/newsfirstlive-kannada/media/post_attachments/wp-content/uploads/2025/07/bharjari-bachelors.jpg)
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಶನಿವಾರ ಮತ್ತು ಭಾನುವಾರ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಗ್ರ್ಯಾಂಡ್ ಫಿನಾಲೆ ನಡೆದಿತ್ತು. 10 ಬ್ಯಾಚುಲರ್ಸ್ಗಳಲ್ಲಿ ಒಬ್ಬರು ವಿನ್ನರ್ ಆಗಿದ್ದಾರೆ. ಮತ್ತಿಬ್ಬರಿಗೆ ರನ್ನರ್ ಪಟ್ಟ ಸಿಕ್ಕಿದೆ.
ಇದನ್ನೂ ಓದಿ:ಮಹಿಳೆಯರಿಗಾಗಿ ಸರ್ಕಾರದ ಯೋಜನೆ.. ಆದ್ರೆ ಕೋಟಿ ಕೋಟಿ ಹಣ ನುಂಗಿದ ರಾಜ್ಯದ ಪುರುಷರು!
ಹೌದು, ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವಿನ್ನರ್ ಆಗಿದ್ದಾರೆ ಸುನೀಲ್. ಫಸ್ಟ್ ರನ್ನಪ್ ರಕ್ಷಕ್ ಬುಲೆಟ್ ಆಗಿದ್ದು, 2ನೇ ರನ್ನರ್ ಅಪ್ ಡ್ರೋನ್ ಪ್ರತಾಪ್ ಆಗಿದ್ದಾರೆ. ಇನ್ನೂ, ಸುನೀಲ್ ಅವರು ವಿನ್ನರ್ ಎಂದು ರವಿಚಂದ್ರನ್ ಘೋಷಣೆ ಮಾಡಿದರು. ಈ ಮೂಲಕ ಸುನೀಲ್ ಹಾಗೂ ಅಮೃತಾ ಜೋಡಿ ಅಂತಿಮವಾಗಿ ವಿನ್ ಆಗಿದ್ದಾರೆ. ಸುನೀಲ್ಗೆ ಟ್ರೋಫಿ ಜೊತೆಗೆ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ಸಿಕ್ಕಿದೆ.
ಅದರಂತೆ ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿಗೆ ಎರಡನೇ ರನ್ನರ್ ಅಪ್ ಸ್ಥಾನ ಹಾಗೂ ರಕ್ಷಕ್ ಮತ್ತು ರಮೋಲಾ ಜೋಡಿಗೆ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಪ್ರತಾಪ್ಗೆ 3 ಲಕ್ಷ ರೂಪಾಯಿ ಸಿಕ್ಕಿತು. ಅದರಲ್ಲಿ ಅರ್ಧ ಹಣವನ್ನು ಗಗನಾಗೆ ನೀಡೋದಾಗಿ ಪ್ರತಾಪ್ ವೇದಿಕೆ ಮೇಲೆ ಹೇಳಿದರು. ರಕ್ಷಕ್ಗೆ 10 ಲಕ್ಷ ರೂಪಾಯಿ ನೀಡಲಾಯಿತು. ವಿಶೇಷ ಎಂದರೆ ಈ ಸೀಸನ್ ಸ್ಪೆಷಲ್ ಸ್ಪರ್ಧಿ ಸೂರ್ಯಗೆ 1 ಲಕ್ಷ ರೂಪಾಯಿ ನೀಡಲಾಗಿದೆ.
ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಮುಕ್ತಾಯಗೊಳ್ಳುತ್ತಿದ್ದಂತೆ ನಾವು ನಮ್ಮವರು ಎಂಬ ಶೋ ಬರುತ್ತಿದೆ. ಇದಕ್ಕೆ ತೀರ್ಪುಗಾರರಾಗಿ ಅಮೂಲ್ಯ, ಶರಣ್ ಹಾಗೂ ತಾರಾ ಅವರು ಜಡ್ಜ್ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇದೇ ಆಗಸ್ಟ್ 2ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಪ್ರಸಾರ ಕಾಣಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ