ಟೀಮ್ ಇಂಡಿಯಾಕ್ಕೆ ಆಂಗ್ಲರ ನಾಡಲ್ಲಿ ಬಾರ್ಮಿ ಆರ್ಮಿ ಕಾಟ.. ಕೌಂಟರ್​ಗೆ ರೆಡಿಯಾದ ಭಾರತ್​ ಆರ್ಮಿ!

author-image
Bheemappa
ಟೀಮ್ ಇಂಡಿಯಾಕ್ಕೆ ಆಂಗ್ಲರ ನಾಡಲ್ಲಿ ಬಾರ್ಮಿ ಆರ್ಮಿ ಕಾಟ.. ಕೌಂಟರ್​ಗೆ ರೆಡಿಯಾದ ಭಾರತ್​ ಆರ್ಮಿ!
Advertisment
  • ಬಾರ್ಮಿ ಆರ್ಮಿ ಮತ್ತು ಭಾರತ್​ ಆರ್ಮಿಗೆ ಇರೋ ವ್ಯತ್ಯಾಸ?
  • ಮೈದಾನದಲ್ಲಿ ಆಡುತ್ತಿದ್ರೆ ಉರಿದುಂಬಿಸೋ ಭಾರತ್​ ಆರ್ಮಿ
  • ಭಾರತ ತಂಡ ವಿದೇಶಕ್ಕೆ ಹೋದ್ರೆ ಆರ್ಮಿ ಶಕ್ತಿ ಇದ್ದೇ ಇರುತ್ತೆ

ಕ್ರಿಕೆಟ್​ ಅನ್ನೋದು ಆನ್​ಫೀಲ್ಡ್​ ಆಟಕ್ಕೆ ಮಾತ್ರ ಈಗ ಸೀಮಿತವಾಗಿಲ್ಲ. ಆಫ್​ ದ ಫೀಲ್ಡ್​ನ ಆ್ಯಕ್ಟಿವಿಟಿಯೂ ಇದ್ರ ಭಾಗವಾಗಿದೆ. ಅದ್ರಲ್ಲೂ, ಫ್ಯಾನ್​ ವಾರ್​​ ಅಂತೂ ನೆಕ್ಸ್ಟ್​ ಲೆವೆಲ್​ಗೆ ಬಂದಿದೆ. ಇಂಗ್ಲೆಂಡ್​ ತಂಡದ ಅಭಿಮಾನಿಗಳ ಪಡೆಯಾದ ಬಾರ್ಮಿ ಆರ್ಮಿ ಇದ್ಯಲ್ಲ.. ಇದ್ಕಂತೂ ಎದುರಾಳಿ ತಂಡವನ್ನ ಕೆಣಕೋದೆ ಕೆಲಸವಾಗಿ ಬಿಟ್ಟಿತ್ತು. ಇದೀಗ ಈ ಬಾರ್ಮಿ ಆರ್ಮಿಗೆ ಕೌಂಟರ್​ ಕೊಡೋಕೆ ಭಾರತ್​ ಆರ್ಮಿ ಬಂದಿದೆ.

‘ಬಾರ್ಮಿ ಆರ್ಮಿ’.! ಇಂಗ್ಲೆಂಡ್​ ಕ್ರಿಕೆಟ್​​​​ ತಂಡದ ಬಿಗ್ಗೆಸ್ಟ್​ ಫ್ಯಾನ್ ಕ್ಲಬ್. ಇಂಗ್ಲೆಂಡ್, ವಿಶ್ವದ ಯಾವುದೇ ಮೂಲ್ಲೆಯಲ್ಲಾದ್ರೂ ಪಂದ್ಯವಾಡ್ಲಿ ಅಲ್ಲಿ ಬಾರ್ಮಿ ಆರ್ಮಿಯ ಹಾಜರಿ ಇದ್ದೇ ಇರುತ್ತೆ. ಇಂಗ್ಲೆಂಡ್ ಯಾರದ್ದೇ ವಿರುದ್ಧ ಆಡಲಿ ಆ ಎದುರಾಳಿ ತಂಡವನ್ನ ಟೀಕಿಸೋದು, ಆಟಗಾರರ ಕಾಲೆಳೆಯೋದು, ಫ್ಯಾನ್ಸ್​​ನ ಕೆಣಕೋದೆ ಇವರ ಕೆಲಸ. ಪಂದ್ಯದ ವೇಳೆ, ಎದುರಾಳಿ ತಂಡದ ಆಟಗಾರರನ್ನ ಸುಖಾ ಸುಮ್ಮನೆ ಕೆಣಕಿ, ಅವ್ರನ್ನ ಮೆಂಟಲಿ ಡಿಸ್ಟರ್ಬ್​ ಮಾಡೋದು, ಅವರ ಆತ್ಮಸ್ಥೈರ್ಯವನ್ನ ಕುಗ್ಗಿಸೋದೆ ಬಾರ್ಮಿ ಆರ್ಮಿಯ ಕೆಲಸ.

publive-image

ಟೀಮ್​ ಇಂಡಿಯಾನೇ ಬಾರ್ಮಿ ಆರ್ಮಿ ಟಾರ್ಗೆಟ್​.!

ಪಂದ್ಯ ನಡೆಯೋ ವೇಳೆ ಮೈದಾನದಲ್ಲಿ ಮಾತ್ರವಲ್ಲ, ಸೋಷಿಯಲ್​ ಮೀಡಿಯಾದಲ್ಲೂ ಈ ಬಾರ್ಮಿ ಆರ್ಮಿ ಎದುರಾಳಿ ಪಡೆಯನ್ನ ಟೀಕಿಸುತ್ತೆ. ಬೇರೆ ದೇಶಗಳ ಆಟಗಾರರನ್ನ, ಟ್ರೋಲ್ ಮಾಡೋ ಮೂಲಕ ಬಾರ್ಮಿ ಆರ್ಮಿ, ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತೆ. ಸದ್ಯ ಟೀಮ್​ ಇಂಡಿಯಾ ಇಂಗ್ಲೆಂಡ್​ ಪ್ರವಾಸದಲ್ಲಿರೋದ್ರಿಂದ ಶುಭ್​ಮನ್​ ಗಿಲ್​ ಪಡೆಯೇ ಬಾರ್ಮಿ ಆರ್ಮಿಯ ಮೇನ್ ಟಾರ್ಗೆಟ್ ಆಗಿದೆ.

ಭಾರತದ ಅಭಿಮಾನಿಗಳ ಹೊಸ ಕ್ಲಬ್​.. ಭಾರತ್​ ಆರ್ಮಿ.!

ಇಷ್ಟು ದಿನ.. ಬಾರ್ಮಿ ಆರ್ಮಿ ಆಡಿದ್ದೇ ಆಟವಾಗಿತ್ತು. ಆದ್ರೀಗ ಈ ಬಾರ್ಮಿ ಆರ್ಮಿಗೆ ಕೌಂಟರ್​ ಕೊಡೋಕೆ ಹೊಸ ಆರ್ಮಿ ಬಂದಿದೆ. ಅದೇ ನಮ್ಮ ಟೀಮ್​ ಇಂಡಿಯಾ ಅಭಿಮಾನಿಗಳ ಭಾರತ್​ ಆರ್ಮಿ. ಸದ್ಯ ಇಂಗ್ಲೆಂಡ್​ ಪ್ರವಾಸದಲ್ಲಿರೋ ಟೀಮ್​ ಇಂಡಿಯಾಗೆ ಭಾರತ ಆರ್ಮಿಯಿಂದ ಭರಪೂರ ಬೆಂಬಲ ಸಿಗ್ತಿದೆ. ಬಾರ್ಮಿ ಆರ್ಮಿ ಕೆಣಕೋಕೆ ಬಂದಾಗಲೆಲ್ಲಾ ಸಖತ್​ ಕೌಂಟರ್​ ಕೊಡ್ತಿದೆ. ಪಂದ್ಯದ ವೇಳೆ ಸ್ಟ್ಯಾಂಡ್​ನಲ್ಲಿ ನಿಂತು ಭಾರತ್​ ಆರ್ಮಿಯ ಸದಸ್ಯರು ಬೆಂಬಲ ಸೂಚಿಸ್ತಿದ್ದಾರೆ.

ಅಭಿಮಾನಿಗಳ ಜೊತೆ ಮಾತನಾಡಿ ಪಂತ್​​ ಫುಲ್​​ಖುಷ್​.!

ಮ್ಯಾಂಚೆಸ್ಟರ್​​ ಟೆಸ್ಟ್​ನಲ್ಲಿ ಇಂಜುರಿ ನಡುವೆಯೂ ತಂಡಕ್ಕಾಗಿ ರಿಷಭ್​ ಪಂತ್​ ದೇಶಕ್ಕಾಗಿ ಹೋರಾಡಿದರು. ದಿನದಾಟದ ಅಂತ್ಯದ ಬೆನ್ನಲ್ಲೇ ಪಂತ್​ ಮೀಟ್​ ಮಾಡಿ ಭಾರತ್​ ಆರ್ಮಿ ಅಭಿನಂದನೆ ಸಲ್ಲಿಸಿದರು. ಭಾರತ್​ ಆರ್ಮಿ ಭೇಟಿಯಾದ ಪಂತ್​ ಖುಷ್​ ಆದ್ರು. ಯಾವುದೇ ದೇಶಕ್ಕೆ ಹೋದ್ರೂ ಬಂದು ಬೆಂಬಲ ಸೂಚಿಸೋ ಆರ್ಮಿಗೆ ಧನ್ಯವಾದ ಹೇಳಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲೂ ಸಖತ್​ ಸ್ಟ್ರಾಂಗ್.!

ಆನ್​ಫೀಲ್ಡ್​ನಲ್ಲಿ ಮಾತ್ರವಲ್ಲ, ಆಫ್​ ದ ಫೀಲ್ಡ್​ನಲ್ಲೂ ಅಷ್ಟೇ ಭಾರತ್​ ಆರ್ಮಿ ದಿನ ಕಳೆದಂತೆ ಸಖತ್​ ಸ್ಟ್ರಾಂಗ್ ಆಗಿದೆ. ಇನ್ಸ್​​ಸ್ಟಾಗ್ರಾಂ, ಟ್ವಿಟರ್​​, ಫೇಸ್​ಬುಕ್​ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಮಿಲಿಯನ್​ಗಟ್ಟಲೇ ಫಾಲೋವರ್ಸ್​ ಭಾರತ್​ ಆರ್ಮಿಗಿದ್ದಾರೆ. ಟೀಮ್​ ಇಂಡಿಯಾ ಪರ ಪೋಸ್ಟ್​​ಗಳನ್ನ ಹಾಕಿ ಭಾರತ್​ ಆರ್ಮಿ ಬೆಂಬಲ ವ್ಯಕ್ತಪಡಿಸುತ್ತೆ.

ಇದನ್ನೂ ಓದಿ:ಲಂಡನ್​ಗೆ ಟ್ರೈನ್​ನಲ್ಲಿ ಪ್ರಯಾಣಿಸಿದ ಶುಭ್​​ಮನ್ ಗಿಲ್ ಪಡೆ.. ರಿಷಭ್ ಪಂತ್​ ಕಾಲಿಗೆ ಪ್ಲಾಸ್ಟರ್!

publive-image

ಅಂದ್ಹಾಗೆ, ಬಾರ್ಮಿ ಆರ್ಮಿ ಮತ್ತು ಭಾರತ್​ ಆರ್ಮಿಗೆ ಒಂದು ವ್ಯತ್ಯಾಸವಿದೆ. ಎದುರಾಳಿ ಆಟಗಾರರನ್ನ ನಮ್ಮ ಭಾರತ ಆರ್ಮಿ ಗೌರವಿಸುತ್ತದೆ. ಟೀಮ್​ ಇಂಡಿಯಾ, ಟೀಮ್​ ಇಂಡಿಯಾ ಆಟಗಾರರ ಹೊರತಾಗಿ ಎದುರಾಳಿ ಆಟಗಾರರ ಬಗ್ಗೆ ಎಲ್ಲೂ ಪೋಸ್ಟ್​​ ಹಾಕಲ್ಲ. ಟೀಕೆ ಮಾಡಲ್ಲ. ಆನ್​​​ಫೀಲ್ಡ್​ನಲ್ಲಿ ಸುಖಾಸುಮ್ಮನೆ ಕಾಲೆಳೆಯಲ್ಲ.

ಸದ್ಯ ನಡೀತಾ ಇರೋ ಇಂಡೋ-ಇಂಗ್ಲೆಂಡ್​ ಸರಣಿಯಲ್ಲಿ ಬಾರತ್​​​​ ಆರ್ಮಿಯ ಪ್ರಸಿದ್ಧಿ ಹೆಚ್ಚಾಗಿದೆ. ಆದ್ರೆ, ಈ ಹಿಂದಿನ ಚಾಂಪಿಯನ್ಸ್​​ ಟ್ರೋಫಿ, ಆಸ್ಟ್ರೇಲಿಯಾ ಪ್ರವಾಸ, T20 ವಿಶ್ವಕಪ್, ಏಕದಿನ ವಿಶ್ವಕಪ್​​ ವೇಳೆಯೂ ಭಾರತ್​ ಆರ್ಮಿ ಟೀಮ್​ ಇಂಡಿಯಾ ಬೆಂಬಲಕ್ಕೆ ನಿಂತಿತ್ತು. ಒಟ್ಟಿನಲ್ಲಿ, ಟೀಮ್​ ಇಂಡಿಯಾ ಯಾವುದೇ ದೇಶಕ್ಕೆ ಪ್ರವಾಸಕ್ಕೆ ಹೋಗಲಿ, ತಂಡವನ್ನ ಬೆಂಬಲಿಸೋ ಒಂದು ಫ್ಯಾನ್​​ ಆರ್ಮಿ ಸಿಕ್ಕಿರೋದು ಆಟಗಾರರ ಆತ್ಮಸ್ಟೈರ್ಯವನ್ನ ಇನ್ನಷ್ಟು ಹೆಚ್ಚಿಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment