/newsfirstlive-kannada/media/post_attachments/wp-content/uploads/2025/03/BhargaviLLB2.jpg)
ಸತ್ಯ ಧಾರಾವಾಹಿ ಖ್ಯಾತಿಯ ನಿರ್ದೇಶಕಿ ಸ್ವಪ್ನ ಕೃಷ್ಣ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಭಾರ್ಗವಿ LLB ಮೊದಲ ಸಂಚಿಕೆ ಪ್ರಸಾರವಾಗಿದೆ. ಆರಂಭದಲ್ಲೇ ನಾಯಕಿ ಭಾರ್ಗವಿ ಕುಟುಂಬದ ಪರಿಚಯ ತೆರೆದುಕೊಳ್ಳುತ್ತೆ.
ಇದನ್ನೂ ಓದಿ:ಸಾಧು ಕೋಕಿಲಗೆ ತರಾಟೆ ತಗೊಂಡ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್; ತಪ್ಪು ಮಾಡಿದ್ದು ಯಾರು?
ಭಾರ್ಗವಿ ಪಾತ್ರ ಮಾಡ್ತಿರೋ ನಟಿ ರಾಧಾ ಭಗವತಿ ಅದ್ಭುತವಾದ ಗಾಯಕಿ. ಇವರ ಭಕ್ತಿ ಗೀತೆ ಜೊತೆ ಅಮ್ಮನ ಬೈಗುಳ, ಅಪ್ಪನ ಶಕ್ತಿ ತುಂಬುವ ಮಾತುಗಳು ಗಮನ ಗಮನ ಸೇಳೆಯುವಂತಿವೆ. ಸಾಮಾನ್ಯ ಕುಟುಂಬ, ಪ್ರತಿ ಮನೆಗೂ ಕನೆಕ್ಟ್ ಆಗುವಂತಹ ಮಿಡಲ್ ಕ್ಲಾಸ್ ಕುಟುಂಬ ನಾಯಕಿಯದ್ದು.
View this post on Instagram
ಇನ್ನೂ, ನಾಯಕನ ಕುಟುಂಬಕ್ಕೆ ಬರೋದಾದ್ರೇ, ಪಾತ್ರಗಳನ್ನ ಈಗಿನ ಟ್ರೆಂಡ್ಗೆ ತಕ್ಕಹಾಗೆ ಯೂಟ್ಯೂಬ್ ವ್ಲಾಗ್ ಮೂಲಕ ಪರಿಚಯ ಮಾಡಿ ಕೊಡ್ತಾರೆ. ಸ್ಟ್ರಿಕ್ಟ್ ಲಾಯರ್ ಜೆಪಿ ಪಾಟೀಲ್ ಕುಟಂಬದಲ್ಲಿ ದೊಡ್ಡ ತಾರಾಬಳಗ ಇದೆ. ಇನ್ನೂ ಸತ್ಯ ಧಾರಾವಾಹಿಯಲ್ಲಿ ಬಾಲ ಪಾತ್ರ ಮಾಡಿದ್ದ ನಟ, ಭಾರ್ಗವಿ LLB ನಲ್ಲೂ ಯುನಿಕ್ ಆಗಿರೋ ನೆಗೆಟಿವ್ ಕ್ಯಾರೆಕ್ಟರ್ ಮಾಡಿದ್ದಾರೆ.
ಇಲ್ಲೊಂದು ಫೈಟ್ ಸೀನ್ ಇದೆ. ಹುಡುಗಿಗೆ ಆಗ್ತಿರೋ ಅನ್ಯಾಯಕ್ಕೆ ಸಿಡಿದೇಳೋ ಭಾರ್ಗವಿ ರೌಡಿಗಳನ್ನ ಹೊಡೆದು ಉರುಳಿಸಿದ್ದಾಳೆ. ಇದ್ಯಾರಪ್ಪ ಧೈರ್ಯಶಾಲಿ ಚಲುವೆ ಅಂತ ಕಣ್ಣರಳಿಸುತ್ತ ಹೀರೋ ಅರ್ಜುನ್ ಎಂಟ್ರಿ ಕೊಡ್ತಾರೆ. ಅರ್ಜುನ್ ಪಾತ್ರದಲ್ಲಿ ನಟ ಮನೋಜ್ ಸಖತ್ ಹ್ಯಾಂಡ್ಸಮ್ ಹಾಗೂ ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಭಾರ್ಗವಿ LLb ಸ್ಟೋರಿ ನಿರೀಕ್ಷೆ ಮೂಡಿಸಿದೆ. ದೃಶ್ಯಗಳು ಅಷ್ಟೇ ಸಖತ್ ರಿಚ್ ಆಗಿ ಮೂಡಿ ಬಂದಿವೆ. ಇದೇ ರೀತಿ ವೈಭ್ ಖಂಡಿತ ಗೆಲ್ಲೋ ಭರವಸೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ