/newsfirstlive-kannada/media/post_attachments/wp-content/uploads/2025/04/MOBILE-1.jpg)
ಮೊಬೈಲ್ ಚಾರ್ಜ್ ಕಡಿಮೆಯಾಗಿದೆ. ಹೋಗಿ ತಲುಪಬೇಕಾದ ಜಾಗಕ್ಕೆ ಮುಟ್ಟವಷ್ಟರಲ್ಲಿ ಮೊಬೈಲ್ ಸ್ವಿಚ್ ಆಪ್ ಆಗುವ ಆತಂಕದಿಂದ ಜನರು ಸಾರ್ವಜನಿಕ ಸ್ಥಳಗಳಲ್ಲಿ ಫ್ರೀ ಚಾರ್ಜ್​ ಹಾಕಿಕೊಂಡು ಬ್ಯಾಟರಿ ಫುಲ್ ಮಾಡಿಕೊಂಡು ಹೋಗುತ್ತಾರೆ. ಆದರೆ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ ಪೊಲೀಸರು
ಹೀಗೆ ಫ್ರೀ ಚಾರ್ಜ್ ಹಾಕುವುದರಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಇದೆಯೆಂದು ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಬಂದಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.ಫ್ರೀ ಚಾರ್ಜ್ ಪಾಯಿಂಟ್​ಗಳನ್ನು ಹಾಕುವವರು ಸೈಬರ್ ವಂಚಕರು ಆಗಿರುವ ಸಾಧ್ಯತೆ ಹೆಚ್ಚು. ಕೆಲವು ಕಡೆ ಚಾರ್ಜರ್ ಕೇಬಲ್ ಫಿಕ್ಸ್ ಇರುತ್ತೆ. ಅಂತ ಕಡೆಯಲ್ಲಿ ಹ್ಯಾಕ್ ಮಾಡಿ ಡಾಟಾ ಕಳ್ಳತನ ಮಾಡುವ ಸಾಧ್ಯತೆ ಇದೆ ಹೀಗಾಗಿ ಎಚ್ಚರದಿಂದ ಇರಲು ಸೈಬರ್ ಪೊಲೀಸ್ ಇಲಾಖೆಯವರು ಹೇಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/04/PUBLIC-MOBILE-CHARGING-1.jpg)
ನಿಮ್ಮದೆ ಚಾರ್ಜರ್​ನಿಂದ ಚಾರ್ಜ್​ ಮಾಡಿಕೊಂಡರೆ ಹ್ಯಾಕ್​ ಆಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರದೇ ಚಾರ್ಜರ್​​ನಲ್ಲಿ ನೀವು ನಿಮ್ಮ ಮೊಬೈಲ್​ನ್ನು ಚಾರ್ಜ್ ಮಾಡಿಕೊಂಡರೆ ಮೊಬೈಲ್ ಹ್ಯಾಕ್ ಮಾಡಿ ಡಾಟಾ ಕಳ್ಳತನ ಮಾಡುವುದರೊಂದಿಗೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಎಗರಿಸುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಪ್ರಕರಣಗಳು ದಾಖಲಾಗುವ ಮುನ್ನವೇ ಅರಿವು ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ:ಪೋಷಕರ ಜೇಬಿಗೆ ಬಿತ್ತು ಕತ್ತರಿ.. ರಾಜ್ಯದಲ್ಲಿ ಖಾಸಗಿ ಶಾಲಾ ಶುಲ್ಕ ಹೆಚ್ಚಳಕ್ಕೆ ಕೃಪಾ ನಿರ್ಧಾರ; ಎಷ್ಟು?
ಪೊಲೀಸರು ಹೇಳುವ ಪ್ರಕಾರ ಡಾಟಾ ಕಳ್ಳತನವಾದ ಎಷ್ಟೋ ದಿನಗಳ ನಂತರ ಅದು ನಿಮ್ಮ ಅರಿವಿಗೆ ಬರುತ್ತದೆ. ಆದ್ರೆ ಹೇಗೆ, ಎಲ್ಲಿ ಆಯ್ತು ಅನ್ನೋದು ನಿಮಗೆ ಗೊತ್ತಿರೋದಿಲ್ಲ. ಬಹುತೇಕ ಇಂತಹ ಸ್ಥಳಗಳಲ್ಲಿ ಡಾಟಾ ಕಳುವಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕರಲ್ಲಿ ಸೈಬರ್​ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us