/newsfirstlive-kannada/media/post_attachments/wp-content/uploads/2025/06/accindet.jpg)
ಬೆಂಗಳೂರು: ಬೈಕ್ ಅಪಘಾತಕ್ಕೆ ಇಬ್ಬರು ಯುವಕರು ಸ್ಥಳದಲ್ಲೇ ಜೀವ ಬಿಟ್ಟಿರೋ ಘಟನೆ ಮೈಸೂರು ರಸ್ತೆಯ ಮಾರ್ಕೆಟ್ ಫ್ಲೈ ಓವರ್ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಎರಡು ಬೈಕ್ಗಳ ನಡುವೆ ಅಪಘಾತವಾದ ಪರಿಣಾಮ ಆಕಾಶ್ ಹಾಗೂ ಅಫ್ಜಲ್ (25) ಮೃತಪಟ್ಟಿದ್ದಾರೆ.
ಇದನ್ನೂ ಓದಿ:RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?
ಮೃತ ಆಕಾಶ್ ಕೆ.ಪಿ ಅಗ್ರಹಾರ ನಿವಾಸಿಯಾಗಿದ್ದ, ಗ್ರೈಂಡರ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಆದ್ರೆ ಸ್ನೇಹಿತ ಮಣಿ ಜೊತೆ ರಾತ್ರಿ ಊಟ ಮಾಡಲು ಬಂದಿದ್ದ. ಇನ್ನೂ ಮತ್ತೊಬ್ಬ ಬೈಕ್ ಸವಾರ ಅಫ್ಜಲ್ ಮಂಗಳೂರು ನಿವಾಸಿಯಾಗಿದ್ದ. ವಿಜಯನಗರದಲ್ಲಿ ವಾಸವಾಗಿದ್ದ. ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ.
ಸ್ನೇಹಿತ ಆಶಿಮ್ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಗ ಮುಂದೆ ಹೋಗ್ತಿದ್ದ ಎಲೆಕ್ಟ್ರಿಕ್ ಬೈಕ್ಗೆ ಹಿಂಬದಿಯಿಂದ ಬಂದ ಎಕ್ಸ್ ಪಲ್ಸ್ ಬೈಕ್ ಗುದ್ದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಈ ಘಟನೆ ಸಂಬಂಧ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ