆಸ್ಟ್ ಹಾಗೂ ಸೇಫ್ ಕಾರ್ಗಳು.
HYUNDAI EXTER
ಹುಂಡೈ ಎಕ್ಸ್‌ಟರ್ 6 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಬೆಲೆಯಲ್ಲಿ ಲಭ್ಯವಿದ್ದು, 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಭಾರತದ ಅತ್ಯಂತ ಕೈಗೆಟುಕುವ SUV ಆಗಿದೆ, ಎಕ್ಸ್‌ಟರ್ ಕಾರ್ನಲ್ಲಿ ಅಳವಡಿಸಲಾದ CNG ಕಿಟ್ ಸಹ ಲಭ್ಯವಿದೆ. ಎಕ್ಸ್‌ಟರ್‌ನ ಬೆಲೆಗಳು 9.25 ಲಕ್ಷ ರೂಪಾಯಿವರೆಗೆ ಇರುತ್ತವೆ.
HYUNDAI GRAND i10 NIOS
5.98 ಲಕ್ಷ ರೂ.ಗಳಿಂದ 8.38 ಲಕ್ಷ ರೂ.ಗಳವರೆಗಿನ ಬೆಲೆಯಲ್ಲಿ, ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಭಾರತದಲ್ಲಿ 6 ಏರ್‌ಬ್ಯಾಗ್‌ಗಳೊಂದಿಗೆ ನೀಡಲಾಗುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ. ಇದು ಎಲ್ಲಾ ಸೀಟುಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳೊಂದಿಗೆ ಲಭ್ಯವಿದೆ. ನಿಯೋಸ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ ಹಾಗೂ ಡ್ಯುಯಲ್-ಸಿಲಿಂಡರ್ ಟ್ಯಾಂಕ್‌ನೊಂದಿಗೆ CNG ಆವೃತ್ತಿಯನ್ನು ಸಹ ನೀಡಲಾಗುತ್ತದೆ.
MARUTHI WAGON-R
ಮಾರುತಿ ವ್ಯಾಗನ್-ಆರ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು ಲಭ್ಯವಿದೆ. 5.79 ಲಕ್ಷ ರೂ.ಗಳಿಂದ 7.50 ಲಕ್ಷ ರೂ.ಗಳವರೆಗೆ ಬೆಲೆಯ ವ್ಯಾಗನ್ ಆರ್ ಮಾರುಕಟ್ಟೆಯಲ್ಲಿ ಸಿಗುತ್ತೆ. ಮಾರುತಿಯ ಉಳಿದ ಮಾದರಿಗಳಂತೆ, CNG ಆವೃತ್ತಿಯೂ ಸಹ ಈ ಕಾರ್ನಲ್ಲಿ ಲಭ್ಯ
MARUTHI CELERIO
ಭಾರತದ ಅತ್ಯಂತ ಇಂಧನ-ಸಮರ್ಥ ಪೆಟ್ರೋಲ್ ಕಾರು, ಮಾರುತಿ ಸೆಲೆರಿಯೊ, 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಹಾಗೂ ಮೂರನೇ ಅತ್ಯಂತ ಕೈಗೆಟುಕುವ ಮಾಡೆಲ್ ಆಗಿದೆ. ಸೆಲೆರಿಯೊ ಬೆಲೆ ರೂ. 5.64 ಲಕ್ಷದಿಂದ ರೂಪಾಯಿಯಿಂದ 7.37 ಲಕ್ಷ ರೂಪಾಯಿವರೆಗೆ ಇದೆ. ಟಾಟಾ ಟಿಯಾಗೊ ಪ್ರತಿಸ್ಪರ್ಧಿ ಕಾರ್ ಅಂತಲೇ ಇದು ಕರೆಯಲ್ಪಡುತ್ತೆ.
ಇದನ್ನೂ ಓದಿ: ಲಾರ್ಡ್ಸ್ ಟೆಸ್ಟ್ ಮ್ಯಾಚ್ ಫುಲ್ ಥ್ರಿಲ್ಲಿಂಗ್.. ಪಂದ್ಯಕ್ಕೆ ರೋಚಕ ಟಚ್ ಕೊಟ್ಟ ಈ ಕಿರಿಕ್ಗಳು..!
MARUTHI EECO
ಈ ಪಟ್ಟಿಯಲ್ಲಿರುವ ಏಕೈಕ ವ್ಯಾನ್ ಅಂದ್ರೆ ಅದು, ಮಾರುತಿ ಈಕೊ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಸರಳ ವಾಹನಗಳಲ್ಲಿ ಇದು ಒಂದಾಗಿದೆ. ಆದರೆ ಮಾರುತಿ ಇನ್ನೂ ಆರು ಏರ್‌ಬ್ಯಾಗ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದರ ಬೆಲೆ 5.69 ಲಕ್ಷ ರೂಪಾಯಿಂದ ಶುರುವಾಗಲಿದೆ.
MARUTHI SUZUKI ALTO K10
ಕೇವಲ 4.23 ಲಕ್ಷ ರೂಪಾಯಿಗಳಲ್ಲಿ, ಮಾರುತಿ ಸುಜುಕಿ ಆಲ್ಟೊ K10 ಪ್ರಸ್ತುತ ದೇಶದಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ಅತ್ಯಂತ ಕೈಗೆಟುಕುವ ಕಾರು. ಆಲ್ಟೊದ ನೇರ ಪ್ರತಿಸ್ಪರ್ಧಿ, ರೆನಾಲ್ಟ್ ಕ್ವಿಡ್, ಹೆಚ್ಚು ದುಬಾರಿಯಾಗಿದ್ದರೂ, ಅದರ ಟಾಪ್-ಎಂಡ್ ವರ್ಷನ್ ಕಾರ್ನಲ್ಲಿ ಕೂಡ ಕೇವಲ 2 ಏರ್‌ಬ್ಯಾಗ್‌ಗಳನ್ನು ನೀಡುತ್ತದೆ. ಸೋ ಅತ್ಯಂತ ಎಕನಾಮಿಕಲ್ ಹಾಗೂ ಸೇಫ್ ಆಗಿರೋ ಫ್ಯಾಮಿಲಿ ಕಾರ್ಗಳಲ್ಲಿ ಒಂದು ಈ ಮಾರುತಿ ಸುಜುಕಿ ಆಲ್ಟೋ ಕೆ10.
ಸೋ ಇವಿಷ್ಟು ಆರು ಲಕ್ಷದ ಒಳಗೆ ಲಭ್ಯವಿರುವ ಹಾಗೂ ಏರ್ ಬ್ಯಾಗ್ ಒಳಗೊಂಡ ಸೇಫ್ ಕಾರುಗಳು ಆಗಿವೆ.
ವಿಶೇಷ ವರದಿ:ರಾಹುಲ್ ದಯಾನ್,ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ