ಸಂಜಿತ್ ಹೆಗ್ಡೆ ಸಾಂಗ್​ಗೆ ಹಿಂಗೂ ಡ್ಯಾನ್ಸ್​ ಮಾಡ್ಬಹುದಾ? ರಮೋಲಾ ಬೆಲ್ಲಿ ಸ್ಟೆಪ್ ನೋಡಿ; VIDEO

author-image
Veena Gangani
Updated On
ಸಂಜಿತ್ ಹೆಗ್ಡೆ ಸಾಂಗ್​ಗೆ ಹಿಂಗೂ ಡ್ಯಾನ್ಸ್​ ಮಾಡ್ಬಹುದಾ? ರಮೋಲಾ ಬೆಲ್ಲಿ ಸ್ಟೆಪ್ ನೋಡಿ; VIDEO
Advertisment
  • ಕನ್ನಡತಿ ಸೀರಿಯಲ್​ನಲ್ಲಿ ಖಡಕ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಮೋಲಾ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನಟಿಯ ಹಾಟ್ ವಿಡಿಯೋ​
  • ಸೀತಾರಾಮ ಮುಕ್ತಾಯದ ಬಳಿಕ ಭರ್ಜರಿ ಬ್ಯಾಚುಲರ್ಸ್​ಗೆ ನಟಿ ಎಂಟ್ರಿ

ಕಿರುತೆರೆ ನಟಿ ರಮೋಲಾ ಸಖತ್ ಫ್ಯಾಷನ್ ಪ್ರಿಯೆ. ಕನ್ನಡತಿ ಧಾರಾವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಫೇಮಸ್​ ಆಗಿದ್ದ ನಟಿ ರಮೋಲಾ ಸದ್ಯ ಸಖತ್​ ಸುದ್ದಿಯಲ್ಲಿದ್ದಾರೆ. ಫ್ಯಾಷನ್ ಅನ್ನೇ ಜೀವಾಳವಾಗಿಸಿಕೊಂಡಿರುವ ನಟಿ ರಮೋಲಾ ಆಗಾಗ ಹೊಸ ಹೊಸ ಫೋಟೋಗಳು ಹಾಗೂ ಡ್ಯಾನ್ಸ್​ ಮಾಡಿರೋ ರೀಲ್ಸ್​ ಶೇರ್​ ಮಾಡಿಕೊಳ್ಳುತ್ತ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗುತ್ತಿರುತ್ತಾರೆ.

publive-image

ಕನ್ನಡತಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ಸೀತಾರಾಮಕ್ಕೆ ಎಂಟ್ರಿ ಕೊಟ್ಟಿದ್ದರು. ರಾಮ ಸೀತೆ ಮುಕ್ತಾಯದ ಬಳಿಕ ಸದ್ಯ ಭರ್ಜರಿ ಬ್ಯಾಚುಲರ್ಸ್​ನಲ್ಲಿ ಮೆಂಟರ್​ ಆಗಿದ್ದಾರೆ. ಅದು ಬಿಗ್​ಬಾಸ್​ ಖ್ಯಾತಿಯ ರಕ್ಷಕ್​ ಬುಲೆಟ್​ಗೆ ಮೆಂಟರ್​ ಆಗಿ ಸಖತ್​ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ.

publive-image

ಸದ್ಯ ನಟಿ ರಮೋಲಾ ಸ್ಟಾರ್ ಸಿಂಗರ್ ಸಂಜಿತ್​ ಹೆಗ್ಡೆ ಅವರ ಹಾಡಿಗೆ ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ. ವೈಟ್ ಅಂಡ್ ವೈಟ್ ಕಾಸ್ಟ್ಯೂಮ್​ನಲ್ಲಿ ಬೆಲ್ಲಿ ಡ್ಯಾನ್ಸ್​ ಮಾಡಿ ನೋಡುಗರ ಕಣ್ಮನ ಸೆಳೆದಿದ್ದಾರೆ.

ಇದೇ ವಿಡಿಯೋವನ್ನು ನಟಿ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಿನ್ನೆ ತನಕ ಸಾಂಗ್​ಗೆ ಹೀಗೂ ಡ್ಯಾನ್ಸ್ ಮಾಡಬಹುದು ಅಂತ ನಟಿ ರಮೋಲಾ ತೋರಿಸಿ ಕೊಟ್ಟಿದ್ದಾರೆ. ಸದ್ಯ ಇದೇ ವಿಡಿಯೋ ಸಖತ್​ ಟ್ರೆಂಡಿಂಗ್​ನಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment