ಭದ್ರಾವತಿ ಶಾಸಕ ಪುತ್ರನ ವಿರುದ್ಧ ದರ್ಪ, ದುರಹಂಕಾರದ ಆರೋಪ ; ಮಹಿಳಾ ಅಧಿಕಾರಿಗೆ ನಿಂದನೆ!

author-image
Gopal Kulkarni
Updated On
ಭದ್ರಾವತಿ ಶಾಸಕ ಪುತ್ರನ ವಿರುದ್ಧ ದರ್ಪ, ದುರಹಂಕಾರದ ಆರೋಪ ; ಮಹಿಳಾ ಅಧಿಕಾರಿಗೆ ನಿಂದನೆ!
Advertisment
  • ಮಹಿಳಾ ಅಧಿಕಾರಿಗೆ ‘ಕೈ​’ ಶಾಸಕರ ಪುತ್ರ ನಿಂದನೆ ಆರೋಪ!
  • ಕಾಂಗ್ರೆಸ್ ಸರ್ಕಾರದಲ್ಲಿ ದಕ್ಷ ಅಧಿಕಾರಿಗಳಿಗೆ ರಕ್ಷಣೆನೇ ಇಲ್ವಾ?
  • ಭದ್ರಾವತಿ ಶಾಸಕನ ಪುತ್ರ ದರ್ಪದ ಮಾತುಗಳಿಗೆ ಜೆಡಿಎಸ್ ಗರಂ

ನಮ್ಮ ಅಪ್ಪ ಯಾರ್​ ಗೊತ್ತಾ? ನಮ್​ ತಾತಾ ಯಾರ್​ ಗೊತ್ತಾ ? ಅಂತಾನೇ ಕೆಲವರು ಮೆರೀತಿರ್ತಾರೆ. ಆ ಲಿಸ್ಟ್​ಗೆ ಭದ್ರಾವತಿ ಶಾಸಕ ಸಂಗಮೇಶ್​ ಪುತ್ರ ಕೂಡ ಸೇರಿಕೊಂಡಿದ್ದಾರೆ. ಈ ಬಗ್ಗೆ ಆರೋಪ ಒಂದನ್ನ ಜೆಡಿಎಸ್​ ಮಾಡಿದೆ. ಜೊತೆಗೆ ವಿಡಿಯೋ ಸಾಕ್ಷಿಯೊಂದು ರಿಲೀಸ್​ ಆಗಿದೆ.

ಇದನ್ನೂ ಓದಿ:ಮುಡಾ ಕೇಸ್‌ನಲ್ಲಿ ED ಶಾಕ್‌; ಸಿಎಂ ಸಿದ್ದರಾಮಯ್ಯ ಪತ್ನಿ, ಸಚಿವ ಬೈರತಿ ಸುರೇಶ್‌ಗೆ ತಾತ್ಕಾಲಿಕ ರಿಲೀಫ್‌!

ಮಹಿಳೆಯರಿಗೆ ಗೌರವ ಇಲ್ಲ,  ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆಯೇ ಇಲ್ಲ.. ಇದು ವಿಪಕ್ಷಗಳ ಟೀಕೆ. ಇದಕ್ಕೆ ಹೊಸ ಸೇರ್ಪಡೆ ಭದ್ರಾವತಿ ಕಾಂಗ್ರೆಸ್​ ಶಾಸಕ ಸಂಗಮೇಶ್‌ ಅವರ ಪುತ್ರ ಬಿ.ಎಸ್.‌ ಬಸವೇಶನ ಘನಂಧಾರಿ ಕೆಲಸ. ಗೂಂಡಾಗಿರಿ ವರ್ತನೆ ನಡೆಸಿದ ಆರೋಪ ಕೇಳಿ ಬಂದಿದೆ.

publive-image

ಅಧಿಕಾರಿಯೊಬ್ಬರು ನನಗೆ ಫೋನ್​ ಮಾಡೋಕೆ ಹೇಳಿ ಅಂದಿದ್ದೇ ತಪ್ಪಾಯ್ತಾ? ಹಾಗೆ ಮಾತಾಡೋದಕ್ಕೆ ಶುರುಮಾಡಿದವನು ಭೂ ವಿಜ್ಞಾನಿ​ ಅಂತ ನೋಡದೇ, ಅದ್ರಲ್ಲೂ ಮಹಿಳೆಗೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.

publive-image

ಭದ್ರಾವತಿಯಲ್ಲಿ ಒಂದು ಪೈಸೆ ಅಭಿವೃದ್ಧಿ ಕೆಲಸ ಮಾಡದ ನಾಲಾಯಕ್‌ ಕಾಂಗ್ರೆಸ್‌ ಶಾಸಕ ಸಂಗಮೇಶ್‌. ಪುತ್ರನನ್ನೂ ಸರಿಯಾಗಿ ಬೆಳೆಸಿಲ್ಲ ಅಂತ ಜೆಡಿಎಸ್​ ಕಿಡಿಕಾರಿದೆ. ಅಪ್ಪ ಎಂಎಲ್​ಎ ನಮ್ಮನ್ನ ಕೇಳೋರಿಲ್ಲ ಅಂತ ಮಗ ಬಸವೇಶನ ದಂಧೆಯೇ ಅಕ್ರಮ ಮರಳುಗಾರಿಕೆ. ವೃತ್ತಿನೇ ಗೂಂಡಾಗಿರಿ, ಪ್ರವೃತ್ತಿಯೇ ಲೂಟಿ ಅಂತ ಲೋಕಲ್​​ ದಳ ಲೀಡರ್ಸ್​​​ ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ:ರಾಜ್ಯ ಬಿಜೆಪಿ ಬಂಡಾಯಕ್ಕೆ ಬ್ರೇಕ್? ಯತ್ನಾಳ್​ಗೆ ನೋಟಿಸ್, ಸೋಮಣ್ಣ ಮನೆಯಲ್ಲಿ ಮೀಟಿಂಗ್​! ಮುಂದೇನು?

ಬಿ.ಎಸ್.‌ ಬಸವೇಶಗೆ ಸಂಬಂಧಿಸಿದ ಅಕ್ರಮ ಮರಳುಗಾರಿಕೆಯನ್ನ ತಡೆಯಲು ಭೂ ವಿಜ್ಞಾನಿ​ ಜ್ಯೋತಿ ಬಂದಿದ್ದಾರೆ. ಇದೇ ವೇಳೆ ‌ಬಸವೇಶನ ಶಿಷ್ಯನೊಬ್ಬ ಜ್ಯೋತಿ ಅವರಿಗೆ ಫೋನ್​ ಮಾಡಿ ಮಾತಾಡಿ ಅಂತ ಕೊಟ್ಟಿದ್ದಾನೆ. ನನ್ನ ನಂಬರ್​ಗೆ ಕರೆ ಮಾಡೋಕೆ ಹೇಳು ಅಂತ ಜ್ಯೋತಿ ಹೇಳಿದ್ದಾರಷ್ಟೇ. ಅಷ್ಟಕ್ಕೆ ಬಾಯಿಗೆ ಬಂದ ಹಾಗೆ ಅಶ್ಲೀಲ ಶಬ್ಧಗಳಿಂದ ನಿಂದಿಸಿದ್ದಾನಂತೆ ಬಸವೇಶ್​

publive-image

ರಾಜ್ಯದಲ್ಲಿರುವ ಮಹಿಳಾ ಆಯೋಗ ಏನು ಮಾಡ್ತಿದೆ? ಮಹಿಳೆಯ ಗೌರವಕ್ಕೆ ಧಕ್ಕೆ ತಂದಿರುವ ಹೆಣ್ಣು ನಿಂದಕ ಶಾಸಕರ ಪುತ್ರನ ವಿರುದ್ಧ ಸರ್ಕಾರ ತಕ್ಷಣವೇ ಪ್ರಕರಣ ದಾಖಲಿಸಿ, ಬಂಧಿಸಬೇಕು ಅಂತ ಸಿಎಂ ಸಿದ್ದರಾಮಯ್ಯ,  ಗೃಹ ಸಚಿವ ಪರಮೇಶ್ವರ್​,  ಸಚಿವೆ ಹೆಬ್ಬಾಳ್ಕರ್​ಗೆ ಟ್ಯಾಗ್ ಮಾಡಿ​ ಬಿಜೆಪಿ ಟ್ವೀಟ್​​ ಮಾಡಿ ಆಗ್ರಹಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment