ಆಕ್ಸಿಜನ್ ಸಪೋರ್ಟ್​ನಲ್ಲಿ ಭರತ್ ತಾಯಿ, ಮಗನ ದುರಂತ ಅಂತ್ಯದ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ

author-image
Veena Gangani
Updated On
ಆಕ್ಸಿಜನ್ ಸಪೋರ್ಟ್​ನಲ್ಲಿ ಭರತ್ ತಾಯಿ, ಮಗನ ದುರಂತ ಅಂತ್ಯದ ಬಗ್ಗೆ ತಾಯಿಗೆ ಇನ್ನೂ ಗೊತ್ತಿಲ್ಲ
Advertisment
  • ಬೆಂಗಳೂರು ಮೂಲದ ಭರತ್ ಭೂಷಣ್ ದುರಂತ ಅಂತ್ಯ
  • ಪ್ರವಾಸದ ಖುಷಿಯಲ್ಲಿದ್ದವರ ಮೇಲೆ ಉಗ್ರರು ದಾಳಿ
  • ಭರತ್ ಭೂಷಣ್ ಕುಟುಂಬದ ಆಪ್ತ ಪ್ರೊ.ನಾಗರಾಜ್ ಆಕ್ರೋಶ

ಬೆಂಗಳೂರು: ಸ್ವರ್ಗ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶಿವಮೊಗ್ಗದ ಮಂಜುನಾಥ್, ಹಾವೇರಿ ಮೂಲದ ಭರತ್​​ ಭೂಷಣ್​​ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆಂದು ಕುಟುಂಬದ ಜೊತೆ ಕಾಶ್ಮೀರಕ್ಕೆ ಹೋಗಿದ್ದರು ಇನ್ನಿಲ್ಲ.

ಇದನ್ನೂ ಓದಿ: ಪತ್ನಿ ಕಣ್ಮುಂದೆಯೇ ಪತಿಯ ಕೊಂದರು.. ಪ್ಯಾಂಟ್​​ ಬಿಚ್ಚಿಸಿ ಧರ್ಮ ಚೆಕ್.. ಒಂದೊಂದು ಕ್ಷಣವೂ ಭಯಾನಕ..!

publive-image

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಮೃತಪಟ್ಟ ಭರತ್ ಭೂಷಣ್ ಬಗ್ಗೆ ಮಾತಾಡಿದ ನಿವೃತ್ತ ಪ್ರೊಫೆಸರ್ ನಾಗರಾಜ್, ಭೂಷಣ್ ನಮ್ಮ ಹುಡುಗ, ಎಲ್ಲರ ಜೊತೆ ಸ್ನೇಹದಿಂದ ಮಾತಾಡಿ ಖುಷಿಯಾಗಿ ಬೆಳೆದಿದ್ದ. ಇನ್ನಷ್ಟು ಸಾಧನೆ ಮಾಡಬೇಕಿದ್ದ ಹುಡುಗ ದುರಂತ ಅಂತ್ಯ ಕಂಡಿದ್ದಾನೆ. ಹಿಂದೂ.. ಹಿಂದೂ ಅಂಥ ಕೇಳಿ ಹೊಡೆದಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಮುಸ್ಲಿಂರನ್ನು ಓಲೈಕೆ ಮಾಡ್ತಿರೋದೇ ಕಾರಣ. ಸರ್ಕಾರ ಮಾಡೋದಕ್ಕೆ ಆಗದ ಕೆಲಸ ನಾವೇ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿವಿ ನೋಡಿ ವಿಚಾರ ನಮಗೆ ಗೊತ್ತಾಗಿದೆ. ಇದನ್ನು ನೋಡಿ ನಮಗೆ ನಂಬೋಲು ಸಾಧ್ಯ ಆಗಿರಲಿಲ್ಲ. ಭೂಷಣ್ ಅವರ ಸಹೋದರ ಪ್ರೀತಂ ಕಾಶ್ಮೀರಕ್ಕೆ ಹೋಗಿದ್ರು. ಅವರ ಕಾಂಟಾಕ್ಟ್ ಮಾಡಿ ಮಾಹಿತಿ ಪಡೆಯುತ್ತಿದ್ದೇವೆ. ಅವರ ತಂದೆಗೆ ಮಾಹಿತಿ ಗೊತ್ತಾಗಿದೆ, ತಾಯಿ ಆಕ್ಸಿಜನ್​ನಲ್ಲಿ ಇದ್ದಾರೆ. ಹಿಂದೂ ಆಗಿದ್ದೇ ತಪ್ಪಾ ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನು ಬೇರೆ ದಾರಿ ಇಲ್ಲ.  ಯುವಕರೇ ಎದ್ದು ನಿಂತುಕೊಳ್ಳಬೇಕು ಎಂದಿದ್ದಾರೆ.

publive-image

ಮೃತ ಭರತ್ ಭೂಷನ್ ಅವರು ಜಾಲಹಳ್ಳಿಯ ಸುಂದರ್​ನಗರದಲ್ಲಿ ವಾಸವಾಗಿದ್ದರು. ಬೆಂಗಳೂರಿನ ಮತ್ತಿಕೆರೆಯ ನಿವಾಸಿಯಾಗಿರೋ ಭರತ್ ಭೂಷಣ್ ಅವರಿಗೆ 41 ವರ್ಷ ವಯಸ್ಸಾಗಿತ್ತು. ಭರತ್ ಅವರು ಸಾಫ್ಟ್ ವೇರ್ ಆಗಿದ್ದರು. ಅಲ್ಲದೇ ಡಯಾಗ್ನೋಸ್ಟಿಕ್ ಸೆಂಟರ್ ಕೂಡ ನಡೆಸುತ್ತಿದ್ದರು. ಹೀಗೆ ತನ್ನ ಹೆಂಡತಿ ಸುಜಾತ ಮತ್ತು ಮಗನ ಜೊತೆಗೆ ಕಾಶ್ಮೀರಕ್ಕೆ ಹೋಗಿದ್ದರು. ಇದೇ ವೇಳೆ ಭರತ್ ಭೂಷನ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ 3 ವರ್ಷದ ಮಗು ಮತ್ತು ಸುಜಾತ ಪ್ರಣಾಪಾಯದಿಂದ ಪಾರಾಗಿದ್ದಾರೆ. ಇಂದು ಭರತ್ ಭೂಷಣ್ ಹಾಗೂ  ಶಿವಮೊಗ್ಗದ ಮಂಜುನಾಥ್ ಪಾರ್ಥೀವ ಶರೀರ ಕರೆತರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment