ಭುವನೇಶ್ ಕೊಟ್ಟ ಆ 2 ಸರ್​ಪ್ರೈಸ್​ಗೆ ವೇದಿಕೆ ಮೇಲೆ ಅನನ್ಯಾ ಅಮರ್ ಕಣ್ಣೀರಧಾರೆ.. ಏನದು?

author-image
Veena Gangani
Updated On
ಭುವನೇಶ್ ಕೊಟ್ಟ ಆ 2 ಸರ್​ಪ್ರೈಸ್​ಗೆ ವೇದಿಕೆ ಮೇಲೆ ಅನನ್ಯಾ ಅಮರ್ ಕಣ್ಣೀರಧಾರೆ.. ಏನದು?
Advertisment
  • ಗಿಚ್ಚಿ ಗಿಲಿಗಿಲಿ ಬೆನ್ನಲ್ಲೇ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟ ಅನನ್ಯಾ ಅಮರ್
  • ಅನನ್ಯಾ​ಗೆ ಜತೆಯಾದ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಭುವನೇಶ್​
  • ಭುವನೇಶ್​ ಕೊಟ್ಟ ಸರ್​ಪ್ರೈಸ್​ ನೋಡಿ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಅನನ್ಯಾ

ಗಿಚ್ಚಿ ಗಿಲಿಗಿಲಿ ಶೋ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿರೋ ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಅದುವೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2. ಗಿಚ್ಚಿ ಗಿಲಿಗಿಲಿ ಶೋ ಬಳಿಕ ಕನ್ನಡ ಮತ್ತೊಂದು ಶೋ ಭರ್ಜರಿ ಬ್ಯಾಚ್ಯುಲರ್ಸ್​ಗೆ ಅನನ್ಯಾ ಅಮರ್​ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಅನನ್ಯಾ ಅಮರ್​ಗೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಭುವನೇಶ್​ ಜೋಡಿಯಾಗಿದ್ದಾರೆ.

ಇದನ್ನೂ ಓದಿ: ತಿಮ್ಮಪ್ಪನ ಭಕ್ತರಿಗೆ ಸಿಹಿ ಸುದ್ದಿ.. 5 ದಿನಗಳ ಅದ್ಧೂರಿ ತೆಪ್ಪೋತ್ಸವಕ್ಕೆ ಭರ್ಜರಿ ಸಿದ್ಧತೆ; ಈ ಬಾರಿ ಹಲವು ವಿಶೇಷ!

publive-image

ಈ ವಾರ 10 ಬ್ಯಾಚ್ಯುಲರ್ಸ್​ಗಳಿಗೆ ಡಿಂಪಲ್​ ಕ್ವೀನ್ ರಚಿತಾ ರಾಮ್​ ಹಾಗೂ ಕ್ರೇಜಿ ಸ್ಟಾರ್​ ರವಿಚಂದ್ರನ್​ ಟಾಸ್ಕ್​ವೊಂದನ್ನು ಕೊಟ್ಟಿದ್ದರು. ತಮ್ಮ ತಮ್ಮ ಜೋಡಿಗೆ ಬ್ಯಾಚ್ಯುಲರ್ಸ್​ಗಳು ಸರ್​ಪ್ರೈಸ್​ ನೀಡಬೇಕಿತ್ತು. ಹೀಗಾಗಿ ಎಲ್ಲಾ 10 ಬ್ಯಾಚ್ಯುಲರ್ಸ್ ತಮ್ಮ ತಮ್ಮ ಜೋಡಿಗಳಿಗೆ ಸರ್​ಪ್ರೈಸ್ ನೀಡಿದ್ದರು.

publive-image

ಅದರಲ್ಲಿ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಭುವನೇಶ್​ ಅವರು ಅನನ್ಯಾ ಅಮರ್​ಗೆ ಮರೆಯರಾದ ಸರ್​ಪ್ರೈಸ್​ ಅನ್ನು ಕೊಟ್ಟಿದ್ದಾರೆ. ಮೊದಲು ಅನನ್ಯಾ ಅವರ್​ ಅವರ ಬಾಲ್ಯದ ನೆನಪಿನಿಂದ ಶುರುಮಾಡಿದ್ದಾರೆ. ಇದಾದ ಬಳಿಕ ಅನನ್ಯಾ ಅಮರ್​ಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅಂದ್ರೆ ಪಂಚಪ್ರಾಣ. ಹೀಗಾಗಿ ಶಿವಣ್ಣ ಅವರ ಹಾಡಿಗೆ ಭುವನೇಶ್​ ಡ್ಯಾನ್ಸ್​​ ಮಾಡಿದ್ದಾರೆ. ಇದಾದ ಬಳಿಕ ವೇದಿಕೆಗೆ ಅನನ್ಯಾ ಅಮರ್ ಅಕ್ಕ ಅಂಕಿತ ಅಮರ್ ಅವರನ್ನು ಕರೆಸಿದ್ದರು. ಅಕ್ಕ ಅಂಕಿತರನ್ನು ನೋಡುತ್ತಿದ್ದಂತೆ ಅನನ್ಯಾ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ತಂಗಿಗಾಗಿ ಅಕ್ಕ ‘ಓ ಮಲ್ಲಿಗೆಯೆ ಹರಸಿ ಹಾಡುವೆ ನಿನಗೆ ನಾನು’ ಹಾಡನ್ನು ಹಾಡಿದ್ದಾರೆ.

ಮತ್ತೊಂದು ಸರ್​ಪ್ರೈಸ್​ ಎಂದರೆ ಶಿವಣ್ಣನ ಕಾಲ್​. ಹೌದು, ವೇದಿಕೆ ಮೇಲೆ ನಿಂತುಕೊಂಡಿದ್ದ ಅನನ್ಯಾ ಅವರಿಗೆ ಸರ್​ಪ್ರೈಸ್​ ರೀತಿಯಲ್ಲಿ ಶಿವಣ್ಣ ಅವರ ಧ್ವನಿ ಕೇಳಿಸಿದೆ. ಆಗ ಫುಲ್ ಶಾಕ್​ ಆದ ಅನನ್ಯಾ ಖುಷಿಯಲ್ಲಿ ಶಿವಣ್ಣನ ಜೊತೆಗೆ ಮಾಡಿದ್ದಾರೆ. ಬಳಿಕ ಪಾರ್ಟ್ನರ್ ಭುವನೇಶ್​ಗೆ ಧನವ್ಯಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment