ಶೂಟಿಂಗ್​ ಜೊತೆಗೆ ಓದು.. PU ರಿಸಲ್ಟ್ ನೋಡಿ ಸಿಕ್ಕಾಪಟ್ಟೆ ಕುಣಿದೆ; ಅಮೃತ ಗೌಡ ಏನಂದ್ರು?

author-image
Veena Gangani
Updated On
ಶೂಟಿಂಗ್​ ಜೊತೆಗೆ ಓದು.. PU ರಿಸಲ್ಟ್ ನೋಡಿ ಸಿಕ್ಕಾಪಟ್ಟೆ ಕುಣಿದೆ; ಅಮೃತ ಗೌಡ ಏನಂದ್ರು?
Advertisment
  • ನಟಿ ಅಮೃತಾ ಗೌಡಗೆ ಫ್ಯಾನ್ಸ್​ಗಳಿಂದ ಶುಭಾಶಯಗಳ ಮಹಾಪೂರ
  • ಸೀರಿಯಲ್​ ಶೂಟಿಂಗ್​ ಮಧ್ಯೆಯೂ ಭರ್ಜರಿ ಅಂಕ ಪಡೆದ ತನ್ವಿ
  • ಭಾಗ್ಯಲಕ್ಷ್ಮೀ ಸೀರಿಯಲ್​ ಮೂಲಕ ಸಖತ್​ ಫೇಮಸ್ ಆಗಿರೋ ನಟಿ

ಭಾಗ್ಯಲಕ್ಷ್ಮೀ ಧಾರಾವಾಹಿಯ ಯುವ ನಟಿ ಸಖತ್​ ಖುಷಿಯಲ್ಲಿದ್ದಾರೆ. ಭಾಗ್ಯಲಕ್ಷ್ಮೀ ಸೀರಿಯಲ್​ನಲ್ಲಿ ಭಾಗ್ಯ ಮಗಳ ಪಾತ್ರದಲ್ಲಿ ನಟಿಸುತ್ತಿರುವ ತನ್ವಿ ಅಲಿಯಾಸ್​ ನಟಿ ಅಮೃತ ಗೌಡ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸ್​ ಆಗಿದ್ದಾರೆ.

ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!

ಹೌದು, ಕನ್ನಡದ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮೀಯಲ್ಲಿ ಸುಷ್ಮಾ ಕೆ. ರಾವ್ ಅವರ ಮಗಳಾಗಿ ಅಭಿನಯಿಸುತ್ತಿರೋ ತನ್ವಿ ಅಲಿಯಾಸ್​ ನಟಿ ಅಮೃತ ಗೌಡ ಪೋಷಕರು ಸದ್ಯ ಖುಷಿಯಲ್ಲಿದ್ದಾರೆ. ಅಮೃತಾ ಗೌಡ ದ್ವಿತೀಯ ಪಿಯುಸಿ ಕಾಮರ್ಸ್​ ವಿಭಾಗದಲ್ಲಿ ಶೇಕಡಾ 91 ಅಂಕ ಪಡೆದುಕೊಂಡು ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಸೀರಿಯಲ್​ ಶೂಟಿಂಗ್​ ​ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ 91 ಅಂಕ ಪಡೆದಿರುವ ತನ್ವಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸ್ ಆಗಿರೋ ಖುಷಿಯಲ್ಲಿ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ್ದಾರೆ ನಟಿ ಅಮೃತಾ ಗೌಡ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿಜ ಹೇಳ್ತೀನಿ, ಶೂಟಿಂಗ್​ ಸೆಟ್​ನಲ್ಲಿ ನಾನು ಬುಕ್​ ಹಿಡಿಯುತ್ತಿದ್ದೆ ಆದ್ರೆ ಓದುತ್ತಾ ಇರಲಿಲ್ಲ. ಒಂದು ಗಂಟೆ ನನಗೆ ಟೈಮ್​ ಸಿಕ್ಕರೇ ಸುಮ್ನೆ ಪುಸ್ತಕವನ್ನು ಹಿಡಿದುಕೊಂಡು ನೋಡುತ್ತಿದೆ. ನನ್ನ ಕಾಲೇಜು ಪ್ರಿನ್ಸಿಪಾಲ್​ಗೆ ಥ್ಯಾಂಕ್ಸ್​ ಹೇಳಬೇಕು. ಏಕೆಂದರೆ ಅವರು ತುಂಬಾನೇ ಸಪೋರ್ಟ್ ಮಾಡಿದ್ದಾರೆ. ನಾನು ಸೀರಿಯಲ್​ಗೆ ಸೆಲೆಕ್ಟ್ ಆಗಿದ್ದೀನಿ ಅಂತ ಹೇಳಿದಾಗ ತುಂಬಾನೇ ಖುಷಿ ಪಟ್ಟರು.

ಆಮೇಲೆ ನಾನು ಓದುತ್ತಿನೋ ಇಲ್ವೋ ಅಂತ ಡೌಡ್​ನಲ್ಲಿದ್ದರು. ಆದ್ರೆ ನಾನು ಬರೆದ ಎಕ್ಸಾಂ ನೋಡಿ ಅವರಿಗೆ ಧೈರ್ಯ ಬಂತು. ನಮ್ಮ ಟೀಚರ್​ಗಳು ನನಗೆ ತುಂಬಾನೇ ಸಪೋರ್ಟ್ ಮಾಡಿದ್ರೂ, ನನಗೆ ಅರ್ಥವಾಗಿಲ್ಲ ಅಂದ್ರೆ ಅರ್ಥ ಮಾಡಿಸುತ್ತಿದ್ದರು. ಎಕ್ಸಾಂ ಟೈಮ್​ನಲ್ಲಿ ನಾನು ಅಮ್ಮ ಜಗಳ ಆಡ್ತಾ ಇದ್ವೀ. ಅವರು ಓದು.. ಓದು ಅಂತ ಹೇಳುತ್ತಲೇ ಇದ್ದರು. ಆದ್ರೆ 24 ಗಂಟೆ ನನಗೆ ಬುಕ್​ ಹಿಡಿದುಕೊಂಡು ಇರಲು ಆಗೋದಿಲ್ಲ. ಓದುವುದರ ಜೊತೆಗೆ ಮಸ್ತಿ ಕೂಡ ಮಾಡ್ತಾ ಇದ್ದೇ. ಮುಂದೆ BBA ಮಾಡಿ MBA ಮಾಡಬೇಕು ಅಂತ ಅಂದುಕೊಂಡಿದ್ದೀನಿ ಎಂದಿದ್ದಾರೆ.

publive-image

ಅಮೃತಾ ಗೌಡ ಕನ್ನಡದಲ್ಲಿ 97, ಇಂಗ್ಲಿಷ್​ನಲ್ಲಿ 81, ಎಕನಾಮಿಕ್ಸ್​ನಲ್ಲಿ 93, ಬ್ಯುಸಿನೆಸ್ ಸ್ಟಡೀಸ್ 83, ಅಕೌಂಟೆನ್ಸಿ 94, ಸ್ಟಾಟಿಸ್ಟಿಕ್ಸ್ 95 ಅಂಕಗಳನ್ನು ಪಡೆದಿದ್ದಾರೆ. ಆ ಮೂಲಕ ಒಟು 543 ಅಂಕಗಳನ್ನು ಪಡೆದು 91ಶೇಕಡ ಪಡೆದು ಡಿಸ್ಟಿಂಕ್ಷನ್​ನಲ್ಲಿ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾರೆ. ಶೂಟಿಂಗ್ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಚೆನ್ನಾಗಿ ಓದಿ ಡಿಸ್ಟಿಂಕ್ಷನ್​ ಪಡೆದಿರುವ ತನ್ವಿ ಅಲಿಯಾಸ್ ಅಮೃತಾ ಗೌಡರನ್ನು ವೀಕ್ಷಕರು ಮೆಚ್ಚಿಕೊಂಡಿದ್ದು ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಅಭಿನಂದನೆಗಳು, ನಟನೆ ಮಾಡುತ್ತಾ ಓದುವುದು ತುಂಬಾ ಕಷ್ಟ, ವಿಶೇಷವಾಗಿ ಡಿಸ್ಟಿಂಕ್ಷನ್ ಪಡೆಯಲು, ನೀವು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಅಂತ ಕಾಮೆಂಟ್ಸ್​ ಹಾಕುವ ಮೂಲಕ ಅಮೃತಾಗೆ ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment