newsfirstkannada.com

ಯೂಟ್ಯೂಬ್​ನಲ್ಲಿ ದುಡ್ಡು ಮಾಡಲು ಬ್ಯಾಂಕ್​ ದರೋಡೆ; ಸಿಂಗರ್ ಹೇಳಿದ ಕಥೆ ಕೇಳಿ ಪೊಲೀಸರೇ ಶಾಕ್​​

Share :

Published February 29, 2024 at 8:29pm

Update February 29, 2024 at 11:15pm

  ಚೆನ್ನಾಗಿ ಹಾಡುವನು ಬ್ಯಾಂಕ್ ದೋಚೋದಕ್ಕೆ ಬಂದಿದ್ದು ಏಕೆ?

  ದರೋಡೆಕೋರ ಸಿಂಗರ್​ ಹಿಂದೆ ಒಂದು ಸಿನಿಮಾ ಕಥೆನೇ ಇದೆ

  2 ವರ್ಷದ ಹಿಂದೆ ಯ್ಯೂಟೂಬ್ ಚಾನೆಲ್ ಕ್ರೀಯೆಟ್ ಮಾಡಿದ್ದನು

ಅವನು ಅದ್ಭುತ ಸಿಂಗರ್. ಅಷ್ಟೇ ಅದ್ಭುತವಾಗಿ ಹಾಡ್ತಾನೆ ಕೂಡ. ಹಾಡುಗಳನ್ನ ಪ್ರಮೋಟ್ ಮಾಡ್ಬೇಕು ಅಂತ ಯ್ಯೂಟೂಬ್ ಚಾನೆಲ್ ಕೂಡ ಕ್ರಿಯೇಟ್ ಮಾಡಿದ್ದ. ಆದ್ರೆ ಏನೇ ಮಾಡಿದ್ರೂ ಸಬ್​ಸ್ಕ್ರೈಬರ್​ ಮಾತ್ರ ಹೆಚ್ಚಾಗಿರಲಿಲ್ಲ. ಅದಕ್ಕೆ ಅವನ ಫ್ರೆಂಡ್ ಒಳ್ಳೆ ಕ್ಯಾಮೆರಾ, ಮೈಕ್, ಎಡಿಟರ್ ಬೇಕೆಂದು ಹೇಳಿದ್ದ. ಆದ್ರೆ ಇದಕ್ಕೆ ಹಣ ಬೇಕಿತಲ್ಲ. ಈ ಹಣಕ್ಕಾಗಿ ಅವನು ಮಾಡಿದ ಮಾಸ್ಟರ್ ಪ್ಲಾನ್ ಏನು ಗೊತ್ತಾ?.

ಈಗಂತೂ ಇನ್​ಸ್ಟಾ, ಯ್ಯೂಟೂಬ್​ನದ್ದೇ ಟ್ರೆಂಡು. ಯ್ಯೂಟೂಬ್ ಚಾನೆಲ್ ಮಾಡ್ಬೇಕು ಕಂಟೆಟ್ ಕ್ರಿಯೇಟ್ ಮಾಡ್ಬೇಕ ಹಣ ಸಂಪಾದಿಸಬೇಕು. ಸದ್ಯ ಈಗಿನ ಜನರೇಷನ್​​ ಮಕ್ಕಳಿಗೆ ಏನಾಗ್ಬೇಕು ಅಂತ ಕೇಳಿದ್ರೆ ಯ್ಯೂಟೂಬರ್ ಆಗ್ಬೇಕು ಅಂತಾನೇ ಹೇಳ್ತಾರೇನೋ. ಆದ್ರೆ, ನಾವಿವತ್ತು ಹೇಳೋ ಸ್ಟೋರಿಯಲ್ಲಿ ಯ್ಯೂಟೂಬ್​​ನಲ್ಲಿ ಫೇಮಸ್ ಆಗ್ಬೇಕು ಅಂದುಕೊಂಡಿದ್ದ ಸಿಂಗರ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಷ್ಟಕ್ಕೂ ಸಿಂಗರ್ ಆಗ್ಬೇಕು ಅಂದುಕೊಂಡವನನ್ನ ಪೊಲೀಸರು ಅರೆಸ್ಟ್ ಮಾಡಿದ್ದೇಕೆ? ಏನಿದು ಯ್ಯೂಟೂಬ್ ಕಹಾನಿ. ಅದಕ್ಕೂ ಮೊದಲು ಪಂಜಾಬ್​ನಲ್ಲಿ ನಡೆದ ಬ್ಯಾಂಕ್​ ದರೋಡೆ ಬಗ್ಗೆ ಡಿಟೇಲ್ಸ್ ಇಲ್ಲಿದೆ.

ಶುಕ್ರವಾರ, 23 ಜನವರಿ ಸಮಯ: ಬೆಳಗ್ಗೆ 10.40

ಜೈಪುರದ ಜೋಟವಾರ್ ಪಂಜಾಬ್ ನ್ಯಾಷನಲ್​ ಬ್ಯಾಂಕ್​ ಇದು. ಜನವರಿ 23 ಶುಕ್ರವಾರ ಬೆಳಗ್ಗೆ 10.40 ಆಗಿನ್ನೂ ಬ್ಯಾಂಕ್ ಓಪನ್ ಆಗೋ ಟೈಮ್. ಬ್ಯಾಂಕ್ ಮ್ಯಾನೇಜರ್ ಕೂಡ ಆಗಷ್ಟೇ ಬ್ಯಾಂಕ್​ಗೆ ಎಂಟ್ರಿ ಕೊಟ್ಟಿದ್ರು. ಉಳಿದ ಸಿಬ್ಬಂದಿ ಕೂಡ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಇಂಥಾ ಟೈಮ್​ನಲ್ಲಿ ಮುಖಕ್ಕೆ ಮುಖವಾಡ ಹಾಕ್ಕೊಂಡಿದ್ದ ಇಬ್ಬರು ದರೋಡೆಕೋರರು ಬ್ಯಾಂಕ್​ ಒಳಗೆ ನುಗ್ಗಿ ಬಿಟ್ಟಿದ್ರು. ಒಳಗೆ ನುಗ್ಗಿದವರೇ ಗನ್​ ತೋರಿಸಿ ಬೆದರಿಕೆ ಹಾಕೋದಕ್ಕೆ ಶುರು ಮಾಡಿದ್ರು.

ಗನ್​ ಪಾಯಿಂಟ್​ನಲ್ಲೇ ಮ್ಯಾನೇಜರ್​ನ್ನ ಸ್ಟ್ರಾಂಗ್ ರೂಮ್ ಬಳಿ ಕರ್ಕೊಂಡು ಹೋಗಿ ಹಣ ಎಲ್ಲ ದೋಚೋದಕ್ಕೆ ಖದೀಮರು ಪ್ಲಾನ್ ಮಾಡಿದ್ರು. ಬ್ಯಾಂಕ್ ದೋಚಿ ಪರರಾರಿಯಾಗಬೇಕು ಅಂತ ದರೋಡೆಕೋರರು ಅಂದುಕೊಂಡಿದ್ರು. ಆದ್ರೆ ಕಹಾನಿಯಲ್ಲಿ ಟ್ವಿಸ್ಟ್ ನಡೆದು ಹೋಯ್ತು. ಆ ಟ್ವಿಸ್ಟ್​ ಬಗ್ಗೆ ದರೋಡೆಕೋರರು ಕೂಡ ಊಹಿಸಿರಲಿಲ್ಲ. ದರೋಡೆಕೋರರೇನು ಹಣವನ್ನು ಬ್ಯಾಗ್​ನಲ್ಲಿ ತುಂಬಿಕೊಂಡು ಎಸ್ಕೇಪ್​ ಆಗೋದಕ್ಕೆ ರೆಡಿಯಾಗ್ತಿದ್ರು. ಆದ್ರೆ ಅಷ್ಟರಲ್ಲೇ ಬ್ಯಾಂಕ್ ಕ್ಯಾಷಿಯರ್​ ಇಬ್ಬರ ಮೇಲೂ ಮುಗಿ ಬಿದ್ದುಬಿಟ್ಟಿದ್ರು.

ದರೋಡೆಕೋರರ ಜೊತೆ ಕ್ಯಾಷಿಯರ್ ಸೆಣಸಾಟ.. ಕಳ್ಳರು ಲಾಕ್!

ಈ ತರಹ ದರೋಡೆಕೋರರು ಬ್ಯಾಂಕ್​ಗೆ ನುಗ್ಗಿದಾಗ ಸಿಬ್ಬಂದಿ ಯಾಕ್ ಬೇಕು ಗುರು ಅಂತ ಸೈಲೆಂಟ್ ಆಗಿ ಇರ್ತಾರೆ. ಆದ್ರೆ ಈ ಬ್ಯಾಂಕ್​ನಲ್ಲಿ ಕ್ಯಾಷಿಯರ್​ ನರೇಂದ್ರ ಸಿಂಗ್ ಶಿಖಾವತ್​ ಸಮಯ ಪ್ರಜ್ಞೆ ತೋರಿದ್ರು. ಹಣವನ್ನು ಬ್ಯಾಗ್​ನಲ್ಲಿ ತುಂಬಿಕೊಳ್ತಿದ್ದ ಇಬ್ಬರು ಖದೀಮರನ್ನ ಶಿಖಾವತ್ ಒಬ್ಬರೇ ಎರಡು ಕೈಯಲ್ಲಿ ಹಿಡ್ಕೊಂಡು ಬಿಟ್ಟಿದ್ರು. ಹೊಡೆದ್ರು, ಬಡೆದ್ರೂ ಶಿಖಾವತ್​ ಇಬ್ಬರನ್ನ ಎಸ್ಕೇಪ್ ಆಗೋದಕ್ಕೆ ಬಿಟ್ಟಿಲ್ಲ. ಬ್ಯಾಂಕ್ ಒಳಗಿನ ಶಬ್ಧ ಕೇಳ್ತಿದ್ದಂತೆ ಬ್ಯಾಂಕ್ ಮುಂದೆ ಜನ ಜಮಾಯಿಸೋಕೆ ಶುರುವಾಗಿತ್ತು. ಅಷ್ಟರಲ್ಲೇ ಓರ್ವ ದರೋಡೆಕೋರ ಶಿಖಾವತ್ ಮೇಲೆ ಗುಂಡಿನ ದಾಳಿ ಮಾಡಿದ್ದ. ಹೊಟ್ಟೆ, ಕಾಲು ಸೇರಿ ಮೂರು ಕಡೆ ಗುಂಡು ತಗುಲಿತ್ತು. ಅಚ್ಚರಿ ಏನಂದ್ರೆ ಮೂರು ಗುಂಡು ಬಿದ್ದಿದ್ರು, ಶಿಖಾವತ್ ಎದೆಗುಂದಿಲ್ಲ. ಇಬ್ಬರು ದರೋಡೆಕೋರನನ್ನ ಹಿಡ್ಕೊಂಡೆ ಇದ್ರು. ಈ ವೇಳೆ ಒಬ್ಬ ದರೋಡೆಕೋರ ತಪ್ಪಿಸಿಕೊಂಡು ಎಸ್ಕೇಪ್ ಆಗಿಬಿಟ್ಟಿದ್ದ. ಆದ್ರೆ ಇನ್ನೊಬ್ಬನಿಗೆ ತಪ್ಪಿಸಿಕೊಳ್ಳೋದಕ್ಕೆ ಆಗಿಲ್ಲ. ಅಷ್ಟರಲ್ಲೇ ಬ್ಯಾಂಕ್ ಮುಂದೆ ಜಮಾಯಿಸಿದ್ದ ಜನರೆಲ್ಲ ಬ್ಯಾಂಕ್ ಒಳಗೆ ನುಗ್ಗಿದ್ರು. ತಗ್ಲಾಕೊಂಡಿದ್ದ ದರೋಡೆಕೋರನನ್ನ ಹಿಡ್ಕೊಂಡು ಸರಿಯಾಗಿ ಧರ್ಮದೇಟು ಕೊಟ್ಟುಬಿಟ್ಟಿದ್ದಾರೆ.

ಸಿಸಿಟಿವಿ ನೋಡಿದ್ಮೇಲೆ ಗೊತ್ತಾಗಿದ್ದು ಏನಂದ್ರೆ. ಗನ್ ಪಾಯಿಂಟ್​ನಲ್ಲಿ ದರೋಡೆ ಮಾಡೋದಕ್ಕೆ ಶುರು ಮಾಡಿರ್ತಾನೆ. ಈ ವೇಳೆ ಬ್ಯಾಂಕ್ ಕ್ಯಾಷಿಯರ್ ಅವರನ್ನ ಹಿಡ್ಕೊಂಡಾಗ ಒಬ್ಬ ತಪ್ಪಿಸಿಕೊಂಡು ಓಡೋಗಿದ್ದಾನೆ. ಸಿಕ್ಕಾಕೊಂಡಿರುವ ಒಬ್ಬನನ್ನ ಅರೆಸ್ಟ್ ಮಾಡಿದೀವಿ. ಡಿಸಿಪಿ ಅವರ ನೇತೃತ್ವದಲ್ಲಿ ತನಿಖೆ ಮಾಡ್ತಿದ್ವಿ.

ಪೊಲೀಸರ ಕೈಗೆ ಲಾಕ್ ಆಗಿದ್ದು ಸಿಂಗರ್.. ಏನಿದು ಯ್ಯೂಟೂಬ್ ಕತೆ?

ಯ್ಯೂಟೂಬ್ ಚಾನೆಲ್ ಸಿಂಗರ್​ ಅನ್ನ ಪೊಲೀಸರು ಅರೆಸ್ಟ್ ಮಾಡಿದ್ರು ಅಂತ. ಅದೇ ಅದೇ ಸಿಂಗರ್ ಈ ಬ್ಯಾಂಕ್ ದರೋಡೆಯಲ್ಲಿ ತಗ್ಲಾಕೊಂಡಿರುವ ದರೋಡೆಕೋರ. ಅಯ್ಯೋ ಅಷ್ಟು ಚೆನ್ನಾಗಿ ಹಾಡೋನ ಬ್ಯಾಂಕ್ ದೋಚೋದಕ್ಕೆ ಬಂದಿದ್ಯಾಕೆ ಅಂತೀರಾ? ಈ ಪ್ರಶ್ನೆ ನಿಮಗೆ ಮಾತ್ರವಲ್ಲ.. ಪೊಲೀಸರಿಗೂ ಅನಿಸಿದ್ದೂ ಹೀಗೆ.. ವಿಚಾರಣೆ ಶುರು ಮಾಡ್ದಾಗ ಈ ಸಿಂಗರ್ ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಅಷ್ಟಕ್ಕೂ ಇಲ್ಲಿ ಪೊಲೀಸರ ಕೈಯಲ್ಲಿ ಲಾಕ್ ಆಗಿರೋ ಸಿಂಗರ್ ಹೆಸರು ಭರತ್​ ಸಿಂಗ್ ಅಂತ. ಈ ಭರತ್​ಸಿಂಗ್​​ ವರ್ಷಕ್ಕೆ ಒಂದೇ ಬಾರಿ ಲೂಟಿ ಮಾಡೋ ದರೋಡೆಕೋರ. ಅರೇ ವರ್ಷಕ್ಕೆ ಒಂದೇ ಬಾರಿನಾ ಅಂತ ಕಂಪ್ಯೂಸ್ ಆಗ್ಬೇಡಿ. ಈ ದರೋಡೆ ಹಿಂದೆ ಒಂದು ಸಿನಿಮಾ ಕಥೆನೇ ಇದೆ.

ಯೂಟ್ಯೂಬ್ ಸಿಂಗರ್ ದರೋಡೆಕೋರ ಆಗಿದ್ದೇಕೆ?

 • 2 ವರ್ಷದ ಹಿಂದೆ ಯ್ಯೂಟೂಬ್ ಚಾನೆಲ್ ಕ್ರೀಯೆಟ್ ಮಾಡಿದ್ದ ಭರತ್​ ಸಿಂಗ್
 • ಈ ಚಾನೆಲ್​​ಗೆ ಕೇವಲ 1,700 ಜನ ಮಾತ್ರ ಸಬ್​ಸ್ಕ್ರೈಬ್ ಮಾಡಿದ್ರು
 • ಒಳ್ಳೆ ಕ್ಯಾಮರಾ, ಮೈಕ್​, ಎಡಿಟರ್ ಬೇಕು ಅಂತ ಫ್ರೆಂಡ್ ಸಲಹೆ ನೀಡಿದ್ದ
 • ಹಣಕ್ಕಾಗಿ ಬ್ಯಾಂಕ್ ಲೂಟಿ ಮಾಡುವ ಮಾಸ್ಟರ್ ಪ್ಲಾನ್ ಮಾಡಿದ್ದ ಸಿಂಗರ್
 • 2022 ರ ಫೆಬ್ರವರಿಯ ದರೋಡೆಯಲ್ಲಿ ₹15 ಲಕ್ಷ 73 ಸಾವಿರ ದೋಚಿದ್ದ
 • 2023 ಮಾರ್ಚ್​​ನಲ್ಲಿ 10 ಲಕ್ಷ 73 ಸಾವಿರ ದೋಚಿ ಪರಾರಿಯಾಗಿದ್ರು
 • ಆದ್ರೆ 2024ರಲ್ಲಿ ದರೋಡೆ ಪ್ಲಾನ್ ಉಲ್ಟಾ.. ಸಿಂಗರ್ ತಗ್ಲಾಕೊಂಡಿದ್ದ
 • ಪ್ರತಿ ವರ್ಷ ಬ್ಯಾಂಕ್ ಲೂಟಿ ಮಾಡೋನು ಈ ಬಾರಿ ಲಾಕ್ ಆಗಿದ್ದ

ಯ್ಯೂಟ್ಯೂಬ್​ನಲ್ಲಿ ಸಕ್ಸಸ್ ಕಾಣ್ಬೇಕು ಅಂದುಕೊಂಡಿದ್ದ ಸಿಂಗರ್​ ಕ್ಯಾಮೆರಾ, ಮೈಕ್​​ಗಾಗಿ ದರೋಡೆಗಿಳಿದಿದ್ದ.. ಈ ಬಾರಿಯೂ ಪ್ರತಿ ಸಲದಂತೆ ಎಸ್ಕೇಪ್ ಆಗ್ತಿದ್ನೇನೋ.. ಆದ್ರೆ ಬ್ಯಾಂಕ್ ಕ್ಯಾಷಿಯರ್​ ಧೈರ್ಯದಿಂದ ಸಿಂಗರ್ ಪ್ಲಾನ್ ವರ್ಕೌಟ್ ಆಗದೇ ಕೊನೆಗೂ ತಗ್ಲಾಕೊಂಡಿದ್ದಾನೆ. ಅದೇನೆ ಇರಲಿ ಝಣ ಝಣ ಕಾಂಚಾಣ ಜನರ ಕೈಯಲ್ಲಿ ಎಂಥೆತಾ ಕೆಲಸ ಮಾಡಿಸುತ್ತೆ ನೋಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯೂಟ್ಯೂಬ್​ನಲ್ಲಿ ದುಡ್ಡು ಮಾಡಲು ಬ್ಯಾಂಕ್​ ದರೋಡೆ; ಸಿಂಗರ್ ಹೇಳಿದ ಕಥೆ ಕೇಳಿ ಪೊಲೀಸರೇ ಶಾಕ್​​

https://newsfirstlive.com/wp-content/uploads/2024/02/PNB_YOU_TUBE.jpg

Load More