Bharat Bandh: ನಾಳೆ ಭಾರತ್‌ ಬಂದ್​ಗೆ ಕರೆ.. ಏನೇನಿರುತ್ತೆ? ಏನೇನಿರಲ್ಲ?

author-image
Ganesh
Updated On
Bharat Bandh: ನಾಳೆ ಭಾರತ್‌ ಬಂದ್​ಗೆ ಕರೆ.. ಏನೇನಿರುತ್ತೆ? ಏನೇನಿರಲ್ಲ?
Advertisment
  • ಭಾರತ್ ಬಂದ್​ಗೆ ಕರೆ ಕೊಟ್ಟಿದ್ದೇಕೆ? ಬೇಡಿಕೆಗಳೇನು?
  • ಭಾರತ್ ಬಂದ್​ಗೆ ಯಾವೆಲ್ಲ ಸಂಘಟನೆಯ ಬೆಂಬಲ ಇದೆ?
  • ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ನಾಳೆ (ಜುಲೈ 9, 2025) ಭಾರತ್ ಬಂದ್​ಗೆ 10 ಸೆಂಟ್ರಲ್ ಟ್ರೇಡ್ ಯೂನಿಯನ್​ಗಳು ಕರೆ ನೀಡಿವೆ. ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಭಾರತ್ ಬಂದ್​ಗೆ ಕರೆ ನೀಡಲಾಗಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತ್ ಬಂದ್​ಗೆ ಕರೆ ನೀಡಲಾಗಿದೆ.

ಕೇಂದ್ರ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಪರವಾದ ನಿಲುವು ಹೊಂದಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ. ರಾಷ್ಟ್ರ ವ್ಯಾಪಿ ಮುಷ್ಕರದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ, ಕಲ್ಲಿದ್ದಲು ಗಣಿ ಕಾರ್ಮಿಕರು ಸೇರಿದಂತೆ 25 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆ ಇದೆ. ಔಪಚಾರಿಕ, ಅನೌಪಚಾರಿಯ ವಲಯದ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಭಾರತ್ ಬಂದ್‌ ನಡೆಸಲು ಕಾರ್ಮಿಕ ಸಂಘಟನೆಗಳು ಕಳೆದ ಕೆಲ ತಿಂಗಳಿನಿಂದ ಭಾರಿ ಸಿದ್ಧತೆ ನಡೆಸಿವೆ. ರೈತರು, ಗ್ರಾಮೀಣಾ ಕಾರ್ಮಿಕರು ಕೂಡ ನಾಳೆಯ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗಿಯಾಗುವರು ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಮರಜೀತ್ ಕೌರ್ ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯರಾತ್ರಿ 1 ಗಂಟೆ.. ಮಹಾ ದುರಂತದಿಂದ 67 ಮಂದಿಯ ಪ್ರಾಣ ಉಳಿಸಿದ ಶ್ವಾನ..!

ನಾಳೆಯ ಭಾರತ್ ಬಂದ್​ನಿಂದ ದೇಶದಲ್ಲಿ ಬ್ಯಾಂಕಿಂಗ್, ಪೋಸ್ಟಲ್, ವಿಮಾ ಸೇವೆ ಹಾಗೂ ಕಲ್ಲಿದ್ದಲು ಗಣಿ, ಕಾರ್ಖಾನೆ, ಟ್ರಾನ್ಸ್ ಪೋರ್ಟ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹಿಂದ್ ಮಜ್ದೂರ್ ಸಭಾದ ಹರಭಜನ್ ಸಿಂಗ್ ಸಿಧು ಹೇಳಿದ್ದಾರೆ.
ಭಾರತ್ ಬಂದ್ ಸಂಘಟಕರ ಪ್ರಕಾರ, ನಾಳೆ ಬ್ಯಾಂಕಿಂಗ್ ಚಟುವಟಿಕೆಯಲ್ಲೂ ವ್ಯತ್ಯಯವಾಗಲಿದೆ. ನಾಳೆಯ ಬಂದ್​ನಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಉದ್ಯೋಗಿಗಳು ಹಾಗೂ ಕೋ ಅಪರೇಟೀವ್ ವಲಯದ ಬ್ಯಾಂಕ್ ಉದ್ಯೋಗಿಗಳು ಕೂಡ ಭಾಗಿಯಾಗುವರು. ಇದರಿಂದಾಗಿ ದೈನಂದಿನ ಬ್ಯಾಂಕಿಂಗ್ ಚಟುವಟಿಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಂದ್ ಸಂಘಟಕರು ಹೇಳಿದ್ದಾರೆ. ಪ್ರತ್ಯೇಕವಾಗಿ ಬ್ಯಾಂಕಿಂಗ್ ಯೂನಿಯನ್​ಗಳು ನಾಳೆ ತಾವು ಭಾರತ್ ಬಂದ್ ನಲ್ಲಿ ಭಾಗಿಯಾಗುವುದನ್ನು ಖಚಿತಪಡಿಸಿಲ್ಲ.

ನಾಳೆ ದೇಶದಲ್ಲಿ ಶಾಲೆ, ಕಾಲೇಜು, ಯೂನಿರ್ವಸಿಟಿಗಳು ಓಪನ್ ಆಗಿರಲಿವೆ. ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಶಾಲಾ ಬಸ್ ಚಾಲಕರು ಮುಷ್ಕರದಲ್ಲಿ ಭಾಗಿಯಾದರೆ ಪೋಷಕರು ಮಕ್ಕಳನ್ನು ತಾವೇ ಕರೆದುಕೊಂಡು ಹೋಗಿ ಶಾಲೆಗೆ ಬಿಡಬೇಕಾಗುತ್ತೆ.
ನಾಳೆ ಸಾರ್ವಜನಿಕ ಸಾರಿಗೆ ಬಸ್ ಸೇವೆಯಲ್ಲೂ ವ್ಯತ್ಯಯವಾಗಬಹುದು. ಆ್ಯಪ್ ಆಧರಿತ ಟ್ಯಾಕ್ಸಿ, ಕ್ಯಾಬ್ ಸೇವೆ ಕೂಡ ವ್ಯತ್ಯಯವಾಗಬಹುದು. ಸಾರ್ವಜನಿಕ ಸಾರಿಗೆ ಸಿಬ್ಬಂದಿ, ಟ್ಯಾಕ್ಸಿ, ಕ್ಯಾಬ್ ಚಾಲಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗುವರು ಎಂದು ಭಾರತ್ ಬಂದ್ ಸಂಘಟಕರು ಹೇಳಿದ್ದಾರೆ. ರೈಲ್ವೇ ಯೂನಿಗಳು ಭಾರತ್ ಬಂದ್​ನಲ್ಲಿ ಭಾಗಿಯಾಗುತ್ತಿಲ್ಲ. ಭಾರತ್ ಬಂದ್​ನಲ್ಲಿ ಭಾಗಿಯಾಗುವ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ಬಂದ್​​ಗೆ ಯಾರೆಲ್ಲ ಬೆಂಗಲ..?

  • ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC)
  • ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC)
  • ಹಿಂದ್ ಮಜ್ದೂರ್ ಸಭಾ (HMS)
  • ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU)
  • ಟ್ರೇಡ್ ಯೂನಿಯನ್ ಕೋ ಅರ್ಡಿನೇಷನ್ ಸೆಂಟರ್ ( TUCC)
  • ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್( AIUTUC)
  • ಸೆಲ್ಪ್ ಎಂಪ್ಲಾಯಿಡ್‌ ವುಮೆನ್ಸ್ ಅಸೋಸಿಯೇಷನ್ (SEWA)
  • ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU)
  • ಲೇಬರ್ ಪ್ರೊಗ್ರೆಸ್ಸಿವ್ ಫೆಡರೇಷನ್ ( LPF)
  • ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC)

ಭಾರತ್ ಬಂದ್​ಗೆ ಕರೆ ಕೊಟ್ಟಿದ್ದೇಕೆ..? ಬೇಡಿಕೆಗಳೇನು?

ಟ್ರೇಡ್ ಯೂನಿಯನ್​ಗಳು ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ನಿರ್ಲಕ್ಷ್ಯ ಮಾಡಿವೆ ಎಂದು ಹೇಳಿವೆ. ಕಳೆದ ವರ್ಷವೇ ಕೇಂದ್ರದ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯಾಗೆ 17 ಪಾಯಿಂಟ್​ಗಳ ಚಾರ್ಟರ್ ಬೇಡಿಕೆಯನ್ನು ಸಲ್ಲಿಸಿದ್ದೇವು. ಇದರ ಬಗ್ಗೆ ಯಾವುದೇ ಗಂಭೀರ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ದೇಶದ ಕಲ್ಯಾಣ ರಾಜ್ಯದ ಸ್ಥಾನಮಾನವನ್ನ ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕೇಂದ್ರ ಸರ್ಕಾರ ಬರೀ ವಿದೇಶಿ, ಭಾರತೀಯ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ನೀತಿಗಳಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಟ್ರೇಡ್ ಯೂನಿಗಳು ಹೇಳಿವೆ.

ಇದನ್ನೂ ಓದಿ: ಅಮೆರಿಕ ಪ್ರವಾಸಕ್ಕೆ ಹೋಗಿ ಜೀವ ಬಿಟ್ಟರು.. ತಂದೆ, ತಾಯಿ ಇಬ್ಬರು ಮಕ್ಕಳು ಸಜೀವ ದಹನ

  • ಕಳೆದ 10 ವರ್ಷಗಳಿಂದ ಭಾರತೀಯ ಕಾರ್ಮಿಕರ ಸಮ್ಮೇಳನವನ್ನು ಕೇಂದ್ರ ಸರ್ಕಾರ ನಡೆಸಿಲ್ಲ
  • ಕೇಂದ್ರ ಸರ್ಕಾರದ ನಾಲ್ಕು ಲೇಬರ್ ಕೋಡ್​ಗಳಿಂದ ಯೂನಿಯನ್​​ಗಳು ದುರ್ಬಲವಾಗುತ್ತವೆ. ಜೊತೆಗೆ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳವಾಗುತ್ತೆ.
  • ಕೇಂದ್ರ ಸರ್ಕಾರವು ಗುತ್ತಿಗೆ ನೌಕರಿಯನ್ನು ಪೋತ್ಸಾಹಿಸುತ್ತಿದ್ದು, ಖಾಸಗೀಕರಣ ಮಾಡುತ್ತಿದೆ.
  • ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ನೇಮಕಾತಿ ಬೇಡಿಕೆಯನ್ನು ಕಡೆಗಣಿಸಿದೆ. ಕೂಲಿ ಹೆಚ್ಚಳ ಮಾಡಿಲ್ಲ.
  • ನಿರುದ್ಯೋಗ ಸಮಸ್ಯೆ ನಿವಾರಿಸದೆ ಉದ್ಯೋಗದಾತರಿಗೆ ಇನ್ಸೆಂಟೀವ್ ನೀಡುತ್ತಿದೆ.
  • ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗುತ್ತಿದೆ. ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ.
  • ಆರೋಗ್ಯ, ಶಿಕ್ಷಣ, ಕಲ್ಯಾಣ ಯೋಜನೆಗಳ ವೆಚ್ಚವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ ಎಂದು ಟ್ರೇಡ್ ಯೂನಿಯನ್ ಗಳು ಆರೋಪಿಸಿವೆ.

ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment