/newsfirstlive-kannada/media/post_attachments/wp-content/uploads/2024/11/Bhageera.jpg)
ರೋರಿಂಗ್​ ಸ್ಟಾರ್​​ ಶ್ರೀಮುರಳಿ ನಟನೆಯ ಬಘೀರಾ ಸಿನಿಮಾ ನಿನ್ನೆ ಬಿಡುಗಡೆಗೊಂಡು ಅದ್ಭುರಿಯಾಗಿ ಪ್ರದರ್ಶನ ಕಾಣುತ್ತಿದೆ. ಪ್ರಶಾಂತ್​ ನೀಲ್​ರವರ ಕಥೆ, ಡಾ.ಸೂರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಸದ್ಯ ಬಘೀರಾ ಅಭಿಮಾನಿಗಳ ಮನಗೆದ್ದಿದ್ದು, 2ನೇ ದಿನದತ್ತ ಮುನ್ನಗ್ಗುತ್ತಿದೆ.
ಅಂದಹಾಗೆಯೇ ಮೊದಲ ದಿನದಂದು ಬಘೀರಾ ಉತ್ತಮ ಕಲೆಕ್ಷನ್​ ಕಂಡಿದೆ. ಸಾಕ್​ನಿಲ್ಕ್​ ವರದಿ ಮಾದಿದಂತೆ ಎಲ್ಲಾ ಭಾಷೆಗಳನ್ನು ಸೇರಿ 2.80 ಕೋಟಿ ಗಳಿಸಿದೆ. ಮೊದಲ ದಿನದಂದು ಅಭಿಮಾನಿಗಳ ಉತ್ತಮ ಪ್ರತಿಕ್ರಿಯೆ ಕಂಡು ಸಿನಿಮಾ ತಂಡ ಸಂತೋಷಗೊಂಡಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ! ಹೆಚ್ಚುತ್ತಿದೆ ಪಟಾಕಿ ಸಿಡಿತ ಪ್ರಕರಣ.. ಸದ್ಯ ಗಾಯಾಳುಗಳ ಸಂಖ್ಯೆ ಎಷ್ಟಿದೆ ಗೊತ್ತಾ?
ಬಘೀರಾ ಸಿನಿಮಾವು ಅಪರಾಧದಿಂದ ತುಂಬಿದ ಜಗತ್ತಿನಲ್ಲಿ ನ್ಯಾಯವನ್ನು ಹುಡುಕುವ ಕಥೆಯನ್ನು ಆಧರಿಸಿದೆ. ಶ್ರೀಮುರಳಿ ವಿಭಿನ್ನವಾಗಿ ಪಾತ್ರವನ್ನಿ ನಿಭಾಯಿಸಿದ್ದಾರೆ. ಸದ್ಯ ನಟನ ಹೊಸ ಅವತಾರ ಕಂಡು ‘‘ಭಾರತೀಯ ಬ್ಯಾಟ್​ಮ್ಯಾನ್​’’ ಎಂದು ಕರೆಯುತ್ತಿದ್ದಾರೆ.
ಬಘೀರಾ ಸಿನಿಮಾದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್​ ನಟಿಸಿದ್ದಾರೆ. ಜೊತೆಗೆ ಪ್ರಕಾಶ್​​ ರಾಜ್​, ಅಚ್ಚುತ್​ ಕುಮಾರ್​ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ.
ಸದ್ಯ ಬಘೀರಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾವು ಮೊದಲ ದಿನ 3.75 ಕೋಟಿ ಗಳಿಸಿತ್ತು. ಆದರಂತೆ ಬಘೀರಾ 2.80 ಕೋಟಿ ಮೊದಲ ದಿನ ಗಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us