/newsfirstlive-kannada/media/post_attachments/wp-content/uploads/2025/04/BNG-BHARAT-4.jpg)
ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಜೀವ ಕಳೆದುಕೊಂಡ ಕನ್ನಡಿಗರ ಮೃತದೇಹ ಬೆಂಗಳೂರಿಗೆ ಶಿಫ್ಟ್ ಆಗಿವೆ. ಶಿವಮೊಗ್ಗದ ಮಂಜುನಾಥ್ ಹಾಗೂ ಹಾವೇರಿ ಮೂಲದ ಭರತ್ ಭೂಷಣ್ ಮೃತದೇಹಗಳು ತಾಯ್ನಾಡು ತಲುಪಿದ್ದು, ಬೆಂಗಳೂರು ಏರ್ಫೋರ್ಟ್ಗೆ ಬಂದ ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ತವರೂರಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಪತ್ನಿ, ಮಗನ ಎದುರೇ ಜೀವಬಿಟ್ಟ US ಮೂಲದ ಟೆಕ್ಕಿ.. ದಾಳಿಗೂ ಮುನ್ನ ಸಹೋದರನಿಗೆ ಕರೆ ಮಾಡಿ ಹೇಳಿದ್ದೇನು?
ಕಾರ್ಗೋ ವಿಮಾನದ ಮೂಲಕ ಮೃತದೇಹವನ್ನು ಬೆಂಗಳೂರಿಗೆ ತರಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ನಮನ ಸಲ್ಲಿಸಿದರು. ಇದೇ ವೇಳೆ ಸಂತ್ರಸ್ತ ಕುಟುಂಬಸ್ಥರಿಗೆ ವಿ. ಸೋಮಣ್ಣ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಅವರು, ಉಗ್ರರು ಅಮಾಯಕ ಜನರನ್ನ ಬಲಿ ಪಡೆದಿದ್ದಾರೆ. ಮುಗ್ಧರ ಕೊಲೆ ಮಾಡಿರುವರನ್ನ ತಕ್ಕ ಶಿಕ್ಷೆ ಕೊಡ್ತೀವಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.
ಇದನ್ನೂ ಓದಿ:BREAKING; ಪಾಕ್ಗೆ ಸಿಂಧೂ ನದಿ ನೀರು ಹಂಚಿಕೆ ರದ್ದು.. PM ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ 5 ನಿರ್ಧಾರ
ಇನ್ನು ಮಂಜುನಾಥ್ ಮೃತದೇಹ ತವರೂರು ಶಿವಮೊಗ್ಗದತ್ತ ಹೊರಟಿದ್ದು, ಬೆಳಗ್ಗೆ 9 ಗಂಟೆಗೆ ಶಿವಮೊಗ್ಗ ತಲುಪಬಹುದು ಅಂತ ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ. ಮಂಜುನಾಥ್ ಪಾರ್ಥಿವ ಶರೀರದ ದರ್ಶನಕ್ಕೆ ಬರುವವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಅರ್ಧ ದಿನ ಅಂಗಡಿ ಬಂದ್ ಮಾಡಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜ್ಯುವೆಲ್ಲರಿ ಶಾಪ್, ಹೋಟೆಲ್, ವರ್ತಕರ ಸಂಘ ತೀರ್ಮಾನ ಮಾಡಿದೆ.. ಸ್ವಯಂ ಪ್ರೇರಿತವಾಗಿ ಶಿವಮೊಗ್ಗ ನಗರ ಬಂದ್ ಸಾಧ್ಯತೆ ಇದೆ ಅಂತ ಶಾಸಕ ಚನ್ನಬಸಪ್ಪ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಗನಿಗೆ ತಿಂಡಿ ತರೋಕೆ ಹೋದ ಪತಿ ಬರಲೇ ಇಲ್ಲ!.. ಗಂಡನ ಸಾವು ಕಣ್ಣಾರೆ ಕಂಡ ಹೆಂಡತಿ ನರಕಯಾತನೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ