ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಭೈರತಿ ರಣಗಲ್ ಎಂಟ್ರಿ ​! ಹೇಗಿದೆ ಸಿನಿಮಾದ ಕ್ರೇಜ್​?

author-image
Gopal Kulkarni
Updated On
ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಭೈರತಿ ರಣಗಲ್ ಎಂಟ್ರಿ ​! ಹೇಗಿದೆ ಸಿನಿಮಾದ ಕ್ರೇಜ್​?
Advertisment
  • ಬಾಕ್ಸ್​ ಆಫೀಸ್ ಧೂಳಿಪಟ ಮಾಡಲು ಬಂದ ಭೈರತಿ ರಣಗಲ್​
  • ಸೀಕ್ವೆಲ್ ಬದಲು ಫ್ರೀಕ್ವೆಲ್ ಕಥೆ ಹೇಳುತ್ತಿರುವುದೇಕೆ ನಿರ್ದೇಶಕರು?
  • ಭೈರತಿ ರಣಗಲ್ ಬಗ್ಗೆ ನಟ ಡಾಲಿ ಧನಂಜಯ್ ಹೇಳಿದ್ದು ಏನು?

ಕಪ್ಪು ಶರ್ಟ್.. ಕಪ್ಪು ಪಂಚೆಯುಟ್ಟು ಭೈರತಿ ರಣಗಲ್ ಆಗಿ ಹುಚ್ಚೆಬ್ಬಿಸಿದ್ದ ಶಿವಣ್ಣ, ಈಗ ಮತ್ತೊಮ್ಮೆ ರಣಗಲ್ ಸಾಮ್ರಾಜ್ಯದ ಮೈಲಿಗಲ್ಲು ನೆಡಲು ಬೆಳ್ಳಿತೆರೆಗೆ ಬರುತ್ತಿದ್ದಾರೆ. ಇಂದಿನಿಂದಲೇ ಥಿಯೇಟರ್‌ಗಳಲ್ಲಿ ಬೈರತಿ ರಣಗಲ್ ಆರ್ಭಟ ಶುರುವಾಗಲಿದೆ.

ಶಿವಣ್ಣನ ಸಿನಿಮಾ ಅಂದರೆನೇ ಒಂದು ಫ್ಯಾನ್‌ ಬೇಸ್‌ ಇದೆ. ಮಾಸ್ ಕಿಂಗ್ ಶಿವಣ್ಣಗೆ ಗ್ಯಾಂಗ್‌ಸ್ಟರ್ ಸಿನಿಮಾಗಳಂದ್ರೆ ಲಕ್ಕಿ. ಮಿಸ್ಸಿಲ್ಲದೇ ಸಕ್ಸಸ್‌ ಪಕ್ಕಾನೇ. ಮಫ್ತಿಯಲ್ಲಿ ಭೈರತಿ ರಣಗಲ್ ಪಾತ್ರದ ಇಂಟೆನ್ಸಿಟಿ, ಗುರಿಯ ಕ್ಲಾರಿಟಿಗೆ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದರು.

ಇದನ್ನೂ ಓದಿ:ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿದ್ದ ರಾಯಚೂರು ಯುವಕ ಅರೆಸ್ಟ್​

ಮಫ್ತಿ ನೋಡ್ತಿದ್ದಂತೆ ಭೈರತಿ ರಣಗಲ್ ಪಾತ್ರ ಎಲ್ಲರನ್ನೂ ಆವರಿಸಿಬಿಟ್ಟಿತ್ತು. ರಣಗಲ್ ಹಿನ್ನೆಲೆ ಏನು ಅನ್ನೋದು ಎಲ್ಲರ ಕುತೂಹಲದ ಪ್ರಶ್ನೆ ಆಗಿತ್ತು. ಅದಕ್ಕೀಗ ಸೃಷ್ಟಿಯಾಗಿರೋ ಸಿನಿಮಾನೇ ಈ ಭೈರತಿ ರಣಗಲ್.

ಇದನ್ನೂ ಓದಿ:ನಟಿ ಕಾವ್ಯಾ ಗೌಡ ಮಗಳನ್ನು ಎತ್ತಿ ಮುದ್ದಾಡಿದ ವಿಜಯಲಕ್ಷ್ಮಿ ದರ್ಶನ್; ಕ್ಯೂಟ್​ ವಿಡಿಯೋ ಇಲ್ಲಿದೆ

ಎಲ್ಲರೂ ಸೀಕ್ವೆಲ್ ಹಿಂದೆ ಓಡ್ತಿರೋವಾಗ ಮಫ್ತಿ ಟೀಂ ಮೊದಲ ಬಾರಿಗೆ ಕನ್ನಡದಲ್ಲಿ ಪ್ರೀಕ್ವೆಲ್ ಪರಿಚಯ ಮಾಡ್ತಿದೆ. ಭೈರತಿ ರಣಗಲ್ ಈ ಮಟ್ಟಿಗೆ ಗ್ಯಾಂಗ್​ಸ್ಟಾರ್ ಆಗೋಕೆ ಕಾರಣ ಏನು ಅನ್ನೋದಕ್ಕೆ ನಿಮಗೆ ಪಕ್ಕಾ ಉತ್ತರ ಸಿಗುತ್ತೆ.

ಭೈರತಿ ರಣಗಲ್ ಕಂಟೆಂಟ್ ಈಗಾಗಲೇ ದೊಡ್ಡ ಮಟ್ಟದ ಹೈಪ್ ಸೃಷ್ಟಿಸಿದ್ದು, ಇಂದು ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ. ಮುಂಗಡ ಟಿಕೆಟ್ ಬುಕ್ಕಿಂಗ್​ನಲ್ಲಿ ಭಾರಿ ಮೊತ್ತದ ಟಿಕೆಟ್ ಸೇಲ್ ಆಗಿದೆ. ಇಂದು ಬಿಡುಗಡೆ ಸಂಭ್ರಮದ ವಿಶೇಷ ಏನಂದ್ರೆ ಅಭಿಮಾನಿಗಳು ಸೇರಿದಂತೆ ಡಾಲಿ ಧನಂಜಯ್ ಕೂಡ ಶಿವಣ್ಣನ ಲುಕ್‌ನಲ್ಲೇ ಫ್ಯಾನ್ಸ್ ಜೊತೆ ಸಿನಿಮಾ ನೋಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment