Advertisment

10 ಸಾವಿರಕ್ಕಿಂತ ಕಮ್ಮಿ ಬೆಲೆಗೆ 5G ಸ್ಮಾರ್ಟ್ ಫೋನ್​ಗಳು.. ಮಿಸ್​ ಮಾಡಬೇಡಿ!

author-image
Ganesh
Updated On
10,000 ರೂಪಾಯಿಗಿಂತ ಕಮ್ಮಿ ಬೆಲೆಗೆ 5G ಫೋನ್​​! ಹೊಸ ಮೊಬೈಲ್ ಯೋಚನೆಯಲ್ಲಿದ್ದೀರಾ..
Advertisment
  • ನೀವು ಹೊಸ ಫೋನ್ ಖರೀದಿ ಪ್ಲಾನ್​ನಲ್ಲಿ ಇದ್ದೀರಾ?
  • ಮಧ್ಯಮ ವರ್ಗದವರ ಕೈಗೆಟಕುವ ದರದಲ್ಲಿ ಫೋನ್
  • ಕಮ್ಮಿ ಬೆಲೆಗೆ ಸಿಗ್ತಿವೆ 5 ಕಂಪನಿಯ ಒಳ್ಳೊಳ್ಳೆ ಮೊಬೈಲ್ಸ್

ನೀವು ಕಡಿಮೆ ಬಜೆಟ್​​ನಲ್ಲಿ ಫೋನ್ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಅಂತವರು ಓದಲೇಬೇಕಾದ ಸ್ಟೋರಿ ಇದು. ಮಧ್ಯಮ ವರ್ಗದವರು ಕೈಗೆಟಕುವ ದರದಲ್ಲಿ 5-ಜಿ ಸ್ಮಾರ್ಟ್​​​ ಫೋನ್​ಗಳು ಮಾರುಕಟ್ಟೆಯಲ್ಲಿವೆ.

Advertisment

10,000ಕ್ಕಿಂತ ಕಮ್ಮಿ ಬೆಲೆಗೆ ಸ್ಮಾರ್ಟ್​ ಫೋನ್..!

ಇತ್ತೀಚೆಗೆ ಮೊಟೊ ಕಂಪನಿ G35 5G ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ತುಂಬಾ ಜನರಿಗೆ ಇಷ್ಟವಾಗ್ತಿದೆ. ಲೆದರ್ ಫಿನಿಶಿಂಗ್​ನಲ್ಲಿ ಪ್ರೀಮಿಯಂ ಆಗಿ ಕಾಣುತ್ತದೆ. 5,000 mAh ಬ್ಯಾಟರಿ, 120Hz ರಿಫ್ರೆಶ್ ರೇಟ್ ಹಾಗೂ HD ಪ್ಲಸ್ ಡಿಸ್‌ಪ್ಲೇ ಹೊಂದಿದೆ.

ಇದನ್ನೂ ಓದಿ: BBK11 ಗ್ರ್ಯಾಂಡ್​ ಫಿನಾಲೆ; ಕಿಚ್ಚ ಸುದೀಪ್ ಮೇಲೆ ಎತ್ತುವ ಕೈ ಯಾವ ಸ್ಪರ್ಧಿಯದ್ದು..?

publive-image

Redmi 13C 5G ಕೂಡ ಯುವಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಇದು SA ಮತ್ತು NSA 5G ನೆಟ್‌ವರ್ಕ್‌ ಸಪೋರ್ಟ್ ಮಾಡುತ್ತದೆ. 90Hz HD Plus ರೆಸಲ್ಯೂಶನ್ ಸ್ಕ್ರೀನ್​​ನೊಂದಿಗೆ ಆಕರ್ಷಕವಾಗಿದೆ. ಜೊತೆಗೆ Redmi A4 5G ಫೋನ್ ಕೂಡ ಕೈಗೆಟುಕುವ ದರದಲ್ಲಿ ಸಿಗುತ್ತಿರುವ 5G ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು. Mi ಕಂಪನಿಯು ಇದನ್ನು ಕೇವಲ 8499 ರೂಪಾಯಿಗೆ ಬಿಡುಗಡೆ ಮಾಡಿದೆ.

Advertisment

publive-image

ಸ್ಯಾಮ್‌ಸಂಗ್‌ನ Galaxy A14 5G ಫೋನ್‌ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಸ್ಯಾಮ್‌ಸಂಗ್ ಕಡಿಮೆ ಬೆಲೆಗೆ ನೀಡುವ ಅತ್ಯುತ್ತಮ 5G ಫೋನ್‌ಗಳಲ್ಲಿ ಇದು ಒಂದು. ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. Poco M6 5G ಫೋನ್ ಕೂಡ ಕಡಿಮೆ ಬೆಲೆಗೆ ಸಿಗುತ್ತಿದೆ. 18W ಸ್ಪೀಡ್ ಚಾರ್ಜಿಂಗ್, 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. SA ಮತ್ತು NSA 5G ನೆಟ್‌ವರ್ಕ್‌ ಸಪೋರ್ಟ್ ಮಾಡುತ್ತದೆ.

ಇದನ್ನೂ ಓದಿ: 17000 ಉದ್ಯೋಗಾವಕಾಶ.. ತೆಲಂಗಾಣ ಸರ್ಕಾರದ ಜೊತೆ ಇನ್ಫೋಸಿಸ್ ಮಹತ್ವದ ಒಪ್ಪಂದ

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment