ನಾಳೆ ಭಾರತ್ ಬಂದ್.. ಮುಷ್ಕರಕ್ಕೆ ಕಾರಣವೇನು? ಶಾಲೆಗಳಿಗೆ ರಜೆ ಇರುತ್ತಾ? ಏನಿರುತ್ತೆ? ಏನಿರಲ್ಲ?

author-image
Gopal Kulkarni
Updated On
ನಾಳೆ ಭಾರತ್ ಬಂದ್.. ಮುಷ್ಕರಕ್ಕೆ ಕಾರಣವೇನು? ಶಾಲೆಗಳಿಗೆ ರಜೆ ಇರುತ್ತಾ? ಏನಿರುತ್ತೆ? ಏನಿರಲ್ಲ?
Advertisment
  • ನಾಳೆ ಭಾರತ್ ಬಂದ್​ಗೆ ಕರೆ ಕೊಟ್ಟ ರಿಸರ್ವೇಷನ್ ಬಚಾವೋ ಸಂಘರ್ಷ ಸಮಿತಿ
  • ಸುಪ್ರೀಂಕೋರ್ಟ್​ SC, ST ಕುರಿತಾಗಿ ನೀಡಿದ ತೀರ್ಪು ವಿರೋಧಿಸಿ ಹೋರಾಟ
  • ಒಳಪಂಗಡಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಎಸ್​ಸಿ, ಎಸ್​ಟಿ ಒಳಪಂಗಡಗಳ ಕುರಿತಾಗಿ ಸುಪ್ರೀಂಕೋರ್ಟ್​ ನೀಡಿದ್ದ ಆದೇಶವನ್ನು ವಿರೋಧಿಸಿ ರಿಸರ್ವೆಷನ್ ಬಚಾವೋ ಸಂಘರ್ಷ ಸಮಿತಿ ಭಾರತ್ ಬಂದ್​ಗೆ ಕರೆ ಕೊಟ್ಟಿದೆ. ನಾಳೆ ಅಂದ್ರೆ 21 ಆಗಸ್ಟ್‌ ರಂದು​ಭಾರತ್ ಬಂದ್​ಗೆ ಕರೆ ಕೊಡುವುದರ ಮೂಲಕ ಸುಪ್ರೀಂಕೋರ್ಟ್ ತೀರ್ಪನ್ನು ರಿಸರ್ವೆಷನ್ ಬಚಾವೋ ಸಂಘರ್ಷ ಸಮಿತಿ ವಿರೋಧಿಸುತ್ತಿದೆ.

publive-image

ಉತ್ತರ ಪ್ರದೇಶ ಹಾಗೂ ರಾಜಸ್ತಾನದಲ್ಲಿ ಬಂದ್​ನ ತೀವ್ರತೆಯು ಹೆಚ್ಚಾಗುವ ಮುನ್ಸೂಚನೆಯಿದ್ದು ಪ್ರಮುಖವಾಗಿ ಆ ಎರಡು ರಾಜ್ಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆ ಸೇರಿದಂತೆ ಹಲವು ರೀತಿಯ ಭದ್ರತಾ ಪಡೆಗಳನ್ನು ನೇಮಿಸಲಾಗುತ್ತಿದೆ.

ಇದನ್ನೂ ಓದಿ:ಖ್ಯಾತ ನಟರಿಂದಲೇ ಲೈಂಗಿಕ ಕಿರುಕುಳ.. ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ; ವರದಿಯಲ್ಲಿ ಏನಿದೆ?

publive-image

ಭಾರತ್ ಬಂದ್​ಗೆ ಕಾರಣವೇನು..?

ಹಲವು ವರದಿಗಳ ಪ್ರಕಾರ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಒಂದು ತೀರ್ಪು ಈಗ ಭಾರತ್ ಬಂದ್​ಗೆ ಕಾರಣವಾಗಿದೆ. ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ಎಸ್​ಸಿ ಎಸ್​ಟಿಗೆ ಸಮುದಾಯಗಳಲ್ಲೂ ಒಳಪಂಗಡಗಳನ್ನು ಗುರುತಿಸುವಂತೆ ಎಂದು ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿತ್ತು. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ರಿಸರ್ವೆಷನ್ ಬಚಾವೋ ಸಂಘರ್ಷ ಸಮಿತಿ ಸಜ್ಜಾಗಿದೆ. ತಮ್ಮ ಬಂದ್​ಗೆ ಬೆಂಬಲಿಸಬೇಕು ಎಂದು ಹಲವು ರಾಹಕೀಯ ಹಾಗೂ ಸಾಮಾಜಿಕ ಸಂಘಟನೆಗಳಿಗೆ ಮನವಿಯನ್ನು ಕೂಡ ಮಾಡಲಾಗಿದೆ.

ಇದನ್ನೂ ಓದಿ:ಸಮೋಸಾ ತಿಂದ ಅನಾಥಾಶ್ರಮದ ಮೂವರು ವಿದ್ಯಾರ್ಥಿಗಳು ಸಾವು.. ಅಸ್ವಸ್ಥಗೊಂಡ ಮಕ್ಕಳು ಆಸ್ಪತ್ರೆಗೆ ದಾಖಲು

ಭಾರತ್ ಬಂದ್ ದಿನ ಏನಿರುತ್ತೆ , ಏನಿರಲ್ಲ?

ಭಾರತ್ ಬಂದ್ ದಿನದಂದು ಏನಿರುತ್ತೆ ಏನಿರಲ್ಲ ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆದ್ರೆ ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಕಚೇರಿಗಳ ಕಾರ್ಯನಿರ್ವಹಣೆಗೆ ಅಡಚಣೆಯಾಗುವ ಸಾಧ್ಯತೆ ಇದೆ. ದೇಶಾದ್ಯಂತ ಶಾಲಾ-ಕಾಲೇಜುಗಳು ಇದುವರೆಗೂ ರಜೆ ಘೋಷಣೆ ಮಾಡಿಲ್ಲ.

ಎಂದಿನಂತೆ ಆ್ಯಂಬುಲೆನ್ಸ್ ಸೇರಿ ಹಲವು ವೈದ್ಯಕೀಯ ಸೌಲಭ್ಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರಿಗೆ, ಸಂಪರ್ಕಗಳು, ದಿನನಿತ್ಯದ ಅಂಗಡಿ ಮುಗ್ಗಟ್ಟುಗಳು ತೆರೆಯಲಿವೆಯಾ, ಇಲ್ಲ ಬಂದ್ ಆಗಲಿಯಾ ಅನ್ನುವ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.

ಏನಿದು ವಿವಾದ?

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ನೀಡಲಾಗುತ್ತಿದೆ. ಎಸ್​​ಸಿ, ಎಸ್​ಸಿಯಲ್ಲಿರೋ ಪ್ರಬಲ ಜಾತಿಗಳೇ ಹೆಚ್ಚಿನ ಪ್ರಮಾಣ ಮೀಸಲಾತಿ ಪಡೆಯುತ್ತಿವೆ. ಹಾಗಾಗಿ ಎಲ್ಲರಿಗೂ ಸಮಾನವಾಗಿ ಒಳಮೀಸಲಾತಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲೂ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ ನೀಡಲು ಅನುಮತಿ ಇದೆ ಎಂದು ಹೇಳಿತ್ತು. ಸುಪ್ರೀಂಕೋರ್ಟ್​​ ತೀರ್ಪಿಗೆ ಈಗ ಅವಶ್ಯಕತೆ ಇದ್ದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಮೀಸಲಾತಿ ನೀಡಬೇಕೆಂದು ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಕೋರ್ಟ್​ ತೀರ್ಪಿನಲ್ಲಿ ವಿವಾದವೇನಿದೆ?

SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾ ನೀಡಲು ಅನುಮತಿ ಇದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ 100% ಮೀಸಲಾತಿ ಮೀಸಲಿಡಲು ಸಾಧ್ಯವಿಲ್ಲ. ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂಬ ಸುಪ್ರೀಂಕೋರ್ಟ್​ ತೀರ್ಪು ವಿವಾದಕ್ಕೀಡಾಗಿದೆ.

ಮೀಸಲಾತಿ ಒಂದು ವರ್ಗದಲ್ಲಿ ಮೊದಲ ಪೀಳಿಗೆಗೆ ಮಾತ್ರ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಎರಡನೇ ತಲೆಮಾರು ಬಂದರೆ ಮೀಸಲಾತಿಯ ಪ್ರಯೋಜನಗಳನ್ನು ನೀಡಬಾರದು. ಎಸ್ಸಿ/ಎಸ್ಟಿಗಳಲ್ಲಿ ಕೆನೆ ಪದರವನ್ನು ಗುರುತಿಸುವುದು ಸಾಂವಿಧಾನಿಕ ಕಡ್ಡಾಯವಾಗಬೇಕು ಎಂದು ಸುಪ್ರೀಂಕೋರ್ಟ್​ ಹೇಳಿದ್ದು, ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment