ಭೀಮಾ ತೀರದಲ್ಲಿ ಬರೀ ರಕ್ತ ಚರಿತ್ರೆ.. ನಟೋರಿಯಸ್ ಬಾಗಪ್ಪನ ಕ್ರೈಂ ಡೈರಿ..!

author-image
Ganesh
Updated On
ಭೀಮಾ ತೀರದಲ್ಲಿ ಬರೀ ರಕ್ತ ಚರಿತ್ರೆ.. ನಟೋರಿಯಸ್ ಬಾಗಪ್ಪನ ಕ್ರೈಂ ಡೈರಿ..!
Advertisment
  • ನಟೋರಿಯಸ್ ಬಾಗಪ್ಪ ಹರಿಜನ್ ಹತ್ಯೆ
  • ಬಾಗಪ್ಪನ ಹರಿಜನ್ ಮೇಲೆ ಲಾಂಗು-ಮಚ್ಚುಗಳಿಂದ ದಾಳಿ
  • ಬಾಗಪ್ಪ ಕುಖ್ಯಾತ ಚಂದಪ್ಪ ಹರಿಜನ್​ನ ಖಾಸಾ ಶಿಷ್ಯ

ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ ಹತ್ಯೆ ಮಾಡಲಾಗಿದೆ.. ನಿನ್ನೆ ರಾತ್ರಿ 8:50ರ ಸುಮಾರಿಗೆ ವಿಜಯಪುರದ ಮದಿನಾ ನಗರದಲ್ಲಿ ಮಾರಕಾಸ್ತ್ರಗಳಿಂದ ಮುಖ, ತಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಅಮ್ಮನಿಗಾಗಿ ಮಿಡಿದ ಮಕ್ಕಳು.. ಡೆಮಾಲಿಷ್​​ ಮಾಡದೆ ಮನೆಯನ್ನೇ ಬೇರೆ ಕಡೆ ಶಿಫ್ಟ್​ ಮಾಡಿದರು..

ಬಾಗಪ್ಪ ಹರಿಜನ್ ಹತ್ಯೆ 

ಈ ಹಿಂದೆ ಕೋರ್ಟ್ ಆವರಣದಲ್ಲಿಯೇ ಬಾಗಪ್ಪ ಹರಿಜನ್ ಮೇಲೆ ಗುಂಡಿನ ದಾಳಿಯಾಗಿತ್ತು. ಆದರೆ ಆಗ ಬಾಗಪ್ಪ ಬಚಾವ್ ಆಗಿದ್ದ. ಆದರೆ ಈ ಬಾರಿ ಹಂತಕರು ಯೋಜಿತ ರೀತಿಯಲ್ಲಿ ದಾಳಿ ನಡೆಸಿ ಬಾಗಪ್ಪನನ್ನು ಕೊಂದು ಹಾಕಿದ್ದಾರೆ.. ವಿಜಯಪುರದ ಮದಿನಾ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಬಾಗಪ್ಪ ರಾತ್ರಿ 8:50 ಸುಮಾರಿಗೆ ಮನೆಯಿಂದ ಹೊರಬರುತ್ತಿದ್ದಂತೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ‘ರಾತ್ರಿ ಆಗಿದ್ದೇನು..?’ ಬಾಗಪ್ಪ ಹರಿಜನ್ ಕೇಸ್​​ ಬಗ್ಗೆ ಅಸಲಿ ಮಾಹಿತಿ ಬಿಚ್ಚಿಟ್ಟ ಎಸ್​ಪಿ

publive-image

ಬಾಗಪ್ಪ ಹರಿಜನ್ ಕ್ರೈಂ ಡೈರಿ!

  • ಭೀಮಾತೀರವನ್ನು ನಡುಗಿಸಿದ್ದ ಚಂದಪ್ಪ ಹರಿಜನ್​ನ ಖಾಸಾ ಶಿಷ್ಯ
  •  ಚಂದಪ್ಪ ಹರಿಜನ್​​ನ ಸೋದರ ಸಂಬಂಧಿ ಈ ಬಾಗಪ್ಪ ಹರಿಜನ್​​​
  •  ಭೀಮಾತೀರದ ನಟೋರಿಯಸ್​​ ಶಾರ್ಪ್​ಶೂಟರ್​ ಬಾಗಪ್ಪ
  •  2000 ಮೇ ತಿಂಗಳಲ್ಲಿ ಚಂದಪ್ಪನ ಹತ್ಯೆಯ ನಂತ್ರ ಬಾಗಪ್ಪ ಹವಾ
  •  ಚಂದಪ್ಪ ಹರಿಜನ್​​​​ ನಿಧನದ ಬಳಿಕ ಕುಟುಂಬದಲ್ಲಿ ಆಸ್ತಿಯ ಗಲಾಟೆ
  •  ಬಾಗಪ್ಪನ ಮೇಲಿತ್ತು ಚಂದಪ್ಪ ಸೋದರ ಬಸಪ್ಪನ ಜೀವ ತೆಗೆದ ಆರೋಪ
  •  ಆಲಮೇಲ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು
  •  ಬ್ಯಾಡಗಿಹಾಳ ಬಸ್ ಕಂಡಕ್ಟರ್ ಲಾಳಸಂಗಿ ಜೀವ ತೆಗೆದ ಕೇಸ್​​​ನಲ್ಲಿ ಪಾತ್ರ
  •  2013ರಲ್ಲಿ ಗಾಂಧಿಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ
  •  2017ರಲ್ಲಿ ಕೋರ್ಟ್​ಗೆ ಬಂದಿದ್ದ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ

ವೈರತ್ವ

2017 ಆಗಸ್ಟ್​​ 8.. ಬಾಗಪ್ಪ ಹರಿಜನ್ ಮೇಲೆ ಫೈರಿಂಗ್ ನಡೆದಿತ್ತು. ವಿಜಯಪುರ ಕೋರ್ಟ್ ಆವರಣದಲ್ಲಿ ಭಾಗಪ್ಪನ ಮೇಲೆ ಎದುರಾಳಿ ತಂಡ ಮುರಿದ್ಕೊಂಡು ಬಿದ್ದಿತ್ತು.. ಹವಾ ಎಬ್ಬಿಸಿದ್ದ ಬಾಗಪ್ಪನ ಕಥೆ ಮುಗಿಸಲು ಗುಂಡು ಹಾರಿಸಿದ್ದರು. ಪೀರಪ್ಪ ಹಡಪದ್ ಎಂಬಾತ ಬಾಗಪ್ಪನ ಮೇಲೆ ದಾಳಿ ಇಟ್ಟಿದ್ದ.. ಆಗ ಎಡ ಭುಜ, ಹೊಟ್ಟೆ ಸೇರಿ 4 ಗುಂಡುಗಳು ಬಾಗಪ್ಪನ ದೇಹ ಸೀಳಿದ್ದವು. ಆವತ್ತು ಇದೇ ಬಾಗಪ್ಪನ ಮುಗಿಸಲು ಸುಪಾರಿ ನೀಡಿದ್ದು ರಕ್ತ ಚರಿತ್ರೆಯ ಗುರು ಚಂದಪ್ಪ ಹರಿಜನ್​ನ ಅಣ್ಣ ಯಲ್ಲಪ್ಪ ಹರಿಜನ್‌ನ ಮಕ್ಕಳು ಅನ್ನೋ ಮಾತಿದೆ. ಅದ್ಹೇಗೋ ಆವತ್ತು ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದ ಬಾಗಪ್ಪ ಬದುಕಿ ಬಂದಿದ್ದ.

ಇದನ್ನೂ ಓದಿ: Bhagappa Harijan: ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು.. ನಟೋರಿಯಸ್ ಬಾಗಪ್ಪ ಹರಿಜನ್ ಫಿನಿಶ್ ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment