/newsfirstlive-kannada/media/post_attachments/wp-content/uploads/2025/05/bharath-bhushan4.jpg)
ಬೆಂಗಳೂರು: ಸ್ವರ್ಗ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಏಪ್ರಿಲ್ 22ರಂದು ಉಗ್ರರು ಅಟ್ಟಹಾಸ ಮೆರೆದಿದ್ದರು. ಶಿವಮೊಗ್ಗದ ಮಂಜುನಾಥ್, ಹಾವೇರಿ ಮೂಲದ ಭರತ್ ಭೂಷಣ್ ಪ್ರಾಣ ಕಳೆದುಕೊಂಡಿದ್ದರು. ಪ್ರವಾಸಕ್ಕೆಂದು ಕುಟುಂಬದ ಜೊತೆ ಕಾಶ್ಮೀರಕ್ಕೆ ಹೋಗಿದ್ದರು ಬಲಿಯಾಗಿದ್ದರು. ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರದ ಬೆನ್ನಲ್ಲೇ ಭರತ್ ಭೂಷಣ್ ತಂದೆ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದಾರೆ.
ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಇದರ ಅಡಿಯಲ್ಲಿ ರಾತ್ರೋರಾತ್ರಿ ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕೇವಲ 23 ನಿಮಿಷದಲ್ಲಿ ಪಾಕ್ನ 9 ನೆಲೆಯನ್ನು ಉಡೀಸ್ ಮಾಡಿದೆ. ಅದರಲ್ಲಿ ಬರೋಬ್ಬರಿ 80ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಭರತ್ ಭೂಷಣ್ ತಂದೆ ಚನ್ನವೀರಪ್ಪ, ಭಾರತ ಒಳ್ಳೆ ರೀತಿಯಲ್ಲಿ ಪ್ರತಿಕಾರ ತೆಗೆದುಕೊಂಡಿದೆ. ಇಂತಹ ದಾಳಿಗಳು ಮೊದಲೇ ಆಗಬೇಕಿತ್ತು. ಅದರಿಂದ 26 ಜೀವಗಳು ಉಳಿಯುತ್ತಿದ್ದವು. 9 ಉಗ್ರರ ನೆಲೆಗಳನ್ನ ಧ್ವಂಸ ಮಾಡಿದ್ದಾರೆ. ಇಂತಹ ಇನ್ನಷ್ಟು ದಾಳಿಗಳು ಆಗಬೇಕಿದೆ. ಭಾರತದ ಜೊತೆಗೆ ಇತರ ದೇಶಗಳು ಕೈಜೋಡಿಸಬೇಕು. ನಮಗೆ ಆದ ದುಃಖ ಅಷ್ಟು ಬೇಗ ಮರೆಯಾಗಲ್ಲ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸ್ತೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ