newsfirstkannada.com

ಅತ್ತೆ-ಸೊಸೆ ಕಾಂಬಿನೇಷನ್​ಗೆ ಭೇಷ್ ಎಂದ ಭಾಗ್ಯಲಕ್ಷ್ಮೀ ಅಭಿಮಾನಿಗಳು..!

Share :

Published July 16, 2023 at 8:44am

Update July 16, 2023 at 11:05am

    ಗಂಡನಿಗೆ ಬೇಡವಾದ ಭಾಗ್ಯ, ಅತ್ತೆಯ ಗಟ್ಟಿ ನಿರ್ಧಾರಕ್ಕೆ ಫ್ಯಾನ್ಸ್​ ಫಿದಾ

    ಭಾಗ್ಯ ಓದಬಾರದು ಅಂತ ಸಂಚು ರೂಪಿಸುತ್ತಿದ್ದಾನೆ ತಾಂಡವ್​!

    ಸಾಮಾಜಿಕ ಜಾಲತಾಣದಲ್ಲಿ ಅತ್ತೆ-ಸೊಸೆ ಕಾಂಬಿನೇಷನ್​ಗೆ ಫುಲ್​​​​ ಮಾರ್ಕ್ಸ್

ಗೃಹಿಣಿ ಬದುಕನ್ನ ವಿಭಿನ್ನ ರೀತಿಯಲ್ಲಿ ಪ್ರೆಸೆಂಟ್​ ಮಾಡುತ್ತಿರುವ ಭಾಗ್ಯಲಕ್ಷ್ಮೀಗೆ ವೀಕ್ಷಕರೂ ಭೇಷ್​ ಎನ್ನುತ್ತಿದ್ದಾರೆ. ಅದರಲ್ಲೂ ಅತ್ತೆ-ಸೊಸೆ ಕಾಂಬಿನೇಷನ್​ ಸೂಪರ್​ ಡೂಪರ್​ ಹಿಟ್​ ಆಗಿದೆ. ಸೊಸೆಯನ್ನು ಓದಿಸುವ ಕುಸುಮಾ ನಿರ್ಧಾರಕ್ಕೆ ಪ್ರಶಂಸೆ ಕೇಳಿಬರುತ್ತಿದೆ. ಸೀರಿಯಲ್​ ನೋಡುವ ಪ್ರತಿಯೊಬ್ಬ ಹೆಣ್ಣು ಮಗಳು ನನಗೂ ಇಂಥ ಅತ್ತೆ ಸೀಗಬೇಕು ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ. ಗಂಡನಿಗೆ ಬೇಡವಾದ ಭಾಗ್ಯ ಅತ್ತೆಯ ಗಟ್ಟಿ ನಿರ್ಧಾರದಿಂದ ಶಾಲೆಯ ಮೆಟ್ಟಿಲೇರಲೂ ಸಜ್ಜಾಗುತ್ತಿದ್ದಾಳೆ.

ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನ ಎನ್ನುವಂತೆ ಭಾಗ್ಯ ಓದಬಾರದು ಅಂತ ತಾಂಡವ್​ ಸಂಚಿನ ಮೇಲೆ ಸಂಚು ರೂಪಿಸುತ್ತಿದ್ದಾನೆ. ಗಂಡನ ವಂಚನೆ ಗೊತ್ತಗಾದ ಮುಗ್ಧ ಭಾಗ್ಯ ಓದಿನ ಜೊತೆಗೆ ಸಂಸಾರವನ್ನ ತೂಗಿಸುವ ನಿರ್ಧಾರ ಮಾಡಿದ್ದಾಳೆ. ಇನ್ನು, ಸೀರಿಯಲ್​ ನೋಡೋ ಹೆಣ್ಣುಮಕ್ಕಳಿಗೆ ಭಾಗ್ಯ ಸ್ಪೂರ್ತಿ ತುಂಬುತ್ತಿದ್ದಾಳೆ. ಶಿಕ್ಷಣ ಪಡೆಯಲು ವಯಸ್ಸಿನ ಮಿತಿಯಿಲ್ಲ. ಕಲಿಯೋ ಆಸೆ, ಹುಮ್ಮಸ್ಸು ಇದ್ರೆ ವಿದ್ಯೆ ಒಲಿದು ಒಲಿಯುತ್ತೆ ಎಂಬುವುದನ್ನ ಭಾಗ್ಯ ಪಾತ್ರ ತೋರಿಸಿಕೊಡಲಿದೆ. ಒಟ್ಟಿನಲ್ಲಿ ಎಲ್ಲಾ ಅತ್ತೆಯಂದಿರೂ ಕುಸುಮಾ ಪಾತ್ರದ ರೀತಿ ಯೋಚಿಸಿದರೆ ಅದೇಷ್ಟೂ ಮಹಿಳೆಯರಿಗೆ ಮರಳಿ ಶಾಲೆಗೆ ಹೋಗೋ ಭಾಗ್ಯ ದೊರೆಯೋದು ಖಚಿತ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಅತ್ತೆ-ಸೊಸೆ ಕಾಂಬಿನೇಷನ್​ಗೆ ಭೇಷ್ ಎಂದ ಭಾಗ್ಯಲಕ್ಷ್ಮೀ ಅಭಿಮಾನಿಗಳು..!

https://newsfirstlive.com/wp-content/uploads/2023/07/bhagya-2.jpg

Load More