newsfirstkannada.com

ಸಿಕ್ಕ ಸಿಕ್ಕಲ್ಲಿ ಫೋನ್​ ಚಾರ್ಜ್​ ಹಾಕೋರೆ ಎಚ್ಚರ! ಚೂರು ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ!​

Share :

Published February 17, 2024 at 6:06am

Update February 17, 2024 at 4:32pm

    ಚಾರ್ಜರ್‌ ಮೂಲಕ ಹ್ಯಾಕಿಂಗ್‌ ಹೇಗೆ ಆಗುತ್ತೆ ಗೊತ್ತಾ?

    ಇಂತಹ ಸೈಬರ್​ ಕ್ರೈಂಗಳಿಂದ ಬಚಾವ್​ ಆಗೋದು ಹೇಗೆ?

    ಫೋನ್‌ ಸ್ವಿಚ್ಡ್‌ ಆಫ್‌ ಆಗುತ್ತೆ ಅಂತಾ ಚಾರ್ಜ್​ ಹಾಕ್ತೀರಾ?

ಮೊಬೈಲ್‌ನಲ್ಲಿ ಚಾರ್ಜ್‌ ಇಲ್ಲ. ಅರ್ಜೆಂಟ್‌ ಚಾರ್ಜ್‌ಗೆ ಹಾಕಲೇಬೇಕು. ಇಲ್ಲ ಅಂದ್ರೆ ಫೋನ್‌ ಸ್ವಿಚ್ಡ್‌ ಆಫ್‌ ಆಗುತ್ತೆ. ಹೀಗಾಗಿ ಕೂಡಲೇ ಎಷ್ಟೋ ಜನ ಸಿಕ್ಕ ಸಿಕ್ಕಲ್ಲಿ ಚಾರ್ಜ್​ ಮಾಡಲು ತುದಿ ಗಾಲಿನಲ್ಲಿ ನಿಂತುರುತ್ತಾರೆ. ಸಾಮಾನ್ಯವಾಗಿ ಮಾಲ್‌, ಬಸ್‌ ಸ್ಟಾಪ್‌, ನಮ್ಮ ಮೈಟ್ರೋ ಹಾಗೂ ಟ್ರೈನ್​ಗಳಲ್ಲಿ ಅಲ್ಲಿ ಚಾರ್ಜಿಂಗ್‌ ಪಾಯಿಂಟ್​ಗಳನ್ನು ನೋಡಿರುತ್ತೀರಿ. ಇದನ್ನು ನೋಡಿದ ಕೂಡಲೇ ಅದೆಷ್ಟೋ ಜನ ಓಡೋಗಿ ಫೋನ್‌ ಚಾರ್ಜ್‌ಗೆ ಹಾಕಿ ಬಿಡುತ್ತಾರೆ. ಆದರೆ ಅಲ್ಲೇ ನೋಡಿ ಜನರು ಯಾಮಾರೋದು ಸ್ವಾಮಿ.

ಹೌದು, ಹಾಗೇ ಸಿಕ್ಕ ಸಿಕ್ಕಲ್ಲಿ ನಿಮ್ಮ ಫೋನ್​ಗಳಿಗೆ ಚಾರ್ಜ್​ ಹಾಕಿದ್ರೆ ಅಪಾರ ಕಟ್ಟಿಟ್ಟ ಬುತ್ತಿ. ಅದು ಹೇಗೆ ಎಂದರೆ ಫೋನ್​ಗಳಿಗೆ ಚಾರ್ಜ್ ಹಾಕಿದರೆ ನೀವು ನಿಮ್ಮ ಕೈಯ್ಯಾರೆ ನಿಮ್ಮ ಮಾಹಿತಿಯನ್ನು ಕಳ್ಳರ ಕೈಗೆ ಕೊಟ್ಟಂಗೆ ಆಗುತ್ತೆ. ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿದ್ರೆ, ಯುಎಸ್‌ಬಿ ಪವರ್‌ ಸ್ಟೇಷನ್‌ನಲ್ಲಿ ಮೊಬೈಲ್‌ ಚಾರ್ಜಿಗೆ ಇಟ್ಟರೆ ನಿಮ್ಮ ಡೇಟಾ ಕಳುವು ಆಗಬಹುದು. ನಿಮ್ಮ ಬ್ಯಾಂಕಿಂಗ್‌ ವಿವರ ಸೋರಿಕೆ ಆಗಬಹುದು. ನಿಮ್ಮ ನಿಮ್ಮ ವೈಯಕ್ತಿಕ ಡಿಟೇಲ್ಸ್ ಬೇರೆಯವರ ಕೈ ಸೇರಬಹುದು. ಬಸ್‌, ರೈಲು, ವಿಮಾನ, ಮಾಲ್‌ಗಳು ಹಾಗೂ ಶಾಪಿಂಗ್‌ ಸೈಟ್‌ಗಳಲ್ಲಿ ಮೊಬೈಲ್ ಚಾರ್ಜಿಂಗ್‌ ಪಾಯಿಂಟ್‌ಗಳು ಇರುತ್ತವೆ. ಅದು ನಿಮ್ಮ ಅನುಕೂಲಕ್ಕಾಗಿ. ಆದ್ರೆ ಇದನ್ನ ಹ್ಯಾಕರ್ಸ್‌ ಅವರು ಅನುಕೂಲಕ್ಕೆ ಬಳಸಿಕೊಳ್ಳೋ ಚಾನ್ಸ್‌ ನೂರಕ್ಕೆ ನೂರಿದೆ. ಆದ್ರೆ ಚಾರ್ಜರ್‌ ಮೂಲಕ ಹ್ಯಾಕಿಂಗ್‌ ಹೇಗೆ ಆಗುತ್ತೆ ಅಂತಾ ಪ್ರಶ್ನೆ ಮೂಡುತ್ತೆ.

ಮೊಬೈಲ್​ನ ಚಾರ್ಜ್​ಗೆ ಹಾಕಿದ್ರೆ ನಿಮ್ಮ ಮೊಬೈಲ್​ ಒಳಗೆ ಹಾಕರ್ಸ್​ ಮಾಲ್​ವೇರ್​ ನುಗ್ಗಿಸ್ತಾರೆ. ಇದೊಂದು ಸಿಸ್ಟಮ್‌ಗಳಲ್ಲಿ ಹರಿದಾಡೋ ವೈರಸ್‌. ಎಂಟ್ರಿಯಾದ್ರೆ ಇಡೀ ಸಿಸ್ಟಮ್‌ನೇ ತನ್ನ ಕಂಟ್ರೋಲ್‌ಗೆ ತೆಗೆದುಕೊಂಡು ಬಿಡುತ್ತೆ. ಆ ಮೇಲೆ ನಿಮ್ಮ ಫೋನ್‌ ನಿಮ್ಮದಲ್ಲ, ನಿಮ್ಮ ಡೇಟಾ ನಿಮ್ಮದಲ್ಲ, ನಿಮ್ಮ ದುಡ್ಡು ನಿಮ್ಮದಲ್ಲ. ನೀವು ಮೊಬೈಲ್‌ ಚಾರ್ಜ್‌ಗೆ ಹಾಕ್ತೀರಲ್ಲ. ಆಗ ಚಾರ್ಜಿಂಗ್‌ ಕೇಬಲ್‌ಗಳ ಮೂಲಕವೇ ಮಾಲ್‌ವೇರ್‌ನ ನಿಮ್ಮ ಮೊಬೈಲ್‌ಗೆ ರವಾನೆ ಮಾಡ್ತಾರೆ ಹ್ಯಾಕರ್ಸ್‌. ಈ ಮಾಲ್‌ವೇರ್‌ ಮೂಲಕ ಮೊಬೈಲ್‌ನಲ್ಲಿರೋ ಎಲ್ಲಾ ಮಾಹಿತಿ ಸಂಗ್ರಹ ಮಾಡ್ತಾರೆ. ನಿಮ್ಮೆಲ್ಲಾ ಡೇಟಾ ಚಾರ್ಜಿಂಗ್‌ಗೆ ಹಾಕಿರೋ ಯುಎಸ್‌ಬಿ ಕೇಬಲ್‌ನಲ್ಲಿ ಸ್ಟೋರ್‌ ಆಗಿರುತ್ತೆ. ನಂತರ ಇದೇ ಮಾಲ್ವೇರ್‌ ಮೂಲಕ ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ, ಬ್ಯಾಂಕ್‌ ಡೀಟೇಲ್ಸ್‌ಗಳು ಹ್ಯಾಕರ್‌ಗಳ ಪಾಲಾಗುತ್ವೆ. ನಿಮ್ಮ ಖಾಸಗಿ ಮಾಹಿತಿ, ಫೋಟೋಗಳು, ವಿಡಿಯೋಗಳು ಸೋರಿಕೆ ಆಗಿಬಿಡುತ್ವೆ. ಡೇಟಾ ಪಡೆದ ಹ್ಯಾಕರ್‌ ನಿಮ್ಮ ಅಕೌಂಟ್‌ನಿಂದ ಹಣವನ್ನ ಟ್ರಾನ್ಸ್‌ಫರ್‌ ಮಾಡಬಹುದು. ನಿಮ್ಮ ಖಾತೆಯಿಂದ ಬೇರೆ ಖಾತೆಗಳಿಗೆ ವರ್ಗಾಯಿಸಬಹುದು. ಖಾಸಗಿ ಡೇಟಾ ಪಡೆದು ಮೊಬೈಲ್‌ ಮಾಲೀಕನಿಗೆ ಬ್ಲ್ಯಾಕ್‌ ಮೇಲ್‌ ಕೂಡ ಮಾಡೋ ಚಾನ್ಸಸ್‌ ಇರುತ್ತೆ. ಬ್ಲ್ಯಾಕ್‌ಮೇಲ್‌ ಮಾಡಿ ಹಣಕ್ಕಾಗಿ ಆತ ಬೇಡಿಕೆ ಇಡಬಹುದು. ಇದ್ರ ಜೊತೆಗೆ ಖಾಸಗಿ ಮಾಹಿತಿ, ಫೋಟೋ, ವಿಡಿಯೋನ ಎಲ್ಲೆಡೆ ಹರಿಬಿಡಬಹುದು. ನೆನಪಿಡಿ ಒಮ್ಮೆ ಮಾಲ್ವೇರ್‌ ಮೊಬೈಲ್‌, ಲ್ಯಾಪ್‌ಟಾಪ್‌, ಸಿಸ್ಟಮ್‌ಗೆ ನುಗ್ಗಿದ್ರೆ ಮುಗೀತು. ನಿಮ್ಮೆಲ್ಲಾ ಡೇಟಾ ಹ್ಯಾಕರ್ಸ್‌ ಪಾಲಾಗೋದು ಖಚಿತ.

ಇನ್ನು, ಬರೀ ಚಾರ್ಜ್​ಗೆ ಹಾಕೋದ್ರಿಂದ ಅಷ್ಟೇ ಈ ರೀತಿ ಆಗೋದಿಲ್ಲ. ಇದರ ಜೊತೆಗೆ ಹ್ಯಾಕರ್ಸ್​ ನಿಮ್ಮ ಮಾಹಿತಿ ಅಂದ್ರೆ ಇಂಟರ್ನೆಟ್‌ ಬಳಕೆ ಮಾಡೋರ ನಂಬರ್‌, ಇ-ಮೇಲ್ ಸಂಗ್ರಹ ಮಾಡುತ್ತಾರೆ. ನಂತ್ರ ಅವ್ರ ಇ-ಮೇಲ್‌ ಅಥವಾ ಬ್ರೌಸರ್‌ಗಳ ಮೂಲಕ ಜಾಹೀರಾತು ಪ್ರಕಟ ಮಾಡುತ್ತಾರೆ. ಈ ಲಿಂಕ್‌ಗಳಲ್ಲಿ ಮಾಲ್ವೇರ್‌ಗಳನ್ನ ಕಳುಹಿಸುತ್ತಾರೆ. ನೀವು ಕ್ಲಿಕ್‌ ಮಾಡ್ತಿದ್ದಂತೆ ಅದು ನಿಮ್ಮ ಮೊಬೈಲ್‌, ಸಿಸ್ಟಮ್‌, ಲ್ಯಾಪ್‌ಟಾಪ್‌ನಲ್ಲಿ ಇನ್‌ಸ್ಟಾಲ್‌ ಆಗುತ್ತೆ. ಬ್ಯಾಂಕಿಂಗ್‌ ಌಪ್‌ಗಳೇ ಇವ್ರ ಟಾರ್ಗೆಟ್‌. ಮಾಲ್ವೇರ್‌ ಇನ್‌ಸ್ಟಾಲ್‌ ಆಗ್ತಿದ್ದಂತೆ ಲೋಕೇಶನ್‌, ಮೆಸೇಜ್‌, ಌಪ್‌ ವಿವರ, ದೃಢೀಕೃತ ಸಂಖ್ಯೆ, ಎಲ್ಲಾ ಡೇಟಾ ಹ್ಯಾಕ್‌ ಆಗಿಬಿಡುತ್ತೆ.

ಹಾಗಾದ್ರೆ ಈ ರೀತಿಯ ಸೈಬರ್​ ಕ್ರೈಂಗಳಿಂದ ಬಚಾವ್​ ಆಗೋದು ಹೇಗೆ?

ಅಪರಿಚಿತ ಮೆಸೇಜ್‌ಗಳ ಲಿಂಕ್‌ಗಳನ್ನ ಕ್ಲಿಕ್‌ ಮಾಡೋಕೆ ಹೋಗಬೇಡಿ. ಆಗಾಗ ಬರೋ ಌಂಡ್ರಾಯ್ಡ್‌ ಸಾಫ್ಟ್‌ವೇರ್‌ ಅಪ್ಡೇಟ್‌ ಕ್ಲಿಕ್‌ ಮಾಡಲೇಬೇಡಿ. ಹಾಗೂ ಅಪ್ಡೇಟ್‌ ಮಾಡೋದಿದ್ರೆ ಸೆಟ್ಟಿಂಗ್‌ಗೆ ಹೋಗಿನೇ ಸಿಸ್ಟಮ್‌ ಅಪ್ಡೇಟ್‌ ಮಾಡಿ. ಇನ್ನು ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಌಪಲ್‌ ಸ್ಟೋರ್‌ನಂತಹ ಅಧಿಕೃತ ಸೈಟ್‌ಗಳನ್ನ ಬಿಟ್ಟು ಬೇರೆಡೆ ಌಪ್‌ ಡೌನ್‌ಲೋಡ್ ಮಾಡಬೇಡಿ. ಅಪರಿಚಿತ ನಂಬರ್‌, ಇ-ಮೇಲ್‌ಗಳಲ್ಲಿ ಬರೋ ಲಿಂಕ್‌ಗಳನ್ನ ಕ್ಲಿಕ್‌ ಮಾಡೋಕೆ ಹೋಗಬೇಡಿ. ಎಲ್ಲದಕ್ಕಿಂತ ಮುಖ್ಯವಾಗಿ ಪಬ್ಲಿಕ್ ಪ್ಲೇಸ್‌ನಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕೋದನ್ನ ಅವಾಯ್ಡ್‌ ಮಾಡಿ. ಯುಎಸ್‌ಬಿ ಕೇಬಲ್‌ ಬಳಸಿ ಮೊಬೈಲ್‌ ಚಾರ್ಜ್‌ ಮಾಡುವಾಗ ಎಚ್ಚರಿಕೆ ಇರಲಿ. ಬೆಸ್ಟ್‌ ಏನು ಅಂದ್ರೆ ನಿಮ್ಮ ಸ್ವಂತ ಚಾರ್ಜರ್‌ನಲ್ಲೇ ಮೊಬೈಲ್‌ ಚಾರ್ಜ್‌ಗೆ ಹಾಕೋದು ತುಂಬಾ ಒಳ್ಳೇದು.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಕ್ಕ ಸಿಕ್ಕಲ್ಲಿ ಫೋನ್​ ಚಾರ್ಜ್​ ಹಾಕೋರೆ ಎಚ್ಚರ! ಚೂರು ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ!​

https://newsfirstlive.com/wp-content/uploads/2024/02/cyber-4.jpg

Load More