ಡ್ರೋನ್​ ಪ್ರತಾಪ್​ ಮ್ಯಾಜಿಕ್​.. ಊಹಿಸಲಾಗದ ಸರ್​ಪ್ರೈಸ್​ ನೋಡಿ ಕಣ್ಣೀರಿಟ್ಟ ಗಗನಾ; VIDEO

author-image
Veena Gangani
Updated On
ಡ್ರೋನ್​ ಪ್ರತಾಪ್​ ಮ್ಯಾಜಿಕ್​.. ಊಹಿಸಲಾಗದ ಸರ್​ಪ್ರೈಸ್​ ನೋಡಿ ಕಣ್ಣೀರಿಟ್ಟ ಗಗನಾ; VIDEO
Advertisment
  • ಗಗನಾಗೆ ಜೋಡಿಯಾದ ಬಿಗ್​ಬಾಸ್​ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್
  • 1000 ಅಡಿ ಎತ್ತರಕ್ಕೆ ಗಗನಾಳನ್ನು ಕರೆದುಕೊಂಡು ಹೋದ ಡ್ರೋನ್ ಪ್ರತಾಪ್
  • ಡ್ರೋನ್ ಪ್ರತಾಪ್ ಕೊಟ್ಟ ಸರ್​ಪ್ರೈಸ್​ಗೆ ರಚಿತಾ ರಾಮ್​ ಫುಲ್​ ಶಾಕ್​

ಕಳೆದ ವಾರ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಕಾರ್ಯಕ್ರಮ ಸಖತ್ ಗ್ರ್ಯಾಂಡ್​ ಆಗಿ ಓಪನಿಂಗ್ ಪಡೆದುಕೊಂಡಿದೆ. ಈ ಬಾರಿಯ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ:SSLC ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್.. ಯಾವ್ಯಾವ ವಿಷಯ ಸೋರಿಕೆ ಆಗಿವೆ?

publive-image

ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಬುಲೆಟ್ ರಕ್ಷಕ್, ಸಿಂಗರ್ ದರ್ಶನ್ ನಾರಾಯಣ್, ಸುನೀಲ್‌, ಪ್ರೇಮ್ ಥಾಪ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಜೈನ್, ಉಲ್ಲಾಸ್​, ಕಿರಣ್​ ಸಿದ್ದಿ, ಭುವನೇಶ್​ ಈ ಹತ್ತು ಬ್ಯಾಚುಲರ್ಸ್​ಗೆ 10 ಸುಂದರಿಯರು ಮೆಂಟರ್ಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಶೋ ರಂಗನ್ನು ಹೆಚ್ಚಿಸಿದೆ.

publive-image

ಇನ್ನೂ, ಗಗನಾಗೆ ಬಿಗ್​ಬಾಸ್​ ಖ್ಯಾತಿಯ ಡ್ರೋನ್ ಪ್ರತಾಪ್ ಜೋಡಿಯಾಗಿ ಆಯ್ಕೆಯಾಗಿದ್ದಾರೆ. ಯಾವಾಗ ಗಗನಾ ಜೋಡಿ ಅಂತ ಗೊತ್ತಾಯ್ತೋ ಆಗ ಡ್ರೋನ್ ಪ್ರತಾಪ್ ನಾಚಿ ನೀರಾಗಿದ್ದರು. ಕಳೆದ ಸಂಚಿಕೆಯಲ್ಲಿ ವೇದಿಕೆಗೆ ಱಂಪ್ ವಾಕ್ ಮಾಡುತ್ತಾ ಬಂದ ಡ್ರೋನ್​ ಪ್ರತಾಪ್​ ಹಾಗೂ ಗಗನಾ ಭರ್ಜರಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದಿದ್ದರು.

publive-image

ಇದೀಗ ಯಾರು ಊಹಿಸಲಾಗದಂತಹ ಸರ್​ಪ್ರೈಸ್​ವೊಂದನ್ನು ಕೊಟ್ಟಿದ್ದಾರೆ ಡ್ರೋನ್​ ಪ್ರತಾಪ್​. ಹೌದು, ಬಿಗ್​​ಬಾಸ್​ ಮೂಲಕ ಸಖತ್ ಫೇಮಸ್ ಆಗಿದ್ದ ಡ್ರೋನ್‌ ಪ್ರತಾಪ್ ಈಗ ಭರ್ಜರಿ ಬ್ಯಾಚುಲರ್ಸ್ʼ ಶೋಗೆ ಎಂಟ್ರಿ ಕೊಟ್ಟು ಕಮಾಲ್​ ಮಾಡುತ್ತಿದ್ದಾರೆ. ಈಗ ಈ ಶೋನಲ್ಲಿ ಮೆಂಟರ್‌ ಆಗಿದ್ದ ಗಗನಾಗೆ 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕಾಪ್ಟರ್ ಮುಂದೆ ತಂದು ಸರ್ಪ್ರೈಸ್‌ ಕೊಟ್ಟಿದ್ದಾರೆ.

publive-image

ರಿಲೀಸ್​ ಆಗಿರೋ ಹೊಸ ಪ್ರೋಮೋದಲ್ಲಿ ಪ್ರತಾಪ್‌ ಅವರು ನಾನು ಡ್ರೋನ್‌ ಪ್ರತಾಪ್‌ ಆದರೆ ನೀವು ಏನು ಅಂತ  ಗಗನಾಗೆ ಪ್ರಶ್ನೆ ಮಾಡಿದ್ದರು. ಆಗ ಗಗನಾ ಹೆಲಿಕಾಪ್ಟರ್ ಗಗನಾ ಎಂದಿದ್ದಾರೆ. ಆ ಕೂಡಲೇ ಮುಂದೆ ನಿಂತುಕೊಂಡಿದ್ದ ಹೆಲಿಕಾಪ್ಟರ್ ನೋಡಿ ಶಾಕ್​ ಅಂಡ್​ ಸರ್​ಪ್ರೈಸ್​ ಆಗಿದ್ದಾರೆ. ಹೆಲಿಕಾಪ್ಟರ್ ಲ್ಯಾಂಡ್‌ ಆಗುತ್ತಿದ್ದಂತೆ ಗಗನಾ ಖುಷಿಯಿಂದ ಕಿರುಚಾಡಿದ್ದಾರೆ. ಕನ್ನಡದ ಹೆಣ್ಣು ಮಗಳು 1000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಳೆ ಎಂದು ಹೆಲಿಕಾಪ್ಟರ್​ನಲ್ಲೇ ಕೂಗಿದ್ದಾರೆ. ಇನ್ನೂ, ಹೆಲಿಕಾಪ್ಟರ್​ನಲ್ಲಿ ಗಗನಾಗೆ ಅರಿಶಿನ ಕುಂಕುಮ ಕೊಟ್ಟು ಕಣ್ಣೀರು ಒರೆಸಿದ್ದಾರೆ ಡ್ರೋನ್​ ಪ್ರತಾಪ್.

ಇದಾದ ಬಳಿಕ ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ ಗಗನಾ, ಸಖತ್​ ಖುಷಿಯಾಗಿದೆ. ನಾನು ನಿರೀಕ್ಷೆ ಮಾಡಿರಲಿಲ್ಲ,  ಡ್ರೋನ್‌ ಪ್ರತಾಪ್‌ ನನಗೆ ಸ್ಪರ್ಧಿಯಾಗಿ ಸಿಕ್ಕಿದ್ದು ಅದೃಷ್ಟ ಎಂದು ಹೇಳಿದ್ದಾರೆ. ಇನ್ನು, ಪ್ರತಾಪ್‌ ಅವರು ಲಕ್ಷ್ಮೀ ರೂಪ ಬಲಗಾಲಿಟ್ಟು ಬರಲಿ ಎಂದು ತನ್ನ ತೊಡೆಯ ಮೇಲೆ ಗಗನಾ ಕಾಲಿಟ್ಟು, ಆ ಕಾಲಿಗೆ ಬೆಳ್ಳಿ ಕಾಲ್ಗೆಜ್ಜೆ ತೊಡಿಸಿದ್ದಾರೆ. ಇದನ್ನೂ ನೋಡಿದ ವೀಕ್ಷಕರು ಹಾಗೂ ಜಡ್ಜಸ್ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment