/newsfirstlive-kannada/media/post_attachments/wp-content/uploads/2025/02/Bromance-Bharath-Boppanna.jpg)
ಭರತ್ ಬೋಪಣ್ಣ ಕರಿಯರ್ ಸಖತ್ ಶೈನ್ ಆಗ್ತಿದೆ. ಕಾಲಿವುಡ್‌ನಲ್ಲಿ ಅರುಣ್ ವಿಜಯ್ ಜೊತೆ ಮಿಷನ್ ಚಾಪ್ಟರ್ 1ನಲ್ಲಿ ಅಭಿನಯಿಸಿ, ಯಶಸ್ಸು ಗಳಿಸಿದ ಭರತ್ ಬೋಪಣ್ಣ, ಒಂದು ವಿಶೇಷ ಸಿನಿಮಾದೊಂದಿಗೆ ಮತ್ತೆ ಹಾಜರ್ ಆಗ್ತಿದ್ದಾರೆ.
ಹೌದು, ಭರತ್ ಬೋಪಣ್ಣ ಬ್ರೋಮ್ಯಾನ್ಸ್ ಅನ್ನೋ ಮಲಯಾಳಂ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾದಲ್ಲಿ ಭರತ್ ಬೋಪಣ್ಣ, ಕೂರ್ಗಿಯಾಗಿ ಆ್ಯಕ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಇವರ ಹೆಸರೇ ಬೋಪಣ್ಣ ಎಂದು. ಒರಿಜಿನಲ್ ನೇಮ್, ಪಾತ್ರದ ಹೆಸರು ಎರಡು ಒಂದೇ ಆದಾಗ ಆಗೋ ಖುಷಿಯೇ ಬೇರೇ.
ಇದನ್ನೂ ಓದಿ: VIDEO: ಚಿರಂಜೀವಿಗೆ ಹೆಣ್ಣು ಮಕ್ಕಳ ಕಂಡ್ರೆ ಇಷ್ಟವೇ ಇಲ್ವಾ? ವಿವಾದಕ್ಕೆ ಗುರಿಯಾದ ಮೆಗಾಸ್ಟಾರ್! ಹೇಳಿದ್ದೇನು?
ಇದೆಲ್ಲಾಕ್ಕಿಂತ ಮುಖ್ಯವಾದದ್ದು ಏನಂದ್ರೆ, ಬ್ರೋಮ್ಯಾನ್ಸ್, ಮಲಯಾಳಂ ಚಿತ್ರದಲ್ಲಿ ಭರತ್ ಬೋಪಣ್ಣ ಇಡೀ ಸಿನಿಮಾದಲ್ಲಿ ಮಾತನಾಡೋದು ಕೊಡವ ಮತ್ತು ಕನ್ನಡ ಭಾಷೆ. ಹೌದು, ಮಲಯಾಳಂ ಚಿತ್ರದಲ್ಲಿ ಕೊಡವ ಮತ್ತು ಕನ್ನಡ ಭಾಷೆ ಮಾತನಾಡೋ ವಿಶೇಷ, ಖಳನಟ ಪಾತ್ರದಲ್ಲಿ ಭರತ್ ಬೋಪಣ್ಣ ನಟಿಸಿದ್ದಾರೆ.
ಇನ್ನೊಂದು ಹೈ ಪಾಯಿಂಟ್ ಇದೆ. ಅದೇನಂದ್ರೆ, ಮಲಯಾಳಂ ಸಿನಿಮಾದಲ್ಲಿ ಕೊಡವ ಸಾಂಗ್ ಇದೆ. ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕೊಡವ ಹಾಡನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೊಡವ ಸಾಂಗ್ ಹಾಡಿರೋದು ಹೆಮ್ಮೆಯ ಕನ್ನಡಿಗ ಗಾಯಕ ಸಂಚಿತ್ ಹೆಗ್ಡೆ, ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಇಷ್ಟೆಲ್ಲಾ ವಿಶೇಷತೆ ಇರುವಂತಹ, ಬ್ರೋಮ್ಯಾನ್ಸ್ ಸಿನಿಮಾ ಇದೇ ಫೆಬ್ರವರಿ 14ರಂದು ರಿಲೀಸ್ ಆಗ್ತಿದೆ. ಅರ್ಜುನ್ ಅಶೋಕನ್ ಮತ್ತು ಮ್ಯಾಥ್ಯೂ ಥಾಮಸ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಮಹಿಮಾ ನಂಬಿಯಾರ್ ಚಿತ್ರ ನಾಯಕಿ. ಈ ಸಿನಿಮಾದ ನಿರ್ದೇಶಕ, ಅರುಣ್ ಡಿ ಡೋಸ್. ಈ ಹಿಂದೆ ಜೋ ಅಂಡ್ ಜೋ ಅನ್ನೋ ಸಿನಿಮಾವನ್ನ ಡೈರೆಕ್ಟ್ ಮಾಡಿ, ಸಕ್ಸಸ್ ಕಂಡಿದ್ದ ಅರುಣ್, ವಿನೂತನ ಕಾನ್ಸೆಪ್ಟ್‌ನಿಂದ ಮತ್ತೆ ಮೋಡಿ ಮಾಡಲು ಬರ್ತಿದ್ದಾರೆ.
ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ನಟ ಭರತ್ ಬೋಪಣ್ಣ ಕೊಡವನಾಗಿ, ಕೊಡವ ಪಾತ್ರ ಮಾಡುತ್ತಿರುವುದು ನನಗೆ ತುಂಬಾ ಹೆಮ್ಮೆ ಅನಿಸ್ತಿದೆ. ನನ್ನ ಜೀವನದ ಅಮೂಲ್ಯ ಅವಕಾಶವಾಗಿದೆ. ಈ ಸಿನಿಮಾದಲ್ಲಿ ಉತ್ತಮ ಪಾತ್ರ ನಿರ್ವಹಿಸಿರುವ ಸಮಾಧಾನವಿದೆ. ಈ ಸಿನಿಮಾ ಜನರಿಗೆ ಇಷ್ಟವಾಗಲಿದೆ ಎಂದರು.
ಇದೇ ಶುಕ್ರವಾರ ತೆರೆ ಕಾಣುತ್ತಿರುವ, ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ನಟ ಭರತ್ ಬೋಪಣ್ಣ ಅವರಿಗೆ ಬಿಗ್ ಸಕ್ಸಸ್ ಸಿಗಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ