/newsfirstlive-kannada/media/post_attachments/wp-content/uploads/2025/04/daali.jpg)
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೇ ಶೋನಲ್ಲಿ 10 ಮಂದಿ ಬ್ಯಾಚುಲರ್ಸ್ ಗಳಿಗೆ 10 ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ವಾರದಿಂದ ವಾರಕ್ಕೆ ಬ್ಯಾಚುಲರ್ಸ್ಗಳು ಚೇಂಚ್ ಆಗ್ತಿದ್ದಾರೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ ಚೆಲುವಿ ಪಾತ್ರಕ್ಕೆ ಭಾರೀ ಡಿಮ್ಯಾಂಡ್.. 2 ಸೀರಿಯಲ್ನಲ್ಲೂ ಅಶ್ವಿನಿಗೆ ಬೇಡಿಕೆ!
ಈ ವಾರ ಬ್ಯಾಚುಲರ್ಸ್ಗಳಿಗೆ ಹೊಸ ಚಾಲೆಂಜ್ ಎದುರಾಗಿದೆ. ಅದುವೇ ಲವ್ ಕೆಮಿಸ್ಟ್ರಿ ರೌಂಡ್. ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡ್ಕೊಂಡಿದ್ದಾರೆ ಅಂತ ಈ ರೌಂಡ್ ಮೂಲಕ ಗೊತ್ತಾಗಲಿದೆ.
ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಡಾಲಿ ಧನಂಜಯ್ ತಂಡ ಆಗಮನವಾಗಿದೆ. ಹೌದು, ಡಾಲಿ ಧನಂಜಯ್ ನಿರ್ಮಾಣ ಮಾಡಿರುವ 'ವಿದ್ಯಾಪತಿ' ಸಿನಿಮಾ ತಂಡದವರು ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ವಿದ್ಯಾಪತಿ ಸಿನಿಮಾದ ನಟ ನಾಗಭೂಷಣ್ ಹಾಗೂ ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ ನಟಿ ಮಲೈಕಾ ವೇದಿಕೆ ಮತ್ತಷ್ಟು ಮೆರಗು ತಂದಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಬಂದಿದ್ದ ಡಾಲಿ ಧನಂಜಯ್ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಖತ್ ಫೇಮಸ್ ಆಗಿದ್ದ ಸುಕೃತಾ ನಾಗ್ ಜೊತೆಗೆ ಧನಂಜಯ್ ಡ್ಯಾನ್ಸ್ ಮಾಡಿದ್ದಾರೆ. ಡಾಲಿ ಮಸ್ತ್ ಡ್ಯಾನ್ಸ್ ನೋಡುತ್ತಿದ್ದಂತೆ ನಾಗಭೂಷಣ್ ಈ ತರ ಡ್ಯಾನ್ಸ್ ಮಾಡ್ತಾನೆ ಅಂತ ಗೊತ್ತಿರಲಿಲ್ಲ ಅಂತ ಹೇಳಿದ ಕೂಡಲೇ ಎಲ್ಲರೂ ಬಿದ್ದುಬಿದ್ದು ನಕ್ಕಿದ್ದಾರೆ. ಅಲ್ಲದೇ ಕಾರ್ಯಕ್ರಮದಲ್ಲಿ ನೆರೆದಿದ್ದ ಜಡ್ಜಸ್ ಕೂಡ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ