/newsfirstlive-kannada/media/post_attachments/wp-content/uploads/2024/11/JOB_SSLC.jpg)
SSLC ಮುಗಿದ ಕೂಡಲೇ ವಿದ್ಯಾರ್ಥಿಗಳು ಏನಾದ್ರೂ ಒಂದು ನಿರ್ಧಾರಕ್ಕೆ ಬರಬೇಕು. ಮುಂದೆ ಓದೋದಾದ್ರೆ ಏನು ಓದಬೇಕು, ಎಷ್ಟು ವರ್ಷ ಓದಬೇಕು, ಯಾವ ಕೋರ್ಸ್ ಮುಗಿಸಿದ್ರೆ ಕೆಲಸ ಸಿಗುತ್ತೆ ಅನ್ನೋದು ಅರ್ಥ ಮಾಡಿಕೊಳ್ಳಬೇಕು. ಒಂದು ಹಂತದ ವಿದ್ಯಾಭ್ಯಾಸ ಮುಗಿಸಿ ಭವಿಷ್ಯದ ಗುರಿಗೆ ಸಜ್ಜಾಗುತ್ತಿರೋ SSLC ವಿದ್ಯಾರ್ಥಿಗಳು ತನ್ನ ಆಸಕ್ತಿ, ಸಾಮರ್ಥ್ಯದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಅದಕ್ಕಾಗಿ ಕೆಲವು ಮಾರ್ಗದರ್ಶನಗಳನ್ನು ಪಡೆಯುವುದು ಅಗತ್ಯ. ವಿದ್ಯಾರ್ಥಿಗಳು ಮನೆಯ ಹಿರಿಯರು ಮತ್ತು ತಜ್ಞರಿಂದ ಸಹಾಯ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿದ ಬಳಿಕ ಏನು ಓದಬೇಕು? ಅದು ನಿಮ್ಮ ಗುರಿ ಹಾಗೂ ಸಾಧನೆಗೆ ಸಹಾಯ ಮಾಡುವುದೇ? ಎಂದು ನೋಡಬೇಕು. ಅದಕ್ಕೂ ಮುನ್ನ ಸಾಧಿಸುವಂತಹ ಸಾಮರ್ಥ್ಯ ಹಾಗೂ ಏಕಾಗ್ರತೆಯ ಜಾಣ್ಮೆ ನಿಮ್ಮಲ್ಲಿದೆಯೇ? ಎಂದು ನೋಡಿಕೊಳ್ಳಬೇಕು. ಪೋಷಕರು ಕೂಡ ಹಿತೈಷಿಗಳು ಹೇಳಿದರು ಎಂದು ಯಾವುದೋ ಕೋರ್ಸ್ ತೆಗೆದುಕೊಳ್ಳುವಂತೆ ಮಕ್ಕಳ ಮೇಲೆ ಒತ್ತಡ ಹೇರಬಾರದು. ವಿದ್ಯಾರ್ಥಿಗಳು ಅಷ್ಟೆ ತಮ್ಮ ಗುರಿ, ಆಸಕ್ತಿಗೆ ತಕ್ಕ ವಿಷಯ / ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ಉತ್ತಮ ನಿರ್ಧಾರ.
ಎಸ್‌ಎಸ್‌ಎಲ್‌ಸಿ ಪಾಸಾದ ನಂತರ ಪಿಯುಸಿ ಅಥವಾ ಡಿಪ್ಲೊಮಾ, ಐಟಿಐ ಮಾಡಬಹುದು. ಅದರಲ್ಲೂ ಯಾರಾದ್ರೂ ಆದಷ್ಟು ಬೇಗ ತಮ್ಮ ವೃತ್ತಿಜೀವನ ಆರಂಭಿಸಬೇಕು ಅಂದುಕೊಂಡಿರುತ್ತಾರೋ ಅಂತವರಿಗೆ ನಾವು ಒಂದಷ್ಟು ಟ್ರೆಂಡಿಂಗ್‌ನಲ್ಲಿರೋ Job Oriented Courses ಬಗ್ಗೆ ಮಾಹಿತಿ ಇಲ್ಲಿದೆ. ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಹಣಕಾಸು ಕೊರತೆ ಕಾರಣ ಯಾವುದಾದ್ರೂ ಕಡಿಮೆ ಅವಧಿಯ ಕೋರ್ಸ್ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್ ಕೋರ್ಸ್ ಎನ್ನಬಹುದು. ಬಹುಬೇಗ ಜೀವನ ಆಧಾರ ಕಂಡುಕೊಳ್ಳಬೇಕು, ಮನೆಗೆ ಆಧಾರವಾಗಬೇಕು, ಸಹಾಯ ಮಾಡಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಬಹುದು. ಆ ಕೋರ್ಸ್ ಮತ್ಯಾವುದು ಅಲ್ಲ, Diploma in Poultry Farming. ಇದು ಕೋಳಿ ಸಾಕಾಣಿಕೆ ಕೋರ್ಸ್ ಎಂದು ಕರೆಯುತ್ತಾರೆ.
Diploma in Poultry Farming ಕೋರ್ಸ್ ಅವಧಿ, ಫೀಸ್ ಯಾವ ಕಾಲೇಜಲ್ಲಿ ಕೋರ್ಸ್ ಲಭ್ಯವಿದೆ?
ಇನ್ನು, Diploma in Poultry Farming 6-1 ವರ್ಷದ ಕೋರ್ಸ್ ಆಗಿದೆ. ಇದರಲ್ಲೇ 2 ವರ್ಷಗಳ advanced diploma programs ಕೂಡ ಇವೆ. ಬರೇಲಿಯ Central Avian Research Institute, Tamil Nadu Veterinary and Animal Sciences University, Kerala Veterinary and Animal Sciences University, National Institute of Agricultural Extension Management, Indira Gandhi National Open University (IGNOU), Karnataka State Agriculture and Veterinary Universitie ಸೇರಿದಂತೆ ಹಲವು ವಿವಿಗಳು ಈ ಕೋರ್ಸ್ ಅನ್ನು ಕಲಿಸುತ್ತವೆ. ಸರ್ಕಾರಿ ವಿವಿಯಲ್ಲಿ ₹5,000 ದಿಂದ ₹20,000, ಖಾಸಗಿ ವಿವಿಯಲ್ಲಿ ₹20,000 ದಿಂದ ₹50,000, Distance ಎಜುಕೇಷನ್ ಮಾಡೋರಿಗೆ ₹3,000 ದಿಂದ ₹10,000 ಫೀಸ್ ಇರಲಿದೆ.
Eligibility criteria ಏನು ಎಂದು ನೋಡೋದಾದ್ರೆ!
ವಿದ್ಯಾರ್ಥಿ ಎಜುಕೇಷನ್ ಮಿನಿಮಮ್ 10ನೇ ತರಗತಿ ಪಾಸ್ ಆಗಿರಬೇಕು. ಕೆಲವು ವಿವಿಗಳಲ್ಲಿ ಪಿಯುಸಿ ಪಾಸಾಗಿರಬೇಕು. ಈ ಕೋರ್ಸ್ ಮಾಡಲು ಯಾವುದೇ ವಯೋಮಿತಿ ಇಲ್ಲ. ಕೆಲವು ವಿವಿಗಳಲ್ಲಿ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದರಲ್ಲೂ ಬೇಸಾಯದಲ್ಲಿ ತೊಡಗಿರೋ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತದೆ. ಈ ಡಿಪ್ಲೊಮಾ ಕೋರ್ಸ್ ಮುಗಿಸಿದ ಕೂಡಲೇ ಬೇಗ ಉದ್ಯೋಗ ಸಿಗುತ್ತದೆ. ಈ ವಿಷಯದಲ್ಲಿ ಸಂಪೂರ್ಣ ಜ್ಞಾನ ಮತ್ತು ಕೌಶಲ್ಯ ಸಿಗುತ್ತದೆ.
ಕೋರ್ಸ್ನಲ್ಲಿ ಏನೇನು ಹೇಳಿಕೊಡಲಾಗುತ್ತದೆ?
ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಮಾಡಬಹುದಾದ ಉದ್ಯಮ ಇದಾಗಿದೆ. ಭೂಮಿ ಇಲ್ಲದವರು ಕೋಳಿ ಸಾಕಾಣಿಕೆ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಹೇಗೆ ಕೋಳಿ ಸಾಕಾಣಿಕೆ ಮಾಡಬಹುದು ಎಂದು ಹೇಳಿಕೊಡಲಾಗುತ್ತದೆ.
ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸುವುದು ಹೇಗೆ?. ಕ್ರಾಸ್ ಬ್ರೀಡ್ ತಳಿ ಎಂದರೇನು?. ಉತ್ತಮ ನಿರ್ವಹಣಾ ವಿಧಾನಗಳು ಏನು?. ಮಾರಾಟ ಸೌಕರ್ಯ ಹೇಗೆ?. ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸುವುದು ಹೇಗೆ? ಎಂದು ಅರ್ಥ ಮಾಡಿಸಲಾಗುತ್ತದೆ. ಎಲ್ಲವೂ ಪ್ರಾಕ್ಟಿಕಲ್ ಆಗಿರುತ್ತವೆ. ಯಾರೇ ಆಗಲಿ ತರಬೇತಿ ಪಡೆದ ಕೆಲವೇ ದಿನಗಳಲ್ಲಿ ಆರಂಭಿಸಬಹುದು. ಜತೆಗೆ ತಜ್ಞರು ಮಾರುಕಟ್ಟೆಯ ವ್ಯವಹಾರದ ಬಗ್ಗೆ ಕೂಡ ಹೇಳಿಕೊಡುತ್ತಾರೆ.
ಉದ್ಯೋಗವನ್ನು ಕೈಗೊಳ್ಳಲು ಆಸಕ್ತಿ, ದೃಢವಾದ ಮನಸ್ಸು, ಕನಿಷ್ಠ ತರಬೇತಿ ಬೇಕು. ಪರಿಶ್ರಮದೊಂದಿಗೆ ಮುನ್ನೆಚ್ಚರಿಕೆಯೊಂದಿಗೆ ವ್ಯವಹಾರಿಕ ಜ್ಞಾನ ಇಟ್ಟುಕೊಳ್ಳಬೇಕು. ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆ ಇರೋ ವಿದ್ಯುತ್ ಬೇಕು. ಈ ಎಲ್ಲದರ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಜತೆಗೆ ಕೊಕ್ಕರೆ ರೋಗ, ಗುಂಬಾರೋ ಮತ್ತು ರೋಗಗಳ ವಿರುದ್ಧ ಹೇಗೆ ಹೋರಾಡಬೇಕು? ರಕ್ತ ಬೇಧಿ, ಶ್ವಾಸಕೋಶಗಳ ಕಾಯಿಲೆ, ಗೌಟ್ ಹಾಗೂ ಟೈಫಾಯಿಡ್ನಂ ಬಂದಾಗ ಏನು ಮಾಡಬೇಕು? ಎಂದು ಕೂಡ ತರಬೇತಿ ನೀಡುತ್ತಾರೆ.
ಇದನ್ನೂ ಓದಿ:ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್ನ್ಯೂಸ್.. 1,007 ಹುದ್ದೆಗಳು ಖಾಲಿ
ಕೃಷಿ ಉದ್ಯಮದಲ್ಲಿ ಹೊಸ ಮತ್ತು ಲಾಭದಾಯಕ ವೃತ್ತಿ
ನೀವು ದೊಡ್ಡ ಪ್ರಮಾಣದಲ್ಲಿ ಶೆಡ್ ನಿರ್ಮಾಣ ಮಾಡುವುದಾದರೆ ಬಯಲು ಪ್ರದೇಶ ಹೇಗೆ ಆಯ್ಕೆ ಮಾಡಿಕೊಳ್ಳಬೇಕು? ಮುಕ್ತವಾದ ಗಾಳಿ ಬೆಳಕು ಇರೋ ಪ್ರದೇಶ ಯಾವುದು? ಇದು ಹೇಗೆ ಕೋಳಿಗಳ ಬೆಳವಣಿಗೆಗೆ ಅನುಕೂಲ? ಇದನ್ನು ನಿರ್ಮಿಸುವುದು ಹೇಗೆ? ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂತ ಸ್ಥಳ ಯಾವುದು? ನೀರಿನ ಪೂರೈಕೆ ಮತ್ತು ಬೆಳಕಿನ ಪೂರೈಕೆ ಇರುವ ಹಾಗೇ ಹೇಗೆ ಗಮನಹರಿಸಬೇಕು? ಎಂದು ಟ್ರೈನಿಂಗ್ ಕೊಡಲಾಗುತ್ತದೆ.
ಸ್ವಂತ ಕೋಳಿ ಫಾರಂ ಆರಂಭಿಸಲು ಆಸಕ್ತಿ ಇರುವವರು ಈ ಕೋರ್ಸ್ ತೆಗೆದುಕೊಳ್ಳಬಹುದು. ಕೋಳಿ ಸಾಕಾಣಿಕೆಯಲ್ಲಿ ಯಾವುದೇ ಪೂರ್ವ ಅನುಭವವಿಲ್ಲದೇ ಕಲಿಯಲು ಸಿದ್ಧರಿರುವ ವ್ಯಕ್ತಿಗಳು ಕೋರ್ಸ್‌ಗೆ ದಾಖಲಾಗಬಹುದು. ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಬಯಸುವವರು ಮತ್ತು ತಮ್ಮ ಕೃಷಿ ಬಿಸಿನೆಸ್ ಅನ್ನು ವೈವಿಧ್ಯಗೊಳಿಸಲು ಬಯಸುವ ಉದ್ಯಮಿಗಳು ಕೂಡ ಈ ಕೋರ್ಸ್ ಕಲಿಯಬಹುದು. ಕೃಷಿ ಉದ್ಯಮದಲ್ಲಿ ಹೊಸ ಮತ್ತು ಲಾಭದಾಯಕ ವೃತ್ತಿ ಮಾರ್ಗವನ್ನು ಅನ್ವೇಷಿಸಲು ಆಸಕ್ತಿ ಇರೋ ಯಾರು ಬೇಕಾದ್ರೂ ಈ ಕೋರ್ಸ್ ಮಾಡಬಹುದು.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ