/newsfirstlive-kannada/media/post_attachments/wp-content/uploads/2024/11/BHAIRATI-RANAGAL-FIRST-DAY.jpg)
ಇಂದಿನಿಂದ ರಾಜ್ಯಾದ್ಯಂತ ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾಗಿದೆ. ಈ ಮೊದಲು ಮಫ್ತಿ ಹೆಸರಲ್ಲಿ ಬಂದಿದ್ದ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ಶಿವಣ್ಣ ಮಿಂಚಿದ್ರು. ಈಗ ಅದರ ಫ್ರೀಕ್ವೆಲ್ ಸಿನಿಮಾ ಆಗಿರುವ ಭೈರತಿ ರಣಗಲ್ ಸಿನಿಮಾದಲ್ಲಿ ಅದೇ ಪಾತ್ರದಲ್ಲಿ ಶಿವರಾಜ್​ಕುಮಾರ್​ ಭರ್ಜರಿ ಹವಾ ಕ್ರಿಯೆಟ್ ಮಾಡಿದ್ದಾರೆ. ಇಂದು ರಿಲೀಸ್ ಆದ ಸಿನಿಮಾಗೆ ಭರ್ಜರಿ ರಿಸ್ಪಾನ್ಸ್ ಸಿಕ್ಕಿದೆ.
ಭೈರತಿ ರಣಗಲ್ ಸಿನಿಮಾದಲ್ಲಿ ಶಿವಣ್ಣ ಆವ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೋ ಫ್ಯಾನ್ಸ್ಗಳು ಕೂಡ ಅದೇ ಗೆಟಪ್ನಲ್ಲಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಪ್ಪು ಪಂಚೆ ಹಾಗೂ ಕಪ್ಪು ಶರ್ಟ್ ಧರಿಸಿ ಬಂದ ಅಭಿಮಾನಿಗಳು ಪಟಾಕಿ ಹೊಡೆದು. ಶಿವಣ್ಣನಿಗೆ ಜೈಕಾರ ಕೂಗಿ ಸಂಭ್ರಮಿಸಿದರು.
/newsfirstlive-kannada/media/post_attachments/wp-content/uploads/2024/11/BHAIRATI-RANAGAL-FIRST-DAY-1.jpg)
ಇನ್ನು ಅಭಿಮಾನಿಗಳ ಜೊತೆಯೇ ಸಿನಿಮಾ ನೋಡಿದ ನಟ ಡಾಲಿ ಧನಂಜಯ್, ನಿರ್ದೇಶಕ ನರ್ತನ್ ಪಾತ್ರವನ್ನ ತುಂಬಾ ಚೆನ್ನಾಗಿ ಕಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ. ಭೈರತಿ ರಣಗಲ್ ಶಿವಣ್ಣನ ಅಭಿಮಾನಿಗಳಿಗೆ ಹಾಗೂ ಚಿತ್ರಪ್ರೇಮಿಗಳಿಗೆ ಈ ಸಿನಿಮಾ ಅಕ್ಷರಶಃ ಹಬ್ಬದೂಟ ಎಂದು ಹೇಳಿದ್ದಾರೆ. ಇಂಟರ್​ವಲ್​ನಲ್ಲಿ ಇಡೀ ಥಿಯೇಟರೇ ಎದ್ದು ನಿಂತುಕೊಂಡಿತ್ತು. ದಯವಿಟ್ಟು ಅಭಿಮಾನಿಗಳು ಮೊಬೈಲ್​ನಲ್ಲಿ ಶೂಟ್ ಮಾಡಿ ಫೇಸ್​ಬುಕ್ ಅಲ್ಲಿ ಇಲ್ಲಿ ಹಾಕಬೇಡಿ ಎಂದು ಕೇಳಿಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us