newsfirstkannada.com

ಪ್ರೀತಿಸಿದ ಹುಡುಗನನ್ನೇ ಅಯೋಧ್ಯೆಯಲ್ಲಿ ಮದುವೆ ಆಗಲು ಸಜ್ಜಾದ ನಟಿ ಐಶ್ವರ್ಯಾ

Share :

Published January 31, 2024 at 6:14pm

  ಹಳ್ಳಿ ಹೈದಾ ಪ್ಯಾಟೆಗೆ ಬಂದ ಸೀಸನ್ 1ರ ವಿನ್ನರ್ ಕೂಡ ಆಗಿದ್ದ ನಟಿ

  ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡ ಐಶ್ವರ್ಯ

  ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಐಶ್ವರ್ಯ

ಕನ್ನಡ ಕಿರುತೆರೆ ಮತ್ತೋರ್ವ ನಟಿ ತಮ್ಮ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಕಿರುತೆರೆಯ ಹಲವಾರು ರಿಯಾಲಿಟಿ ಶೋಗಳಲ್ಲಿ ಐಶ್ವರ್ಯ ಅವರು ಭಾಗವಹಿಸಿದ್ದಾರೆ. ಜೀ ವಾಹಿನಿಯ ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಶೋನಲ್ಲಿ ಐಶ್ವರ್ಯ ಸ್ಪರ್ಧಿಯಾಗಿದ್ದರು. ಜೊತೆಗೆ ಜನಪ್ರಿಯ ರಿಯಾಲಿಟಿ ಶೋ ಹಳ್ಳಿ ಹೈದಾ ಪ್ಯಾಟೆಗೆ ಬಂದ ಸೀಸನ್ 1ರ ವಿನ್ನರ್ ಕೂಡ ಆಗಿದ್ದರು ನಟಿ ಐಶ್ವರ್ಯ.

ಸದ್ಯ, ಐಶ್ವರ್ಯ ಈಗ ಸಂತಸದಲ್ಲಿದ್ದಾರೆ. ಕಾರಣ ತಮ್ಮ ಪ್ರಿಯತಮ ಅರುಣ್ ಎಂಬುವವರ ಜೊತೆ ರೀಸೆಂಟ್​ ಆಗಿ ಗುರು ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಅರುಣ್ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈ ಇಬ್ಬರ ಜೋಡಿಯಂತೂ ಫುಲ್ ಮಸ್ತ್ ಆಗಿದೆ. ಇನ್ನೂ ಇದೇ ವರ್ಷದ ಕೊನೆಯಲ್ಲಿ ಅಯೋಧ್ಯೆಯಲ್ಲಿ ಮದುವೆಯಾಗಲು ಈ ಜೋಡಿ ನಿರ್ಧರಿಸಿದೆ.

ಕಿರುತೆರೆಯಲ್ಲಿ ಸಕ್ರಿಯರಾಗಿರುವ ಐಶ್ವರ್ಯ ಅವರು ತಾವು ಪ್ರೀತಿಸಿದ ಹುಡುಗನ ಜೊತೆ ಮದುವೆ ಮಾಡಿಕೊಳ್ತಿರೋ ಖುಷಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಅರುಣ್-ಐಶ್ವರ್ಯ ಇಬ್ಬರು ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಇನ್ನೂ ಕಿರುತೆರೆಯ ಐಶ್ವರ್ಯ ಸ್ನೇಹಿತರ ಬಳಗ ಹಾಗೂ ಚಿತ್ರರಂಗದಿಂದ ಅರುಣ್ ಸ್ನೇಹಿತರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಕೂಡ ಆಗಿದ್ದರು. ಒಟ್ಟಿನಲ್ಲಿ ಈ ಇಬ್ಬರ ಜೋಡಿ ಬಾಳು ಆನಂದಕರವಾಗಿರಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದ ಹುಡುಗನನ್ನೇ ಅಯೋಧ್ಯೆಯಲ್ಲಿ ಮದುವೆ ಆಗಲು ಸಜ್ಜಾದ ನಟಿ ಐಶ್ವರ್ಯಾ

https://newsfirstlive.com/wp-content/uploads/2024/01/aishu-2.jpg

Load More