ಪೊನ್ನಣ್ಣ, ಮಂಥರ್‌ಗೌಡ ವಿ‌ರುದ್ಧ FIR ಆಗೋವರೆಗೂ ಅಂತ್ಯಕ್ರಿಯೆ ಮಾಡಲ್ಲ -ಪಟ್ಟು ಹಿಡಿದ ವಿನಯ್ ಕುಟುಂಬ

author-image
Ganesh
Updated On
ಪೊನ್ನಣ್ಣ, ಮಂಥರ್‌ಗೌಡ ವಿ‌ರುದ್ಧ FIR ಆಗೋವರೆಗೂ ಅಂತ್ಯಕ್ರಿಯೆ ಮಾಡಲ್ಲ -ಪಟ್ಟು ಹಿಡಿದ ವಿನಯ್ ಕುಟುಂಬ
Advertisment
  • ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್
  • ಡಿವೈಎಸ್‌ಪಿ ಕಚೇರಿ ಮುಂದೆ ಮೃತದೇಹ ಇಟ್ಟು ಪ್ರತಿಭಟನೆ
  • ಕೊಡಗು ಬಿಜೆಪಿ ಕಾರ್ಯಕರ್ತ ವಿನಯ್ ಕುಟುಂಬಸ್ಥರ ಪಟ್ಟು

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಕೇಸ್​ ರಾಜಕೀಯ ತಿರುವು ಪಡೆದುಕೊಂಡಿದೆ. ವಿನಯ್​ಗೆ ಕಿರುಕುಳ ನೀಡಿದ್ದರೆಂಬ ಆರೋಪ ಹೊತ್ತಿರುವ ಕಾಂಗ್ರೆಸ್​ ಶಾಸಕರ ತಲೆದಂಡಕ್ಕೆ ಬಿಜೆಪಿ ಪಟ್ಟುಹಿಡಿದಿದೆ. ಇತ್ತ ಕಾಂಗ್ರೆಸ್​ ಶಾಸಕರ ವಿರುದ್ಧ ಎಫ್​ಐಆರ್​ ಆಗೋವರೆಗೂ ಅಂತ್ಯಕ್ರಿಯೆ ಮಾಡಲ್ಲ ಅಂತ ಕುಟುಂಬಸ್ಥರು ಪಟ್ಟುಹಿಡಿದಿದ್ದಾರೆ. ಇಂದು ಕುಶಾಲನಗರದಲ್ಲಿ ಪ್ರತಿಭಟನೆ ಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವು.. ಡೆತ್​ನೋಟ್​ನಲ್ಲಿ ಮಾಡಿದ ಆರೋಪಗಳು ಏನೇನು..?

publive-image

ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮೂಲತಃ ಕೊಡಗಿನ ಸೋಮವಾರಪೇಟೆಯ ವಿನಯ್ ಸಾವಿನ ಹಿಂದೆ ಕಾಂಗ್ರೆಸ್ ಶಾಸಕನ ಆಪ್ತನ ಹೆಸರು ಕೇಳಿಬಂದಿದೆ. ಶಾಸಕ ಪೊನ್ನಣ್ಣ ವಿರುದ್ಧ ಮಾಡಿದ್ದ ವಾಟ್ಸ್‌ಆ್ಯಪ್ ಅವಹೇಳನ ಮೇಸೇಜ್ ವಿನಯ್​ ಜೀವವನ್ನೇ ತೆಗೆದಿದೆ ಎನ್ನಲಾಗ್ತಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ ಒಂದಕ್ಕೆ ರಾಜೇಂದ್ರ ಅನ್ನೋನು ತೇಜೋವಧೆಯ ಮೆಸೇಜ್ ಹಾಕಿದ್ದರು. ಆ ಗ್ರೂಪ್ ಕ್ರಿಯೇಟ್ ಮಾಡಿದ್ದು ವಿಷ್ಣು ಎಂಬಾತ. ಕೋ-ಅಡ್ಮಿನ್ ಆಗಿದ್ದ ವಿನಯ್‌ ಮೇಲೆ ಪೊಲೀಸ್ರು ಎಫ್‌ಐಆರ್ ಹಾಕಿದ್ರು. ಇದರಿಂದ ನೊಂದು ವಿನಯ್​ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ವಿನಯ್​ ಡೆತ್‌ನೋಟ್‌ನಲ್ಲಿ ಕಾಂಗ್ರೆಸ್‌ ಮುಖಂಡ ತೆನ್ನಿರ ಮೈನಾ ಹೆಸರನ್ನ ಉಲ್ಲೇಖಿಸಿದ್ದಾನೆ. ಜೊತೆಗೆ ಶಾಸಕರಾದ ಪೊನ್ನಣ್ಣ, ಮಂಥರ್‌ ಗೌಡ ಹೆಸರೂ ಉಲ್ಲೇಖವಾಗಿದೆ.

ಸೂಕ್ತ ತನಿಖೆಗೆ ವಿಜಯೇಂದ್ರ ಆಗ್ರಹ

ಶಾಸಕ ಪೊನ್ನಣ್ಣ ತೇಜೋವಧೆ ಕೇಸ್‌ನಲ್ಲಿ ವಿನಯ್ ಮೂರನೇ ಆರೋಪಿಯಾಗಿದ್ರು. ಕೇಸ್​​ಗೆ ತಡೆಯಾಜ್ಞೆ ಇದ್ದರೂ ನಿರಂತರ ಕಿರುಕುಳ ನೀಡ್ತಿದ್ರು ಅಂತ ವಿನಯ್ ಪರ ವಕೀಲ ನಿಶಾಂತ್ ಕುಶಾಲಪ್ಪ ಆರೋಪಿಸಿದ್ದಾರೆ. ಇತ್ತ ವಿನಯ್ ಸಾವಿಗೆ ಆ ಮೂವರೇ ಕಾರಣ ಅಂತ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದ್ದಾರೆ. ಸೂಕ್ತ ತನಿಖೆ ಮಾಡಿ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

publive-image

ಸ್ಟೇ ತಂದ ಬಳಿಕ ಸುಮ್ಮನಾಗಿದ್ವಿ.. ತೆನ್ನಿರ ಮೈನಾ ಸ್ಪಷ್ಟನೆ

ಡೆತ್‌ನೋಟ್‌ನಲ್ಲಿ ತೆನ್ನಿರ ಮೈನಾ ಹೆಸರು ಉಲ್ಲೇಖವಾಗಿರೋ ಬಗ್ಗೆ ಮೈನಾ ಸ್ಪಷ್ಟನೆ ನೀಡಿದ್ದಾರೆ.. ವಿನಯ್ ಕೋರ್ಟ್‌ನಿಂದ ಸ್ಟೇ ತಂದಿದ್ರು, ಆ ಬಳಿಕ ನಾವು ಸುಮ್ಮನಾಗಿದ್ವಿ ಅಂತ ತಿಳಿಸಿದ್ದಾರೆ. ಶಾಸಕ ಪೊನ್ನಣ್ಣ, ಶಾಸಕ ಮಂಥರ್‌ಗೌಡ ಹಾಗೂ ಹರೀಶ್ ಪೂವಯ್ಯ ವಿ‌ರುದ್ಧ FIR ಆಗಬೇಕು ಇಲ್ಲದಿದ್ರೆ ವಿನಯ್ ಅಂತ್ಯಕ್ರಿಯೆ ಮಾಡಲ್ಲ ಅಂತ ಸಹೋದರ ವಿವೇಕ್ ಸೋಮಯ್ಯ ಪಟ್ಟು ಹಿಡಿದಿದ್ದಾರೆ. ಇಂದು ಕುಶಾಲನಗರ ಡಿವೈಎಸ್‌ಪಿ ಕಚೇರಿ ಮುಂಭಾಗ ವಿನಯ್​ ಮೃತದೇಹ ಇಟ್ಟು ಪ್ರತಿಭಟನೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.. ಕೋರ್ಟ್ ಅನುಮತಿ ಪಡೆದು ಪೊನ್ನಣ್ಣ ಮಂಥರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಒಟ್ನಲ್ಲಿ ವಿನಯ್ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಅವರ ಕುಟುಂಬ ಆಗ್ರಹಿಸಿದೆ.. ಬಿಜೆಪಿ ಕಾರ್ಯಕರ್ತನ ಸಾವಿನ ಹಿಂದೆ ಇರೋ ಕೈಗಳ ಬಗ್ಗೆ ಪೊಲೀಸರು ತನಿಖೆ ಮಾಡಬೇಕಿದೆ. ಆತ್ಯಹತ್ಯೆ ಹಿಂದಿನ ಸತ್ಯವೇನು ಅನ್ನೋದು ತನಿಖೆಯಿಂದ ತಿಳಿಯಬೇಕಿದೆ.

ಇದನ್ನೂ ಓದಿ: ಮತ್ತೆ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ; ಯಾವ ಸೀರಿಯಲ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment