/newsfirstlive-kannada/media/post_attachments/wp-content/uploads/2025/04/tanvi1.jpg)
ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀ. ಇದೇ ಧಾರಾವಾಹಿಯಲ್ಲಿ ಭಾಗ್ಯಳ ಮಗಳ ಪಾತ್ರದಲ್ಲಿ ನಟಿಸುತ್ತಿರುವ ತನ್ವಿ ಅಲಿಯಾಸ್ ನಟಿ ಅಮೃತ ಗೌಡ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದಾರೆ.
ಇದನ್ನೂ ಓದಿ:ಶೂಟಿಂಗ್ ಜೊತೆಗೆ ಓದು.. PU ರಿಸಲ್ಟ್ ನೋಡಿ ಸಿಕ್ಕಾಪಟ್ಟೆ ಕುಣಿದೆ; ಅಮೃತ ಗೌಡ ಏನಂದ್ರು?
ಹೌದು, ಭಾಗ್ಯಲಕ್ಷ್ಮೀಯಲ್ಲಿ ತನ್ವಿಯಾಗಿ ಅಭಿನಯಿಸುತ್ತಿರೋ ನಟಿ ಅಮೃತ ಗೌಡ ಪೋಷಕರು ಸದ್ಯ ಖುಷಿಯಲ್ಲಿದ್ದಾರೆ. ಅಮೃತಾ ಗೌಡ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಶೇಕಡಾ 91ರಷ್ಟು ಅಂಕ ಪಡೆದುಕೊಂಡು ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಸೀರಿಯಲ್ ಶೂಟಿಂಗ್ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ 91 ಅಂಕ ಪಡೆದಿರುವ ತನ್ವಿ ಎಲ್ಲರಿಗೂ ಮಾದರಿಯಾಗಿದ್ದಾಳೆ.
ಇನ್ನೂ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿರೋ ಖುಷಿಯಲ್ಲಿ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ್ದಾರೆ ನಟಿ ಅಮೃತಾ ಗೌಡ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿಜ ಹೇಳ್ತೀನಿ, ಶೂಟಿಂಗ್ ಸೆಟ್ನಲ್ಲಿ ನಾನು ಬುಕ್ ಹಿಡಿಯುತ್ತಿದ್ದೆ ಆದ್ರೆ ಓದುತ್ತಾ ಇರಲಿಲ್ಲ. ಒಂದು ಗಂಟೆ ನನಗೆ ಟೈಮ್ ಸಿಕ್ಕರೇ ಸುಮ್ನೆ ಪುಸ್ತಕವನ್ನು ಹಿಡಿದುಕೊಂಡು ನೋಡುತ್ತಿದೆ. ನನ್ನ ಕಾಲೇಜು ಪ್ರಿನ್ಸಿಪಾಲ್ಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ ಅವರು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ನಾನು ಸೀರಿಯಲ್ಗೆ ಸೆಲೆಕ್ಟ್ ಆಗಿದ್ದೀನಿ ಅಂತ ಹೇಳಿದಾಗ ತುಂಬಾನೇ ಖುಷಿ ಪಟ್ಟರು ಎಂದಿದ್ದಾರೆ.
ಹೀಗೆ ನಟಿ ಅಮೃತಾ ಗೌಡ ತಾಯಿ ಮಾತಾಡಿ, ತಮಗೆ ಮಗಳು ಸಿಎ ಆಗುವ ಆಸೆ ಇದೆ. ಆದರೆ ಅದು ಅವಳಿಗೆ ಬಿಟ್ಟದ್ದು. ಅವಳಿಗೆ ಏನು ಆಸೆ ಇದ್ಯೋ ಅದೇ ಮಾಡಲಿ. ಅವಳು ಏನೇ ಮಾಡಿದರೂ ಯೋಚನೆ ಮಾಡಿ ಮಾಡುತ್ತಾಳೆ. ಜಯಶಾಲಿ ಆಗ್ತಾಳೆ ಎನ್ನುವ ನಂಬಿಕೆ ಇದೆ ಎನ್ನುವ ಮೂಲಕ ಮಗಳಿಗೆ ಏನೇ ಆಸೆ ಇದ್ದರೂ ಅದನ್ನು ಪೂರೈಸುವುದಾಗಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ