/newsfirstlive-kannada/media/post_attachments/wp-content/uploads/2025/04/shushma2.jpg)
ನಿರೂಪಕಿ, ನಟಿ ಸುಷ್ಮಾ ರಾವ್ ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದರು. ಸದ್ಯ ಟಾಪ್ ಲಿಸ್ಟ್ನಲ್ಲಿ ಭಾಗ್ಯಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ. ಅದರಲ್ಲೂ ಸುಷ್ಮಾ ಅವರ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. ನಟಿ ಸುಷ್ಮಾ ರಾವ್ ಅವರನ್ನು ತುಂಬಾ ಪ್ರೀತಿಸೋ ಜನರು ಕೂಡ ಇದ್ದಾರೆ.
ಇದನ್ನೂ ಓದಿ: ಕೇವಲ ಕಂಪ್ಯೂಟರ್ ಸೈನ್ಸ್ ಮಾತ್ರವಲ್ಲ.. ಇಂಜಿನಿಯರಿಂಗ್ನಲ್ಲಿ ಇವೆ ಸಾಕಷ್ಟು ಸ್ಪೆಷಲ್ ಕೋರ್ಸ್ಗಳು
ಆದ್ರೆ, ಇದೀಗ ನಟಿ ಸುಷ್ಮಾ ಅವರು ಹೊಸ ಸಾಹಸಕ್ಕೆ ಮುಂದಾಗಿದೆ. ಹೌದು, ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ ನಟಿ ಸುಷ್ಮಾ ಕೆ ರಾವ್.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಆಗಿ ಸುಷ್ಮಾ ಕೆ ರಾವ್ ಅಭಿನಯಿಸುತ್ತಿದ್ದಾರೆ. ಶೂಟಿಂಗ್ ಬ್ಯುಸಿ ನಡುವೆಯೂ ನಟಿ ಸುಷ್ಮಾ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.
View this post on Instagram
ಭಾಗ್ಯ ಅಲಿಯಾಸ್ ಸುಷ್ಮಾ ರಾವ್ ನಡೆ ಮೌಂಟ್ ಎವರೆಸ್ಟ್ ಶಿಖರದ ಕಡೆ. ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು. ಹಾಗಂತ ಈ ಬಾರಿ ಅವರು ಹೋಗ್ತಾ ಇರೋದು ಮೌಂಟ್ ಎವರೆಸ್ಟ್ ಹತ್ತೋಕೆ ಅಲ್ಲ, ಬದಲಾಗಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ, ಅದು ಒಂಟಿಯಾಗಿ. ಈ ಬಗ್ಗೆ ಖುದ್ದು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಭಾಗ್ಯ ಅವರ ಹೊಸ ಸಾಹಸಕ್ಕೆ ಅಭಿಮಾನಿಗಳು ಕೂಡ ಸಾಥ್ ಕೊಟ್ಟಿದ್ದಾರೆ. ನೀವು ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ನಮಗೆಲ್ಲಾ ಸ್ಫೂರ್ತಿ ಎಂದು ಮನಸಾರೆ ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ