newsfirstkannada.com

BREAKING: ‘ಇಂಡಿಯಾ’ ಇನ್ಮುಂದೆ ಭಾರತ.. ದೇಶಕ್ಕೆ ಶೀಘ್ರವೇ ಮರುನಾಮಕರಣ ಸಾಧ್ಯತೆ; ಏನಿದರ ಅಸಲಿ ವಿಚಾರ?

Share :

Published September 5, 2023 at 1:00pm

Update September 5, 2023 at 1:15pm

    ರಿಪಬ್ಲಿಕ್ ಆಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ!

    ಅಮೃತ ಕಾಲದತ್ತ ದಿಟ್ಟ ಹೆಜ್ಜೆ ಎಂದ ಅಸ್ಸಾಂ ಮುಖ್ಯಮಂತ್ರಿ

    ಸೆಪ್ಟೆಂಬರ್‌ 18-22ರವರೆಗೆ ಸಂಸತ್‌ನ ವಿಶೇಷ ಅಧಿವೇಶನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಂದು ಕ್ರಾಂತಿಕಾರಕ ಹೆಜ್ಜೆಯಿಡಲು ಮುಂದಾಗಿದೆ. ರಿಪಬ್ಲಿಕ್ ಆಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ ಎಂದು ದೇಶಕ್ಕೆ ಮರುನಾಮಕರಣ ಮಾಡುವ ಸುಳಿವು ಸಿಕ್ಕಿದೆ. ಇದೇ ಸೆಪ್ಟೆಂಬರ್‌ 18-22ರವರೆಗೆ ಸಂಸತ್‌ನ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ಹಲವು ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಇಂಡಿಯಾ ಬದಲು ಭಾರತ ಎಂದು ದೇಶಕ್ಕೆ ಮರುನಾಮಕರಣ ಮಾಡುವ ವಿಚಾರ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಮಹತ್ವದ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿರುವ ಹಿಮಂತ ಬಸ್ವಾ ಶರ್ಮಾ, ರಿಪಬ್ಲಿಕ್ ಆಫ್ ಭಾರತ- ನಮ್ಮ ನಾಗರಿಕತೆ ಅಮೃತ ಕಾಲದತ್ತ ದಿಟ್ಟವಾಗಿ ಹೆಜ್ಜೆ ಇಡುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇಂಡಿಯಾ, ಭಾರತ ಎಂದು ಮರುನಾಮಕರಣ ಮಾಡುವ ಮೊದಲೇ ಚಾಲ್ತಿಗೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಷ್ಟ್ರಪತಿ ಭವನದಿಂದ ಕಳಿಸಿದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ ಎಂದು ಬರೆಯಲಾಗಿದೆ. ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ ಎಂದು ಬದಲಾಗಿರುವುದನ್ನ ಉಲ್ಲೇಖ ಮಾಡಿದ್ದಾರೆ.

ನವದೆಹಲಿಯಲ್ಲಿ ಇದೇ ವಾರಾಂತ್ಯಕ್ಕೆ G-20 ಶೃಂಗಸಭೆ ಆಯೋಜಿಸಲಾಗಿದೆ. ಈ ಶೃಂಗಸಭೆ ಅತಿಥಿಗಳ ಡಿನ್ನರ್ ಪಾರ್ಟಿಗೆ ನೀಡಿದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ ಎಂದು ಉಲ್ಲೇಖಿಸಲಾಗಿದೆ. ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ ಎಂದು ಬರೆದಿರೋ ಆಹ್ವಾನ ಪತ್ರಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ RSS ಮುಖ್ಯಸ್ಥ ಮೋಹನ್‌ ಭಾಗವತ್ ಅವರು ಕೂಡ ದೇಶವನ್ನು ಭಾರತ ಎಂದು ಕರೆಯಬೇಕು ಎಂದಿದ್ದರು. ಭಾರತ ಎಂದು ಕರೆದಾಗ ಕೆಲವರಿಗೆ ಅರ್ಥವಾಗದಿದ್ದರೂ ಚಿಂತೆ ಇಲ್ಲ. ನಾವು ಮಾತ್ರ ದೇಶವನ್ನು ಭಾರತ ಎಂದು ಕರೆಯಬೇಕು ಎಂದು ಸಾರ್ವಜನಿಕ ವೇದಿಕೆಯಲ್ಲಿ ಮೋಹನ್‌ ಭಾಗವತ್ ಹೇಳಿದ್ದರು. RSS ಬಿಜೆಪಿಯ ಮಾತೃ ಸಂಘಟನೆ. RSS ಮುಖ್ಯಸ್ಥರ ಮಾತನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಾ ಬಂದಿದೆ. ಮೋಹನ್ ಭಾಗವತ್ ಅವರ ಹೇಳಿಕೆಯ ಬಳಿಕ ರಿಪಬ್ಲಿಕ್ ಆಫ್ ಇಂಡಿಯಾ, ಭಾರತವಾಗಿ ಬದಲಿಸಲು ಮುಂದಾಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

BREAKING: ‘ಇಂಡಿಯಾ’ ಇನ್ಮುಂದೆ ಭಾರತ.. ದೇಶಕ್ಕೆ ಶೀಘ್ರವೇ ಮರುನಾಮಕರಣ ಸಾಧ್ಯತೆ; ಏನಿದರ ಅಸಲಿ ವಿಚಾರ?

https://newsfirstlive.com/wp-content/uploads/2023/09/Modi-Mohan-Bhagawat.jpg

Load More