/newsfirstlive-kannada/media/post_attachments/wp-content/uploads/2025/02/BHARAT-RATNA-MEDAL-1.jpg)
ಭಾರತ ರತ್ನ, ಯಾವುದೇ ಪ್ರಶಸ್ತಿ ವಿಚಾರ ಬಂದಾಗ ಅಲ್ಲಿ ಮೊದಲು ಚರ್ಚೆಗೆ ಬರೋದು ಭಾರತ ರತ್ನ ಪ್ರಶಸ್ತಿ. ಭಾರತ ರತ್ನ ನಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ. ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಅಸಾಧಾರಣ ಹಾಗೂ ವಿಶಿಷ್ಟ ಸೇವೆಯನ್ನು ಹಾಗೂ ಸಾಧನೆಯನ್ನು ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಕಳೆದ ವರ್ಷವೇ ಐವರು ಗಣ್ಯರಿಗೆ ಈ ಪ್ರಶಸ್ತಿಯನ್ನು ನೀಡಲಾಯ್ತು. ಕರ್ಪೂರಿ ಠಾಕೂರ್,ಲಾಲ್​ಕೃಷ್ಣ ಅಡ್ವಾಣಿ, ಚೌದರಿ ಚರಣ್ ಸಿಂಗ್, ಪಿ.ವಿ.ನರಸಿಂಹರಾವ್​ ಹಾಗೂ ಎಂ.ಎಸ್​. ಸ್ವಾಮಿನಾಥನ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯ್ತು.
ಇದನ್ನೂ ಓದಿ:9 ಕನ್ನಡಿಗರು ಸೇರಿ 139 ಸಾಧಕರಿಗೆ ಪದ್ಮ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ
ಈ ಒಂದು ಗೌರವವನ್ನು ದೇಶದ ರಾಷ್ಟ್ರಪತಿಗಳ ಕೈಯಿಂದ ಪಡೆಯಲಾಗುತ್ತದೆ. ಈ ಗೌರವದೊಂದಿಗೆ ವೈಯಕ್ತಿಕವಾಗಿ ಅನೇಕ ಸೌಲಭ್ಯಗಳನ್ನು ಸರ್ಕಾರದಿಂದ ನೀಡಲಾಗುತ್ತದೆ. ಅವರಿಗೆ ವಿಶೇಷ ಗೌರವದೊಂದಿಗೆ ಹಲವು ಸರ್ಕಾರಿ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಗುತ್ತದೆ. ಆದರೆ ಈ ಭಾರತ ರತ್ನ ಪದಕವನ್ನು ಯಾವುದರಿಂದ ತಯಾರಿಸಲಾಗಿದ ಎನ್ನುವುದು ನಿಮಗೆ ಗೊತ್ತಾ?
/newsfirstlive-kannada/media/post_attachments/wp-content/uploads/2025/02/BHARAT-RATNA-MEDAL.jpg)
ಒಂದು ವೇಳೆ ನೀವು ಇದು ಚಿನ್ನ ಇಲ್ಲವೇ ಬೆಳ್ಳಿಯಿಂದ ಸಿದ್ದಗೊಂಡಿರುತ್ತದೆ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವೆಬ್​ಸೈಟ್​ನಲ್ಲಿ ಉಲ್ಲೇಖಗೊಂಡಿರುವ ಪ್ರಕಾರ ಈ ಭಾರತ ರತ್ನ ಅವಾರ್ಡ್​ ಪಡೆದವರಿಗೆ ಪದಕದ ಜೊತೆ ಒಂದು ಸರ್ಟಿಫಿಕಟ್ ಕೂಡ ಕೊಡಲಾಗುತ್ತದೆ. ಆ ಸರ್ಟಿಫಿಕೆಟ್​ ರಾಷ್ಟ್ರಪತಿಗಳ ಸಹಿ ಕೂಡ ಇರುತ್ತದೆ.
ಇದನ್ನೂ ಓದಿ:ಬ್ರಿಟಿಷರಿಗೆ ಈ ಒಂದು ರಾಜ್ಯದ ಮೇಲೆ ರಾಜ್ಯಭಾರ ಮಾಡಲು ಎಂದಿಗೂ ಸಾಧ್ಯವಾಗಲಿಲ್ಲಾ! ಯಾವುದು ಆ ರಾಜ್ಯ?
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಅರಳಿಮರದ ಎಲೆಯನ್ನು ಹೋಲುತ್ತದೆ ಮತ್ತು ಇದನ್ನು ಅತ್ಯಂತ ಪರಿಶುದ್ಧವಾದ ತಾಮ್ರದಿಂದ ಮಾಡಲಾಗುತ್ತದೆ. ಇದರ ಉದ್ದ 5.8 ಸೆಂಟಿಮೀಟರ್ ಇದ್ದರೆ ಅಗಲ 4.7 ಸೆಂಟಿಮೀಟರ್​ ಇರುತ್ತದೆ. ಇದು 3.1 ಸೆಂಟಿ ಮೀಟರ್​ನಷ್ಟು ದಪ್ಪ ಇರುತ್ತದೆ. ಇನ್ನು ಅರಳಿಮರದ ಎಲೆಯನ್ನು ಹೋಲುವ ಈ ಪದಕದಲ್ಲಿ ಹೊಳೆಯುವ ಸೂರ್ಯನ ಚಿತ್ರವನ್ನು ಪ್ಲಾಟಿನಂನಿಂದ ಮಾಡಲಾಗಿರುತ್ತದೆ. ಇನ್ನು ಅರಳಿಮರದ ಎಲೆಯ ಹೋಲುವ ಪದಕದ ಅಂಚು ಕೂಡ ಪ್ಲಾಟಿನಂನಿಂದ ಕೂಡಿರುತ್ತದೆ. ಇನ್ನು ಪದಕದ ಮೊದಲ ಭಾಗದಲ್ಲಿ ಹಿಂದಿಯಲ್ಲಿ ಭಾರತ ರತ್ನ ಎಂದು ಬರೆಯಲಾಗಿರುತ್ತದೆ ಮತ್ತೊಂದು ಭಾಗದಲ್ಲಿ ಅಶೋಕ ಸ್ತಂಭದ ಗುರುತಿನ ಮೇಲೆ ಸತ್ಯಮೇವ ಜಯತೆ ಎಂದು ಬರೆಯಲಾಗಿರುತ್ತದೆ.
/newsfirstlive-kannada/media/post_attachments/wp-content/uploads/2025/02/KOLKATA-MINT.jpg)
ಈ ಭಾರತ ರತ್ನ ಪದಕ ದೇಶದ ಒಂದೇ ಒಂದು ಭಾಗದಲ್ಲಿ ಸಿದ್ಧಗೊಳ್ಳುತ್ತದೆ. ಭಾರತ ಸರ್ಕಾರ ಇದರ ಜವಾಬ್ದಾರಿಯನ್ನು ಕೊಲ್ಕತ್ತಾ ಮಿಂಟ್​​ಗೆ ವಹಿಸಿಕೊಟ್ಟಿದೆ. ಈ ಒಂದು ಪದಕವನ್ನು ಅತ್ಯಂತ ಅನುಭವಿ ಹಾಗೂ ನುರಿತ ಕಲಾವಿದರಿಂದ ತಯಾರಿಸಲಾಗುತ್ತದೆ. ಕೊಲ್ಕತ್ತಾ ಮಿಂಟ್ ಆರಂಭವಾದಗಿನಿಂದಲೂ ಈ ಭಾರತ ರತ್ನ ಪದಕವನ್ನು ಸಿದ್ಧಗೊಳಿಸುತ್ತಿದೆ. ಇನ್ನು ಪದ್ಮಭೂಷಣ,ಪದ್ಮಶ್ರೀ, ಪರಮವೀರ ಚಕ್ರ ಪದಕಗಳು ಕೂಡ ಇದೇ ಕೊಲ್ಕತ್ತಾ ಮಿಂಟ್​​ನಲ್ಲಿ ಸಿದ್ಧಗೊಳ್ಳುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us