ವಿಮಾನ ದುರಂತದಲ್ಲಿ ದೇಹಗಳು ಗುರುತಿಸಲಾಗಷ್ಟು ಸುಟ್ಟು ಭಸ್ಮ.. ಅಚ್ಚರಿ ಮೂಡಿಸಿದ ಭಗವದ್ಗೀತೆ.. VIDEO

author-image
Veena Gangani
Updated On
ವಿಮಾನ ದುರಂತದಲ್ಲಿ ದೇಹಗಳು ಗುರುತಿಸಲಾಗಷ್ಟು ಸುಟ್ಟು ಭಸ್ಮ.. ಅಚ್ಚರಿ ಮೂಡಿಸಿದ ಭಗವದ್ಗೀತೆ.. VIDEO
Advertisment
  • ವಿಮಾನ ದುರಂತ ನಡೆದ ಸ್ಥಳದಲ್ಲಿ ಸಿಕ್ತು ಭಗವದ್ಗೀತೆ
  • ಅವಶೇಷಗಳ ಅಡಿಯಲ್ಲಿ ಪತ್ತೆಯಾದ ಭಗವದ್ಗೀತೆ
  • ಎಲ್ಲವೂ ಸುಟ್ಟು ಕರಕಲಾದ್ರೂ ಭಗವದ್ಗೀತೆಗೆ ಏನೂ ಆಗಿಲ್ಲ

ಗುಜರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ಜೀವ ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಓರ್ವ ಪ್ರಯಾಣಿಕನ ಪ್ರಾಣ ಉಳಿದಿದೆ.

ಇದನ್ನೂ ಓದಿ:265 ಮಂದಿಯ ಜೀವ ತೆಗೆದ ಏರ್ ಇಂಡಿಯಾ ವಿಮಾನ.. ದುರಂತಕ್ಕೆ ಕಾರಣವಾಯ್ತಾ ಈ 8 ಸಂಗತಿಗಳು..?

ಏರ್ ಇಂಡಿಯಾ ವಿಮಾನ ಪತನವಾದ ವೇಳೆ ಬಿ.ಜೆ. ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್​ನ ಡೈನಿಂಗ್​ ಹಾಲ್​ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ.


">June 13, 2025

ವಿಮಾನ ದುರಂತ ನಡೆದ ಸ್ಥಳದಲ್ಲಿ ಭಗವದ್ಗೀತೆ ಪತ್ತೆಯಾಗಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು ಸಿಕ್ಕಿದೆ. ಈ ದುರಂತದಲ್ಲಿ ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆ ಪುಸ್ತಕಕ್ಕೆ ಮಾತ್ರ ಏನು ಆಗಯೇ ಇದ್ದಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment