/newsfirstlive-kannada/media/post_attachments/wp-content/uploads/2025/07/prakash.jpg)
ಬರೋಬ್ಬರಿ 29 ಸೆಲೆಬ್ರಿಟಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿಕೊಂಡಿದೆ. ಬೆಟ್ಟಿಂಗ್ ಆ್ಯಪ್​ನಲ್ಲಿ ಭಾಗಿಯಾಗಿದ್ದ ಸೆಲೆಬ್ರೆಟಿಗಳ ವಿರುದ್ಧ ಸೈಬರಾಬಾದ್ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈ ಎಫ್​ಐಆರ್​ ಆಧಾರದ ಮೇಲೆ ಈಗ ಇ.ಡಿ ಅಧಿಕಾರಿಗಳು ಕೂಡ ಕೇಸ್ ದಾಖಲಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/03/Prakash-Raj_Social-Service1.jpg)
ನಟ ವಿಜಯ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಿಧಿ ಅಗರವಾಲ್, ಆ್ಯಂಕರ್ ಶ್ರೀಮುಖಿ ಸೇರಿದಂತೆ ಒಟ್ಟು 29 ಸೆಲೆಬ್ರಿಟಿಗಳ ವಿರುದ್ಧ ಪಿಎಂಎಲ್‌ಎ ಕಾಯಿದೆಯಡಿ ಇ.ಡಿ ಕೇಸ್ ದಾಖಲಿಸಿಕೊಂಡಿದೆ.
/newsfirstlive-kannada/media/post_attachments/wp-content/uploads/2024/06/Vijay-devarakonda.jpg)
ಬೆಟ್ಟಿಂಗ್ ಆ್ಯಪ್ ಪ್ರಮೋಷನ್ ವಿಡಿಯೋಗಳಲ್ಲಿ 29 ಮಂದಿ ಸೆಲೆಬ್ರೆಟಿಗಳು ನಟಿಸಿದ್ದರು. ಈ ಸಂಬಂಧ ಬ್ಯುಸಿನೆಸ್ ಮೆನ್ ಫಣೀಂದ್ರ ಶರ್ಮಾ ಅವರು ಸೆಲೆಬ್ರೆಟಿಗಳು ಬೆಟ್ಟಿಂಗ್ ಆ್ಯಪ್​ನಿಂದ ಹಣ ಪಡೆದು ಪ್ರಮೋಟ್ ಮಾಡುತ್ತಿದ್ದಾರೆ. ಈ ಬೆಟ್ಟಿಂಗ್ ಮಾಡುವುದರಿಂದ ಮಧ್ಯಮ ವರ್ಗದ ಜನರಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಬ್ಯುಸಿನೆಸ್ ಮೆನ್ ಫಣೀಂದ್ರ ಶರ್ಮಾ ದೂರಿನ ಆಧಾರದ ಮೇರೆಗೆ ಸೈಬರಾಬಾದ್ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಎಫ್​ಐಆರ್​ ಆಧಾರದ ಮೇಲೆ ಈಗ ಇ.ಡಿ ಅಧಿಕಾರಿಗಳು ಕೂಡ ಕೇಸ್ ದಾಖಲಿಸಿಕೊಂಡು ಅಕ್ರಮ ಹಣ ವರ್ಗಾವಣೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇ.ಡಿ. ಯಾಱರ ವಿರುದ್ಧ ಕೇಸ್ ದಾಖಲಿಸಿದೆ..?
1. ರಾಣಾ ದಗ್ಗುಬಾಟಿ
2. ಪ್ರಕಾಶ್ ರಾಜ್
3. ವಿಜಯ್ ದೇವರಕೊಂಡ
4. ಮಂಚು ಲಕ್ಷ್ಮಿ
5. ಪ್ರಣಿತಾ ಸುಭಾಷ್
6. ನಿಧಿ ಅಗರ್ವಾಲ್
7. ಅನನ್ಯ ನಾಗಲ್ಲ
8. ಸಿರಿ ಹನುಮಂತ್
9. ಶ್ರೀಮುಖಿ
10. ವರ್ಷಿಣಿ ಸೌಂದರರಾಜನ್
11. ವಸಂತಿ ಕೃಷ್ಣನ್
12. ಶೋಭಾ ಶೆಟ್ಟಿ
13. ಅಮೃತಾ ಚೌಧರಿ
14. ನಯನಿ ಪಾವನಿ
15. ನೇಹಾ ಪಠಾಣ್
16. ಪಾಂಡು
17. ಪದ್ಮಾವತಿ
18. ಇಮ್ರಾನ್ ಖಾನ್
19. ವಿಷ್ಣು ಪ್ರಿಯಾ
20. ಹರ್ಷ ಸಾಯಿ
21. ಭಯ್ಯಾ ಸನ್ನಿ ಯಾದವ್
22. ಶ್ಯಾಮಲಾ
23. ಟೇಸ್ಟಿ ತೇಜಾ
24. ರೀತು ಚೌಧರಿ
25. ಬಂದಾರು ಶೇಷಾಯನಿ ಸುಪ್ರೀತ
ಈ ಬೆಟ್ಟಿಂಗ್ ಆಪ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಗಳನ್ನು ಇಡಿ ಹೆಸರಿಸಿದೆ.
26. ಬೆಟ್ಟಿಂಗ್ ವೇದಿಕೆಗಳ ನಿರ್ವಾಹಕರು
27. ಕಿರಣ್ ಗೌಡ್
28. ಸಾಮಾಜಿಕ ಮಾಧ್ಯಮದ ಪ್ರಭಾವಿಗಳಾದ ಅಜಯ್, ಸನ್ನಿ ಮತ್ತು ಸುಧೀರ್
29. 'ಲೋಕಲ್ ಬಾಯ್ ನಾನಿ' ಯೂಟ್ಯೂಬ್ ಚಾನೆಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us