/newsfirstlive-kannada/media/post_attachments/wp-content/uploads/2025/07/BharjariBachelors.jpg)
ಇಷ್ಟು ದಿನ ವೀಕ್ಷಕರನ್ನು ನಕ್ಕು ನಕಲಿಸಿದ್ದ ಜೋಡಿಗಳು ವಿದಾಯ ಹೇಳೋದಕ್ಕೆ ಸಜ್ಜಾಗಿದ್ದಾರೆ. ಒಟ್ಟು 10 ಜೋಡಿಗಳು ಇಷ್ಟು ದಿನ ಭರ್ಜರಿಯಾಗಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಆದ್ರೆ ಮುಂದಿನ ವಾರದಿಂದ ಈ 10ಗಳು ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ವಕೀಲರ ಬದಲಾವಣೆ.. ನಟ ದರ್ಶನ್​​ಗೆ ಢವಢವ..!
/newsfirstlive-kannada/media/post_attachments/wp-content/uploads/2025/02/BharjariBachelorsSeason2.jpg)
ಹೌದು, ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್​ 2 ಫೆಬ್ರವರಿ 22ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಅಂದಿನಿಂದ ಇಂದಿನವರೆಗೂ ಬ್ಯಾಚುಲರ್ಸ್ ವೀಕ್ಷಕರಿಗೆ ಭರ್ಜರಿ ಮನರಂಜನೆ ಕೊಟ್ಟಿದ್ದಾರೆ. ಆದ್ರೆ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್​ 2 ಅಂತ್ಯ ಆಗುತ್ತಿದೆ. ಹೀಗಾಗಿ ಬ್ಯಾಚುಲರ್ಸ್​ಗಳ ರೋಚಕ ಜರ್ನಿಗೆ ಗ್ರ್ಯಾಂಡ್​ ಫಿನಾಲೆ ಸಾಕ್ಷಿಯಾಗಲಿದೆ. ಇನ್ನೂ, ಭರ್ಜರಿ ಬ್ಯಾಚುಲರ್ಸ್ ಗ್ರ್ಯಾಂಡ್​ ಫಿನಾಲೆ ಭಾನುವಾರ ಸಂಜೆ 6ಕ್ಕೆ ಪ್ರಸಾರ ಕಾಣಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಯಾವ ಜೋಡಿ ವಿನ್ನರ್​ ಪಟ್ಟ ಸಿಕ್ಕಿದೆ ಎಂದು ಗೊತ್ತಾಗಲಿದೆ.
/newsfirstlive-kannada/media/post_attachments/wp-content/uploads/2025/02/BharjariBachelorsSeason21.jpg)
ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಒಟ್ಟು 10 ಮೆಂಟರ್ಸ್​ಗಳು ಹಾಗೂ 10 ಬ್ಯಾಚುಲರ್ಸ್​ಗಳು ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ 10 ಬ್ಯಾಚುಲರ್ಸ್​​ಗಳಿಗೆ 10 ಮೆಂಟರ್ಸ್​ಗಳನ್ನು ಜೋಡಿಯಾಗಿ ಆಯ್ಕೆ ಮಾಡಲಾಗಿತ್ತು. ಹೀಗೆ ಲಕ್ಷಣ ಖ್ಯಾತಿಯ ವಿಜಯಲಕ್ಷ್ಮೀ, ಅಮೃತಧಾರೆ ಖ್ಯಾತಿಯ ಅಮೃತಾ, ರಾಮಾಚಾರಿ ಖ್ಯಾತಿಯ ಅಭಿಗ್ನಾ ಭಟ್​, ಬಿಗ್​ಬಾಸ್ ಸೀಸನ್​ 10ರ ಸ್ಪರ್ಧಿಯಾಗಿದ್ದ ಪವಿ ಪೂವಪ್ಪ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಅನನ್ಯ ಅಮರ್​, ಕನ್ನಡತಿ ಖ್ಯಾತಿಯ ರಮೋಲಾ ಹಾಗೂ ಮಹಾನಟಿ ಶೋ ಖ್ಯಾತಿಯ ಗಗನಾ, ಧನ್ಯಶ್ರೀ, ಅಮೃತಾ ರಾಜ್​ ಸೇರಿದಂತೆ 10 ಸುಂದರಿಯರು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/02/bharjari-bachelors.jpg)
ಇನ್ನೂ, ಬ್ಯಾಚುಲರ್​ಗಳಾಗಿ, ಸರಿಗಮಪ ಖ್ಯಾತಿಯ ಸುನೀಲ್​, ಬಿಗ್​ ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್, ರಕ್ಷಕ್​ ಬುಲೆಟ್​, ಸರಿಗಮಪ ಸೀಸನ್ 20ರ ವಿಜೇತ ದರ್ಶನ್ ನಾರಾಯಣ್, ಪ್ರೇಮ್ ಥಾಪ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪ್ರವೀಣ್ ಜೈನ್, ಉಲ್ಲಾಸ್​, ಕಿರಣ್​ ಸಿದ್ದಿ, ಭುವನೇಶ್​ ಭಾಗಿಯಾಗಿದ್ದರು. ವಿಶೇಷ ಎಂದರೆ ಈ ಬಾರಿ ಸ್ಟಾರ್​ ನಿರೂಪಕರಾಗಿ ನಿರಂಜನ್ ದೇಶಪಾಂಡೆ ಅವರು ಆಗಮಿಸಿದ್ದು, ಡಿಂಪಲ್​ ಕ್ವೀನ್ ರಚಿತಾ ರಾಮ್​ ಹಾಗೂ ಕ್ರೇಜಿ ಸ್ಟಾರ್​ ರವಿಚಂದ್ರನ್​ ಜಡ್ಜಸ್​ ಸೀಟ್​ ಅನ್ನು​ ಅಲಂಕರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us