ಮೊಟ್ಟ ಮೊದಲ ಎಲೆಕ್ಟ್ರಿಕ್ ವಿಮಾನ.. ಜಸ್ಟ್​ 700 ರೂಪಾಯಿ ಇದ್ರೆ ಪ್ರಯಾಣಿಸಬಹುದು! -Video

author-image
Bheemappa
Updated On
ಮೊಟ್ಟ ಮೊದಲ ಎಲೆಕ್ಟ್ರಿಕ್ ವಿಮಾನ.. ಜಸ್ಟ್​ 700 ರೂಪಾಯಿ ಇದ್ರೆ ಪ್ರಯಾಣಿಸಬಹುದು! -Video
Advertisment
  • ಇಡೀ ವಾಯುಯಾನ ಇತಿಹಾಸದಲ್ಲಿ ಮೊದಲ ಎಲೆಕ್ಟ್ರಿಕ್ ವಿಮಾನ
  • ಎಲೆಕ್ಟ್ರಿಕ್ ವಿಮಾನ ಅಭಿವೃದ್ಧಿ ಪಡಿಸಿರುವ ದೇಶ ಯಾವುದು?
  • ಎಲೆಕ್ಟ್ರಿಕ್ ಬೈಕ್, ಕಾರು, ಬಸ್​ಗಳ ಬೆನ್ನಲ್ಲೇ ಈಗ ವಿಮಾನ ಬಂದಿದೆ!

​ಪ್ರಪಂಚದ್ಯಾಂತ ಹೊಸ ಹೊಸ ತಂತ್ರಜ್ಞಾನಗಳು ಬೆಳವಣಿಗೆ ಹೊಂದುತ್ತಿವೆ. ಈಗಾಗಲೇ ಎಲೆಕ್ಟ್ರಿಕ್​​​ ಬೈಕ್, ಕಾರು, ಬಸ್​ಗಳೆಲ್ಲ ಬಂದಿವೆ. ಇಡೀ ವಿಶ್ವದಲ್ಲಿ ನಡೆಯುವ ಬೆಳವಣಿಗೆಯನ್ನು ಕುಳಿತಲ್ಲೇ ನೋಡುವಂತ ಮೊಬೈಲ್​ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಇಂತಹದರ ನಡುವೆ ಇಡೀ ವಾಯುಯಾನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ವಿಮಾನ ಯಶಸ್ವಿ ಹಾರಾಟ ನಡೆಸಿದೆ.

ಆಲಿಯಾ ಸಿಎಕ್ಸ್- 300 (Alia CX300) ವಿಮಾನವು ವಿಶ್ವದ ಮೊಟ್ಟ ಮೊದಲ ಎಲೆಕ್ಟ್ರಿಕ್ ಏರ್​ಕ್ರಾಫ್ಟ್​ ಆಗಿದೆ. ಇದು ಅಮೆರಿಕದ ವರ್ಮೊಂಟ್ ರಾಜ್ಯದ ದಕ್ಷಿಣ ಬರ್ಲಿಂಗ್ಟನ್​ನಲ್ಲಿರುವ ಬೀಟಾ ಟೆಕ್ನಾಲಜೀಸ್‌ ಕಂಪನಿ ಅಭಿವೃದ್ಧಿ ಪಡಿಸಿದ ಎಲೆಕ್ಟ್ರಿಕ್ ವಿಮಾನವಾಗಿದೆ. ಈಗಾಗಲೇ ಈ ವಿಮಾನವು ನಾಲ್ವರನ್ನು ಹೊತ್ತುಕೊಂಡು ಯಶಸ್ವಿಯಾಗಿ ಪ್ರಯಾಣ ಮಾಡಿದೆ.

ಬೀಟಾ ಟೆಕ್ನಾಲಜೀಸ್‌ ಕಂಪನಿಯ ಆಲಿಯಾ ಸಿಎಕ್ಸ್- 300 (Alia CX300) ನಾಲ್ವರು ಪ್ರಯಾಣಿಕರನ್ನು ಹೊತ್ತು ಹಾರಾಟ ನಡೆಸಿದೆ. ಅಮೆರಿಕದ ಈಸ್ಟ್ ಹ್ಯಾಂಪ್ಟನ್​ನಿಂದ ಜಾನ್​ ಎಫ್​ ಕೆನಡಿ ಏರ್​ಪೋರ್ಟ್​​ವರೆಗೆ ಯಶಸ್ವಿಯಾಗಿ ಪ್ರಯಾಣ ಮಾಡಿದೆ. ಕೇವಲ 30 ನಿಮಿಷದಲ್ಲಿ 130 ಕಿಲೋ ಮೀಟರ್​ ಅಷ್ಟು ದೂರ ಯಶಸ್ವಿಯಾಗಿ ಹಾರಾಟ ನಡೆಸಿದೆ.

publive-image

ಹೆಲಿಕಾಪ್ಟರ್​ 130 ಕಿ.ಮೀವರೆಗೆ ಪ್ರಯಾಣ ಬೆಳೆಸಲು ಸುಮಾರು 13,885 ರೂಪಾಯಿಯಷ್ಟು ಇಂಧನವನ್ನು ದಹಿಸುತ್ತದೆ. ಆದರೆ ಈ ಎಲೆಕ್ಟ್ರಿಕ್​​ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂದರೆ ಜಸ್ಟ್​ 694 ರೂಪಾಯಿ ಪಾವತಿ ಮಾಡಿದರೆ ಸಾಕು. ಇನ್ನು ಎಲೆಕ್ಟ್ರಿಕ್​​ ವಿಮಾನದಲ್ಲಿ ಯಾವುದೇ ಶಬ್ಧ ಬರುವುದಿಲ್ಲದ ಕಾರಣ ಪ್ರಯಾಣಿಕರು ಸ್ಪಷ್ಟವಾಗಿ ಮಾತಾಡಬಹುದು ಎಂದು ಹೇಳಲಾಗಿದೆ.

ಇದು ಸಂಪೂರ್ಣ ಎಲೆಕ್ಟ್ರಿಕ್​ ವಿಮಾನವಾಗಿದ್ದು ಈಸ್ಟ್ ಹ್ಯಾಂಪ್ಟನ್​ನಿಂದ ಜಾನ್​ ಎಫ್​ ಕೆನಡಿ ಏರ್​ಪೋರ್ಟ್​​ವರೆಗೆ ಪ್ರಯಾಣ ಮಾಡಿದೆ. ನ್ಯೂಯಾರ್ಕ್​ನಲ್ಲಿ ಇದು ಮೊದಲ ವಿದ್ಯುತ್ ಚಾಲಿತ ವಿಮಾನವಾಗಿದೆ. ಕೇವಲ 30 ನಿಮಿಷದಲ್ಲಿ 130 ಕಿಲೋ ಮೀಟರ್​ ದೂರ ಪ್ರಯಾಣ ಮಾಡಿದೆ ಎಂದು ಬೀಟಾ ಟೆಕ್ನಾಲಜೀಸ್‌ ಕಂಪನಿಯ ಸಿಇಒ ಕೈಲ್​ ಕ್ಲಾರ್ಕ್​ ತಿಳಿಸಿದ್ದಾರೆ.


">June 4, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment